`ಯಾರ ಕಾಮೆಂಟ್, ವಿಡಿಯೋ ನಂಬೇಡಿ` Bigg Boss ಕುರಿತ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದ ಸುದೀಪ್

Tue, 15 Oct 2024-2:21 pm,

Sudeep new tweet about Bigg Boss: ಬಿಗ್‌ಬಾಸ್‌ ಅಭಿಮಾನಿಗಳ ಎಲ್ಲ ಗೊಂದಲಗಳಿಗೆ ಕಿಚ್ಚ ಸುದೀಪ್‌ ಮತ್ತೊಂದು ಟ್ವೀಟ್‌ ಮೂಲಕ ತರೆ ಎಳೆದಿದ್ದಾರೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಿ ಎರಡು ವಾರಗಳು ಕಳೆದಿವೆ. ಈ ಮಧ್ಯೆ ಸುದೀಪ್‌ ಇದೇ ತಮ್ಮ ಬಿಗ್‌ ಬಾಸ್‌ ಕೊನೆಯ ಸೀಸನ್‌ ಎಂದು ಘೋಷಿಸಿಯೇ ಬಿಟ್ಟಿದ್ದಾರೆ.

ಬಿಗ್‌ಬಾಸ್‌ ಅಭಿಮಾನಿಗಳ ಎಲ್ಲ ಗೊಂದಲಗಳಿಗೆ ಕಿಚ್ಚ ಸುದೀಪ್‌ ಮತ್ತೊಂದು ಟ್ವೀಟ್‌ ಮೂಲಕ ತರೆ ಎಳೆದಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. 

ಬಿಗ್‌ಬಾಸ್‌ ಅಭಿಮಾನಿಗಳ ಎಲ್ಲ ಗೊಂದಲಗಳಿಗೆ ಕಿಚ್ಚ ಸುದೀಪ್‌ ಮತ್ತೊಂದು ಟ್ವೀಟ್‌ ಮೂಲಕ ತರೆ ಎಳೆದಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. 

ನನ್ನ ಟ್ವೀಟ್ ನೋಡಿ ಎಲ್ಲರೂ ತೋರಿಸಿದ ಪ್ರೀತಿ, ಬೆಂಬಲವನ್ನು ನಾನು ಮೆಚ್ಚುವೆ. ವಾಹಿನಿ ಹಾಗೂ ನನ್ನ ಮಧ್ಯೆ ಏನೋ ನಡೆದಿದೆ ಎಂದು ಬಿಂಬಿಸುವಂತೆ ಕೆಲವರು ವಿಡಿಯೋ ಮಾಡುತ್ತಿದ್ದಾರೆ, ಕಾಮೆಂಟ್ ಮಾಡುತ್ತಿದ್ದಾರೆ. 

ನಾನು ವಾಹಿನಿ ಜೊತೆ ದೊಡ್ಡ ಪ್ರಯಾಣ ಮಾಡಿದ್ದೇನೆ, ಪಾಸಿಟಿವ್ ಜರ್ನಿಯಿತ್ತು. ಇದರ ಜೊತೆಗೆ ಅಗೌರವ ಎನ್ನುವ ಪದ ಇರಬಾರದು. ನಾನು ಬಿಗ್ ಬಾಸ್ ಬಿಟ್ಟೆ ಎನ್ನುವ ವಿಷಯದ ಹಿಂದೆ ಇದ್ದ ಊಹೆಗಳು ಆಧಾರರಹಿತವಾಗಿವೆ.

ಅಷ್ಟೇ ಅಲ್ಲದೆ ಸಮರ್ಥನೆಯ ಕೊರತೆಯಿದೆ. ನಾನು ಮಾಡಿದ ಟ್ವೀಟ್ ನೇರ, ಪ್ರಾಮಾಣಿಕವಾಗಿದೆ. ಕಲರ್ಸ್ ಜೊತೆಗೆ ಇರುವ ನನ್ನ ಸಂಬಂಧ ಅದ್ಭುತವಾಗಿದೆ. ವಾಹಿನಿಯು ನನ್ನನ್ನು ಯಾವಾಗಲೂ ಗೌರವದಿಂದ ನಡೆಸಿಕೊಂಡಿದ್ದಾರೆ. 

ನಿರ್ದೇಶಕ ಪ್ರಕಾಶ್ ನಂಬಲಾಗದಷ್ಟು ಪ್ರತಿಭಾವಂತ ಮತ್ತು ಶಕ್ತಿಯುತ ವ್ಯಕ್ತಿ. ಅವರ ಮೇಲೆ ನನಗೆ ಉತ್ತಮ ಗೌರವ ಇದೆ. ನನ್ನ ತಂಡದಲ್ಲಿರುವವರ ಮೇಲೆ ಅನಗತ್ಯ ಆರೋಪ ಬಂದಾಗ ಸುಮ್ಮನೆ ಕುಳಿತು ಆನಂದಿಸುವವನು ನಾನಲ್ಲ.

ಈ ರೀತಿ ಬರೆದ ನಟ ಕಿಚ್ಚ ಸುದೀಪ್‌ ಹೊಸ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ಸುದೀಪ್‌ ಮತ್ತು ಬಿಗ್‌ ಬಾಸ್ ತಂಡದ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎಂಬ ಅನುಮಾನಗಳಿೆ ಖುದ್ದು ಸುದೀಪ್‌ ತೆರೆ ಎಳೆದಿದ್ದಾರೆ. 

ಸುದೀಪ್‌ ಬಳಿಕ ಬಿಗ್‌ ಬಾಸ್‌ ಹೋಸ್ಟ್‌ ಯಾರು ಮಾಡಲಿದ್ದಾರೆಂಬ ಚರ್ಚೆ ಕೂಡ ನಡೆಯತ್ತಿದೆ. ಈ ರೇಸ್‌ನಲ್ಲಿ ನಟ ರಮೇಶ್‌ ಅರವಿಂದ್‌, ಡಾ.ಶಿವರಾಜ್‌ ಕುಮಾರ್‌, ಗೋಲ್ಡನ್‌ ಸ್ಟಾರ್‌ ಗಣೇಶ್, ರಿಷಬ್ ಶೆಟ್ಟಿ, ರಕ್ಷಿತ್‌ ಶೆಟ್ಟಿ ಮತ್ತು ಡಾಲಿ ಧನಂಜಯ್‌ ಕೇಳಿಬರುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link