BBK10 Karthik Votes: ಕಾರ್ತಿಕ್ ಪಡೆದ ವೋಟ್‌ ಎಷ್ಟು ಕೋಟಿ.. ಬಿಗ್‌ ಬಾಸ್‌ ವಿನ್ನರ್‌ - ರನ್ನರ್‌ ವೋಟ್ಸ್‌ ರಿವೀಲ್‌ ಮಾಡಿದ ಸುದೀಪ್

Mon, 29 Jan 2024-1:28 am,

ಕನ್ನಡದ ಜನಪ್ರಿಯ​ ರಿಯಾಲಿಟಿ ಶೋ ಬಿಗ್ ಬಾಸ್​ ಸೀಸನ್​ 10 ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿತ್ತು.

ಜಗಳ, ಕಾಂಟ್ರವರ್ಸಿಗಳಿಂದ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿತ್ತು.

ಡೊಳ್ಳು ನಟ ಕಾರ್ತಿಕ್​ ಮಹೇಶ್​ ಬಿಗ್ ಬಾಸ್​ ಮನೆಗೆ ಕೊನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು, ಬಳಿಕ ತಮ್ಮ ಆಟದ ಮೂಲಕ ಜನರ ಮನಸ್ಸಿಗೆ ಹತ್ತಿರವಾದರು.

ಸೋಶಿಯಲ್ ಮೀಡಿಯಾದಲ್ಲಿ ಕಾರ್ತಿಕ್ ಮಹೇಶ್​ ಗೆಲ್ಲಬೇಕು ಎಂಬ ಅಭಿಯಾನವೇ ಶುರುವಾಗಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಅತಿ ಹೆಚ್ಚು ವೋಟ್ ಪಡೆದು ಕಾರ್ತಿಕ್ ವಿನ್ನರ್‌ ಆಗಿದ್ದಾರೆ. 

ಇನ್ನೂ ಡ್ರೋನ್‌ ಪ್ರತಾಪ್‌ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಮೊದಲ ರನ್ನರ್‌ ಅಪ್‌ ಆಗಿದ್ದಾರೆ.

ಬಿಗ್‌ ಬಾಸ್ ಗ್ರಾಂಡ್‌ ಫಿನಾಲೆ ವೇದಿಕೆ ಮೇಲೆ ವಿಜೇತರ ಹೆಸರು ಘೋಷಣೆಗೂ ಮುನ್ನ ಕಿಚ್ಚ ಸುದೀಪ್‌ ವಿನ್ನರ್‌ ಮತ್ತು ರನ್ನರ್‌ ಪಡೆದ ವೋಟ್‌ ರಿವೀಲ್‌ ಮಾಡಿದರು. 

ಬಿಗ್‌ ಬಾಸ್ ಕನ್ನಡ 10 ರ ವಿನ್ನರ್‌ ಕಾರ್ತಿಕ್‌ ಮಹೇಶ್‌ 2,97,39,904 ವೋಟ್‌ ಪಡೆದು ವಿಜೇತರಾಗಿದ್ದಾರೆ. 

ಬಿಗ್ ಬಾಸ್ ಕನ್ನಡ ಸೀಸನ್ 10 ರ ಮೊದಲ ರನ್ನರ್‌ ಅಪ್‌ ಡ್ರೋನ್‌ ಪ್ರತಾಪ್‌ 2,20,04,202 ಮತಗಳನ್ನು ಪಡೆದಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link