Bigg Boss OTT : ಶೀಘ್ರದಲ್ಲೇ ಬಿಗ್ ಬಾಸ್ ಒಟಿಟಿ ಹೊಸ ಸೀಸನ್‌ ಶುರು.. ದಿನಾಂಕ ಮತ್ತು ಸಮಯ ಇಲ್ಲಿ ತಿಳಿಯಿರಿ!

Tue, 09 Apr 2024-1:32 pm,

ಅಭಿಮಾನಿಗಳು ಬಿಗ್‌ ಬಾಸ್‌ ಹೊಸ ಸೀಸನ್‌ ಗಾಗಿ ಸದ್ಯ ಕಾದು ಕುಳಿತಿದ್ದಾರೆ. ಈ ಬಗ್ಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಬಂದಿದೆ. 

ಬಿಗ್‌ ಬಾಸ್‌ ಒಟಿಟಿ ಕಾರ್ಯಕ್ರಮದ ಪ್ರೀಮಿಯರ್ ದಿನಾಂಕ ಮತ್ತು ಸಮಯಕ್ಕೆ ಸಂಬಂಧಿಸಿದ ಕೆಲವು ವಿಚಾರಗಳು ವೈರಲ್‌ ಆಗುತ್ತಿವೆ. ಇದು 'ಬಿಗ್ ಬಾಸ್' ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. 

ಬಿಗ್ ಬಾಸ್ ಹಿಂದಿ OTT ಸೀಸನ್ 3 ಶೀಘ್ರದಲ್ಲೇ ಪ್ರಸಾರವಾಗಲಿದೆ ಎನ್ನಲಾಗಿದೆ. ವರದಿಯ ಪ್ರಕಾರ, ಬಿಗ್ ಬಾಸ್ ಹಿಂದಿ OTT ಸೀಸನ್ 3 ಮುಂದಿನ ತಿಂಗಳು ಅಂದರೆ ಮೇ ತಿಂಗಳಲ್ಲಿ ಶುರುವಾಗಲಿದೆ.

ಪ್ರೀಮಿಯರ್ ದಿನಾಂಕ ಮೇ 15 ಎಂದು ಹೇಳಲಾಗುತ್ತದೆ. ಬಿಗ್ ಬಾಸ್ ಹಿಂದಿ OTT ಸೀಸನ್ 3 ಕುರಿತು ಮತ್ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. 

ಹಲವಾರು ಪ್ರಸಿದ್ಧ ಸೆಲೆಬ್ರಿಟಿಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂಬ ವದಂತಿಗಳಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link