Sangeetha sringeri: ಕಾರ್ತಿಕ್ ಅಲ್ಲ.. ಬಿಗ್ ಬಾಸ್ ಸ್ಪರ್ಧಿ, ನಟಿ ಸಂಗೀತಾ ಶೃಂಗೇರಿ ಮದುವೆ ಆಗೋದು ಇವರನ್ನೇ!!
ನಟಿ ಸಂಗೀತಾ ಶೃಂಗೇರಿ ಸಿನಿಮಾಗಳಿಗಿಂತ ಹೆಚ್ಚಾಗಿ ಬಿಗ್ ಬಾಸ್ ಶೋನಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು.. ಚಾರ್ಲಿ ಸಿನಿಮಾದ ಮೂಲಕ ಮಿಂಚಿದ್ದ ಈ ಚೆಲುವೆ ಸದ್ಯ ಮಾರಿಗೋಲ್ಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..
ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿ ಟಾಪ್ 3 ಕಂಟೆಸ್ಟಂಟ್ ಆಗಿದ್ದರು.. ಆ ದೊಡ್ಮನೆಯಲ್ಲಿ ಸಿಂಹಿಣಿ ಅಂತಾನೇ ಫೇಮ್ ಪಡೆದುಕೊಂಡು ಎಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿ ನಿಂತಿದ್ದರು..
ಬಿಗ್ ಬಾಸ್ ಮನೆಯಲ್ಲಿ ವಿನ್ನರ್ ಕಾರ್ತಿಕ್ ಹಾಗೂ ಸಂಗೀತಾ ಆರಂಭದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು.. ಇವರಿಬ್ಬರೂ ಮನೆಯಿಂದ ಹೊರಬರುವಷ್ಟರಲ್ಲಿ ಜೋಡಿಗಳಾಗಿರುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದರು.. ಆದರೆ ಆಗಿದ್ದೆ ಬೇರೆ.. ಇಬ್ಬರ ಮದ್ಯ ಮನಸ್ಥಾಪಗಳು ಹೆಚ್ಚಾಗಿ ಮಾತೇ ಬಿಟ್ಟಿದ್ದರು..
ಇನ್ನು ಇತ್ತೀಚೆಗೆ ನಟಿ ಸಂಗೀತಾ ಮಾರಿ ಗೋಲ್ಡ್ ಚಿತ್ರದ ಪ್ರಮೋಷನ್‌ಗೆ ಹೋದಾಗ ತಮ್ಮ ಬಾಯ್‌ಫ್ರೆಂಡ್ ಯಾರು ಎಂದು ಹೇಳಿಕೊಂಡಿದ್ದಾರೆ.. ಆ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
ಹೌದು ನಟಿ ಸಂಗೀತಾ ಶೃಂಗೇರಿ ವೇದಿಕೆ ಮೇಲೆ ತಮ್ಮೊಂದಿಗೆ ಪೋಟೋ ತೆಗೆಸಿಕೊಳ್ಳಲು ಬಂದಿದ್ದ ಪುಟ್ಟ ಬಾಲಕನ್ನು ತೋರಿಸಿ ನೀವು ನಾನು ಯಾರನ್ನ ಮದುವೆ ಆಗ್ತೀನಿ ಕೇಳುತ್ತಾ ಇದ್ರಿ ಈಗ ನೋಡಿ ಇವರನ್ನೇ ನಾನು ಮದುವೆ ಆಗೋದು ಎಂದು ಹೇಳಿ ಕಾಮಿಡಿ ಮಾಡಿದ್ದಾರೆ..