ಸಿಕ್ಕಾಪಟ್ಟೆ TRP ಬಂದಿದ್ರೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಶಾಕ್! ಇನ್ನೊಂದೆರಡು ವಾರಗಳಲ್ಲಿ ನಿಂತೋಗುತ್ತಾ ಷೋ?
ಕನ್ನಡ ಕಿರುತೆರೆಯಲ್ಲಿ ಈಗ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್. ಟಿಆರ್‌ಪಿ ವಿಷಯದಲ್ಲೂ ಬಿಗ್ ಬಾಸ್ ಸಿಕ್ಕಾಪಟ್ಟೆ ಫೇಮಸ್. ಆದ್ರೂ ಏಕೋ ಏನೋ ಈ ಸಲದ ಬಿಗ್ ಬಾಸ್ ಶೋನಲ್ಲಿ ನಾನಾ ರೀತಿಯ ಕಿರಿಕ್ ಆಗುತ್ತಿದೆ. ಬಿಗ್ ಬಾಸ್ ಶೋ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿವೆ. ಜನ ಕಾರ್ಯಕ್ರಮ ನೋಡುತ್ತಿದ್ದರಾದರೂ ಬೈದುಕೊಂಡು ನೋಡುತ್ತಿದ್ದಾರೆ. ಇದೆಲ್ಲದರ ಪರಿಣಾಮ ಬಿಗ್ ಬಾಸ್ ಷೋ ಇನ್ನೊಂದು ಎರಡು ವಾರಗಳಲ್ಲಿ ನಿಂತು ಹೋಗಬಹುದು ಎಂದು ಹೇಳಲಾಗುತ್ತದೆ.
ಈ ಸಲದ ಬಿಗ್ ಬಾಸ್ ತುಂಬಾ ಡಿಫರೆಂಟ್ ಆಗಿರಬೇಕು ಎನ್ನುವ ಕಾರಣಕ್ಕೆ ನರಕ-ಸ್ವರ್ಗದ ಕಾನ್ಸೆಪ್ಟ್ ಮಾಡಲಾಗಿತ್ತು. ಮಹಿಳಾ ಕಂಟೆಸ್ಟಂಟ್ ಗಳನ್ನು ನರಕಕ್ಕೆ ಕಳಿಸಿದ್ದರ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಹಿಳಾ ಕಂಟೆಸ್ಟ್ ಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ ಎಂದು ಆರೋಪ ಮಾಡಲಾಗಿತ್ತು.
ಲಾಯರ್ ಜಗದೀಶ್, ಹಂಸ ಮತ್ತಿತರರ ಕಾರಣಕ್ಕೆ ‘ಬೇಕು ಅಂತಾನೆ ಕಿರಿಕ್’ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿತ್ತು. ಲಾಯರ್ ಜಗದೀಶ್ ‘ಅದ್ಹೇಗೆ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತೋ ನೋಡೇ ಬಿಡ್ತೀನಿ’ ಅಂತಾ ಅಬ್ಬರಿಸಿದ್ದರು. ಬಿಗ್ ಬಾಸ್ ಕಾರ್ಯಕ್ರಮ ಸಭ್ಯತೆಯ ಎಲ್ಲೆ ಮೀರುತ್ತಿದೆ ಎಂದು ಎಲ್ಲಡೆ ಚರ್ಚೆಯಾಗುತ್ತಿತ್ತು.
ಇನ್ನೊಬ್ಬ ವಿವಾದಿತ ವ್ಯಕ್ತಿ ಚೈತ್ರಾ ಕುಂದಾಪುರ ಆಡಿದ ‘ಒಬ್ಬ ಅಪ್ಪನಿಗೆ ಹುಟ್ಟಿದ್ರೆ…’ ಎನ್ನುವ ಮಾತು ವಿವಾದ ಉಂಟುಮಾಡಿ ನಿರೂಪಕ ಸುದೀಪ್ ಸ್ಪಷ್ಟಿಕರಣ ಕೊಡಬೇಕಾಯ್ತು.
ಬಿಗ್ ಬಾಸ್ ಷೋ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ಮುಂದಿನ ಸೀಸನ್ ಅನ್ನು ತಾನು ನಡೆಸಿಕೊಡುವುದಿಲ್ಲ ಎಂದು ಹೇಳಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು.
ಮೇಲಾಗಿ ಬಿಗ್ ಬಾಸ್ ಶೋ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದು ಕಲರ್ಸ್ ಕನ್ನಡ ವಾಹಿನಿಯ ಮ್ಯಾನೇಜ್ಮೆಂಟ್ ಗೆ ಕಿರಿ ಕಿರಿ ಉಂಟುಮಾಡಿದೆ. ಸಿಕ್ಕಾಪಟ್ಟೆ ಟಿಆರ್‌ಪಿ ಬರುತ್ತಿದ್ದರೂ ಬಿಗ್ ಬಾಸ್ ಶೋ ಘನತೆ ಹಾಳಾಗುತ್ತಿದೆ ಎನ್ನುವ ಚಿಂತೆ ಕೂಡ ಕಲರ್ಸ್ ಕನ್ನಡ ವಾಹಿನಿಯ ಆಡಳಿತ ಮಂಡಳಿಯನ್ನು ಕಾಡುತ್ತಿದೆ.
ಬಿಗ್ ಬಾಸ್ ಶೋ ಇದೇ ರೀತಿ ನಡೆದರೆ ಮುಂದಿನ ಸೀಸನ್ ಗೆ ಕಂಟೆಸ್ಟಂಟ್ ಗಳನ್ನು ಹುಡುಕುವುದೇ ಕಷ್ಟ ಆಗುತ್ತದೆ ಎನ್ನುವ ಚಿಂತೆ ಕೂಡ ಶುರುವಾಗಿದೆ. ಇದೆಲ್ಲಾ ಕಾರಣಕ್ಕೆ ತಕ್ಷಣವೇ ಬಿಗ್ ಬಾಸ್ ಷೋ ನಿಲ್ಲಿಸಿ, ಹೊಸ ನಿರೂಪಕನೊಂದಿಗೆ, ಹೊಸ ಕಾನ್ಸೆಪ್ಟ್ ಮಾಡಿಕೊಂಡು ಹೊಸ ರೀತಿಯಲ್ಲಿ ಹೊಸ ಸೀಸನ್ ಮಾಡುವ ಬಗ್ಗೆ ಪ್ಲಾನಿಂಗ್ ನಡೆಯುತ್ತಿದೆ ಎಂದು ತಿಳಿದುಬಂದಿದೆ.