Karthik Mahesh: ಬಿಗ್‌ಬಾಸ್‌ ವಿನ್ನರ್, ನಟ ಕಾರ್ತಿಕ್‌ ಮಹೇಶ್‌ ತಂದೆ ಇವರೇ! ಇಲ್ಲಿದೆ ಅಪರೂಪದ ಫ್ಯಾಮಿಲಿ ಪೋಟೋ!!

Thu, 02 May 2024-12:38 pm,

ಕಾರ್ತಿಕ್‌ ಮಹೇಶ್‌ಗೆ ಬಾಲ್ಯದಿಂದಲೂ ನಟನೆ ಮಾಡುವ ಕನಸೊಂದಿತ್ತು.. ಹೀಗಾಗಿ ಅವರು ಮಾಡೆಲಿಂಗ್‌ ಮಾಡುತ್ತಾ ಹಲವಾರು ಸಿರೀಯಲ್‌ ಆಡಿಷನ್‌ಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು.. ಬಳಿಕ ಖುಷಿ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು..   

ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿದ ಕಾರ್ತಿಕ್‌ ಮಹೇಶ್‌ ಬಿಗ್‌ಬಾಸ್‌ ಶೋನಲ್ಲಿ ಭಾಗವಹಿಸುವ ಮೂಲಕ ದೊಡ್ಡ ಖ್ಯಾತಿ ಪಡೆದರು.. ಇಷ್ಟೇ ಅಲ್ಲ ವಿನ್ನರ್‌ ಪಟ್ಟ ಗೆದ್ದು ಅತ್ಯುತ್ತಮ ಸ್ಪರ್ಧಿ ಎನಿಸಿಕೊಂಡರು..   

ಇನ್ನು ನಟ ಕಾರ್ತಿಕ್‌ ಮಹೇಶ್‌ ಮೂಲತಃ ಮೈಸೂರಿನವರು ಇವರ ತಂದೆ ಹೆಸರು ಮಹೇಶ್..‌ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳಿಗೆ ತಮ್ಮ ಮನಸ್ಸಲ್ಲಿ ಮುಚ್ಚಿಟ್ಟಿರುವ ನೋವನ್ನು ಶೇರ್‌ ಮಾಡುವ ಅವಕಾಶವೊಂದನ್ನು ನೀಡಲಾಗಿತ್ತು..   

ಆ ಸಮಯದಲ್ಲಿ ಸ್ಪರ್ಧಿ ಕಾರ್ತಿಕ್‌ ಮಹೇಶ್‌ ತಮ್ಮ ತಂದೆ ಅನಾರೋಗ್ಯ ಹಾಗೂ ಅವರ ಸಾವಿನ ಕುರಿತಾದ ಕೆಲವು ವಿಚಾರಗಳನ್ನು ಹೇಳಿಕೊಂಡಿದ್ದರು.. ಹೌದು ಬಿಗ್‌ಬಾಸ್‌ ಮನೆಗೆ ಕಾಲಿಟ್ಟಾಗಲೇ ಕಾರ್ತಿಕ್‌ ಮಹೇಶ್‌ ತಮ್ಮ ತಂದೆ ತೀರಿ ಹೋಗಿದ್ದಾರೆ ಎಂದು ಹೇಳಿಕೊಂಡಿದ್ದರು..   

ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 10ರ ವಿನ್ನರ್‌ ಆಗಿರುವ ಕಾರ್ತಿಕ್‌ ಮಹೇಶ್‌ ಶೋನಿಂದ 50 ಲಕ್ಷ ರೂಪಾಯಿ ಜೊತೆ ಮಾರುತಿ ಸುಜುಕಿ ಬ್ರೆಜಾ ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಪಡೆದುಕೊಂಡಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link