BBK 11: ಕನ್ನಡ ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಫೋಟೋ ಲೀಕ್.. ಮೊದಲು ಮನೆಗೆ ಎಂಟ್ರಿ ಕೊಡೋರು ಇವರೇ !
ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಓಪನಿಂಗ್ ಇದೇ ಸೆಪ್ಟೆಂಬರ್ 29 ರಂದು ನಡೆಯಲಿದೆ. ಬಿಗ್ ಬಾಸ್ ಆರಂಭಕ್ಕೆ ಕೇವಲ ಎರಡೇ ಎರಡು ದಿನ ಬಾಕಿಯಿರುವಾಗ ಸ್ಪರ್ಧಿಗಳ ಫೋಟೋ ಲೀಕ್ ಆಗಿದೆ.
ಕಲರ್ಸ್ ಕನ್ನಡ ವಾಹಿನಿಯೇ ಪ್ರೋಮೋದಲ್ಲಿ ಕೆಲವು ಸ್ಪರ್ಧಿಗಳ ಬ್ಲರ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ.
ಈ ಬಾರಿಯೂ 17 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರುವ ನಿರೀಕ್ಷೆ ಇದೆ. ಅದಕ್ಕೂ ಮೊದಲು ಸ್ಪರ್ಧಿಗಳ ಮುಖವನ್ನು ಬ್ಲರ್ ಮಾಡಿ ಪ್ರೋಮೋ ಮೂಲಕ ತೋರಿಸಲಾಗಿದೆ. ಸೆಪ್ಟೆಂಬರ್ 28ರಂದು ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡುವುದಾಗಿ ಕಲರ್ಸ್ ಕನ್ನಡ ವಾಹಿನಿ ತಿಳಿಸಿತು.
ರಾಜಾ ರಾಣಿ ಫಿನಾಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಹೆಸರು ರಿವೀಲ್ ಆಗಲಿದೆ. ಆದರೆ ಈಗ ಅದಕ್ಕೂ ಮೊದಲೇ ಪ್ರೋಮೋ ರಿಲೀಸ್ ಆಗಿದ್ದು, ಸ್ಪರ್ಧಿಗಳ ಮುಖವನ್ನು ಬ್ಲರ್ ಮಾಡಿ ತೋರಿಸಲಾಗಿದೆ.
ಈ ಬಾರಿ ಬಿಗ್ ಬಾಸ್ 11ನೇ ಸೀಸನ್ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಸರ್‌ಪ್ರೈಸ್ ಎಲಿಮೆಂಟ್‌ಗಳನ್ನು ಹೊಂದಿದೆ. ನರಕ ಹಾಗೂ ಸ್ವರ್ಗ ಎಂದು ಎರಡು ಮನೆಗಳು ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಇರಲಿವೆ.
ಕೆಂಪು ಲೈಟಿನ ಕತ್ತಲೆಯ ಪ್ರೋಮೊದಲ್ಲಿ ಕೆಲ ಸ್ಪರ್ಧಿಗಳ ಮುಖವನ್ನು ಅಸ್ಪಷ್ಟವಾಗಿ ತೋರಿಸಲಾಗಿದೆ. ಇದನ್ನು ನೆಟ್ಟಿಗರು ಡಿಕೋಡ್ ಮಾಡಿದ್ದಾರೆ.
ನಟಿ ಭಾವನಾ ಮೆನನ್ ಮತ್ತು ನಟಿ ಹರಿಪ್ರಿಯಾ ಈ ಪ್ರೋಮೋದಲ್ಲಿದ್ದಾರೆ ಎಂದು ನೆಟ್ಟಿಗರು ಅಂದಾಜಿಸಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯ ತನ್ವಿ ರಾವ್, ಸತ್ಯ ಧಾರವಾಹಿ ಖ್ಯಾತಿಯ ಗೌತಮಿ ಜಾಧವ್, ಕನ್ನಡತಿ ಸೀರಿಯಲ್ ನಟ ಕಿರಣ್ ರಾಜ್ ಪ್ರೋಮೋದಲ್ಲಿದ್ದಾರೆ ಎಂದು ಡಿಕೋಡ್ ಮಾಡಲಾಗಿದೆ.
ರೀಲ್ಸ್ ಮೂಲಕ ಖ್ಯಾತಿ ಪಡೆದ ಭೂಮಿಕ ಬಸವರಾಜ್, ನಭಾ ನಟೇಶ್ ಮತ್ತು ಓರ್ವ ರೈತ ಕೂಡ ಇದ್ದು ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.