Bigg Boss Kannada Season 11: ಬಿಗ್‌ಬಾಸ್‌ನ ಫಿನಾಲೆ ಲಿಸ್ಟ್ ಲೀಕ್!!ಈ ಬಾರಿಯ ವಿನ್ನರ್ ಇವರೇ?
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಯಾರು ಇರ್ತಾರೆ ಅನ್ನೋದರ ಬಗ್ಗೆ ಸುದ್ದಿ ವೈರಲ್ ಆಗ್ತಾ ಇದೆ. ಮೂಲಗಳಿಂದ ತಿಳಿದ ಪ್ರಕಾರ ಕೆಲವು ಸ್ಪರ್ಧಿಗಳೇ ಈ ಫಿನಾಲೆಯಲ್ಲಿ ಇರ್ತಾರೆ ಅನ್ನೋ ಸುದ್ದಿ ವೈರಲ್ ಆಗುತ್ತಿದೆ. ಹಾಗಾದ್ರೆ ಬಿಗ್ ಬಾಸ್ ಮನೆಯಲ್ಲಿ ಯಾವ ಸ್ಪರ್ಧಿ ಇರ್ತಾರೆ ಅನ್ನೋ ಪ್ರಶ್ನೆ ನಿಮ್ಮಲ್ಲಿಯೂ ಮೂಡಿರಬಹುದು. ವೈರಲ್ ಆಗಿರೋ ಸುದ್ದಿ ಪ್ರಕಾರ, ಈಗ ಫಿನಾಲೆಯಲ್ಲಿ ಯಾರೆಲ್ಲ ಇರುತ್ತಾರೆ ಅನ್ನೋದರ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು, ಚೈತ್ರಾ ಕುಂದಾಪುರ, ರಜತ್, ತ್ರಿವಿಕ್ರಮ್, ಭವ್ಯಾ ಗೌಡ, ಮೋಕ್ಷಿತಾ ಪೈ, ಗೌತಮಿ ಜಾದವ್, ಧನರಾಜ್ ಆಚಾರ್ ಹಾಗೂ ಹನುಮಂತು ಒಟ್ಟು 9 ಜನರು ಇದ್ದಾರೆ.
ಇದೀಗ ಬಿಗ್ ಬಾಸ್ ಮನೆಯಲ್ಲಿರುವ ಇಷ್ಟು ಜನರ ಪೈಕಿ ಯಾರು ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಡ್ತಾರೆ ಅನ್ನೋದನ್ನ ನೋಡುವುದಾದರೆ, ಬಿಗ್ ಬಾಸ್ ಫೈನಲ್‌ಗೆ ಎಂಟ್ರಿ ಕೊಡುವುದು ಕೇವಲ ನಾಲ್ಕು ಜನರು. ಈ ನಾಲ್ಕು ಜನರ ಪೈಕಿ ಮೊದಲಿಗೆ ಕೇಳಿ ಬರುತ್ತಿರುವ ಹೆಸರು ಯಾರದ್ದು? ಉಗ್ರಂ ಮಂಜು, ಗೌತಮಿ ಅಥವಾ ಮೋಕ್ಷಿತಾ ಅಲ್ಲವೇ ಅಲ್ಲ... ಹಾಗಾದ್ರೆ ಇನ್ಯಾರ ಹೆಸರಿರುತ್ತೆ? ಇದರ ಬಗ್ಗೆ ಎಲ್ಲಾ ಕಡೆಯಿಂದಲೂ ಪೋಲಿಂಗ್ ಆಗ್ತಾ ಇದೆ. ಇದರ ಜೊತೆಗೆ ಸಮೀಕ್ಷೆಯನ್ನು ನಡೆಸಿ ಬಿಗ್ ಬಾಸ್ ಮನೆಯಲ್ಲಿ ಯಾರು ಇರುತ್ತಾರೆ ಅಂತಾ ನೋಡಲಾಗುತ್ತಿದೆ.
ಮೂಲಗಳ ಪ್ರಕಾರ ಮೊದಲಿಗೆ ಕೇಳಿ ಬರುತ್ತಿರುವ ಹೆಸರು ಉತ್ತರ ಕರ್ನಾಟಕದ ಪ್ರತಿಭೆ, ಕರುನಾಡ ಜನರ ಮನ ಗೆದ್ದಿರುವ ಹನುಮಂತ ಲಮಾಣಿ. ಹೌದು, ಗ್ರ್ಯಾಂಡ್ ಫಿನಾಲೆ ಲಿಸ್ಟ್‌ನಲ್ಲಿ ಮೊದಲಿಗೆ ಹನುಮಂತನ ಹೆಸರು ಕೇಳಿ ಬರ್ತಾ ಇದೆಯಂತೆ. ಇವರ ನಂತರ ಯಾರು ಇರ್ತಾರೆ ಅನ್ನೋದನ್ನ ನೋಡುವುದಾದರೆ, ಆ ಲಿಸ್ಟ್‌ನಲ್ಲಿ ತ್ರಿವಿಕ್ರಮ್ ಹೆಸರು ಕೇಳಿಬರ್ತಿದೆ. ಯಾಕಂದ್ರ ತ್ರಿವಿಕ್ರಮ್ ತುಂಬಾ ಬಿಗ್ ಬಾಸ್‌ನಲ್ಲಿ ನೀಡುವ ಟಾಸ್ಕ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅಗ್ರೆಸಿವ್‌ನೆಸ್ ಹೊರತುಪಡಿಸಿದರೆ ಅವರ ಆಟ ಜನರಿಗೆ ಇಷ್ಟವಾಗಿದೆ. ಹೀಗಾಗಿ ಅವರು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡುತ್ತಾರೆ ಅಂತಾ ಹೇಳಲಾಗುತ್ತಿದೆ.
ಈ ಲಿಸ್ಟ್‌ನಲ್ಲಿ ಕೇಳಿಬರುತ್ತಿರುವ 3ನೇ ಹೆಸರು ಉಗ್ರ ಮಂಜು ಮತ್ತು 4ನೇ ಹೆಸರು ರಜತ್. ಮತ್ತೊಂದು ಲಿಸ್ಟ್ ಪ್ರಕಾರ, ಹನುಮಂತು, ತ್ರಿವಿಕ್ರಮ್, ಧನರಾಜ್ ಮತ್ತು ಭವ್ಯಾ ಗೌಡರ ಹೆಸರು ಕೇಳಿ ಬರ್ತಿದೆ. ಹನುಮಂತ ನಾರ್ಮಲ್ ಆಗಿ ಹೇಗಿರುತ್ತಾರೋ ಅದೇ ರೀತಿ ಇದ್ದಾನೆ. ಹೀಗಾಗಿ ಹನುಮಂತ ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿದೆ. ಯಾಕಂದ್ರೆ ಹನುಮಂತ ಸಿನಿಮಾ ಅಥವಾ ಸೀರಿಯಲ್ ಇಂಡಸ್ಟ್ರಿ ಮಂದಿ ಜೊತೆಗೆ ಬೆರೆಯುವ ವ್ಯಕ್ತಿ ಅಲ್ಲ. ಆತನಲ್ಲಿ ಹಾಡುವ ಪ್ರತಿಭೆ ಇದೆ. ಸಂಗೀತ ಕ್ಷೇತ್ರದಲ್ಲಿಯೇ ಆತ ಏನಾದರೂ ಸಾಧನೆ ಮಾಡಲಿ ಅನ್ನೋದರ ಜನರ ಅಪೇಕ್ಷೆಯಾಗಿದೆ.
ಒಬ್ಬ ಕುರಿಗಾಹಿ ಮತ್ತೆ ಒಬ್ಬ ಸಾಮಾನ್ಯ ವ್ಯಕ್ತಿ ಗೆಲ್ಲಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿದೆ. ಹೀಗಾಗಿ ಈ ಬಾರಿ ಹನುಮಂತನೇ ಬಿಗ್ ಬಾಸ್ ವಿನ್ನರ್ ಆಗಬೇಕು ಅಂತಾ ಬಹುತೇಕರು ಶುಭ ಹಾರೈಸುತ್ತಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 9 ಜನ ಸ್ಪರ್ಧಿಗಳಿದ್ದಾರೆ. ಅಂತಿಮವಾಗಿ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡುವ ಸ್ಪರ್ಧಿ ಯಾರು? ವಿನ್ನರ್ ಯಾರು? ಅನ್ನೋದರ ಬಗ್ಗೆ ಬಿಗ್ ಬಾಸ್ ನಿರ್ಧರಿಸಲಿದ್ದಾರೆ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬೇಕು..? ಯಾರಿಗೆ ಟ್ರೋಫಿ ನೀಡುವುದು ಸೂಕ್ತ ಅನ್ನೋದರ ಬಗ್ಗೆ ಕಾಮೆಂಟ್ ಮಾಡಿ ನಮಗೆ ತಿಳಿಸಿರಿ.