ಇವರೇ ನೋಡಿ ಈ ಬಾರಿ ಬಿಗ್ ಬಾಸ್‌ ಹೌಸ್‌ ಪ್ರವೇಶಿಸಲಿರುವ 8 ಸ್ಪರ್ಧಿಗಳು..!

Thu, 26 Sep 2024-5:34 pm,

'ಬಿಗ್ ಬಾಸ್' ವಿಜಯ್ ಟಿವಿಯಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ಮನರಂಜನಾ ಕಾರ್ಯಕ್ರಮವಾಗಿದೆ.  

ಕನ್ನಡ, ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಸೇರಿ ಹೀಗೆ ಎಲ್ಲಾ ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದೆ.  

ವಿಶ್ವನಾಯಕ ಕಮಲ್ ಹಾಸನ್ ಮೊದಲ ಸೀಸನ್‌ನಿಂದ 7ನೇ ಸೀಸನ್‌ವರೆಗೆ ತಮಿಳಿನಲ್ಲಿ ಈ ಕಾರ್ಯಕ್ರಮವನ್ನು ಉತ್ಸಾಹದಿಂದ ನಡೆಸಿಕೊಡುತ್ತಿದ್ದರು.   

ಹಲವಾರು ವಿವಾದಗಳ ಹೊರತಾಗಿಯೂ, ಕಮಲ್ ಹಾಸನ್ ಅವರು ಬಿಗ್ ಬಾಸ್ ಉತ್ತಮ ಹೋಸ್ಟ್ ಎಂದರೆ ತಪ್ಪಾಗಲಾರದು. ಆದರೆ ಕಾರಣಾಂತರದಿಂದ ಕಮಲ್‌ ಈ ಬಾರಿ ಬಿಗ್‌ಬಾಸ್‌ ನಿರೂಪಣೆ ಮಾಡುತ್ತಿಲ್ಲ.  

ಈ ಬಾರಿ ಜನಪ್ರಿಯ ನಟ ವಿಜಯ್ ಸೇತುಪತಿ ಬಿಗ್ ಬಾಸ್ ತಮಿಳು ಸೀಸನ್ 8 ಅನ್ನು ಹೋಸ್ಟ್ ಮಾಡಲು ರೆಡಿಯಾಗಿದ್ದಾರೆ. ಬಹು ನಿರೀಕ್ಷಿತ ಸೀಸನ್ 8ರಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳು ಲಿಸ್ಟ್‌ ಸಹ ಬಹಿರಂಗವಾಗಿದೆ..  

ಬಿಡುಗಡೆಯಾದ ಪಟ್ಟಿಯ ಪ್ರಕಾರ ಖುರೇಷಿ, ಅರುಣ್ ಪ್ರಸಾದ್, ಶಾಲಿನ್ ಜೋಯಾ, ಸೆಂಥಿಲ್, ರಿಯಾಜ್ ಖಾನ್, ಪೂನಂ ಬಾಜ್ವಾ, ಜಗನ್, ರಂಜಿತ್, ಅಮಲಾ ಶಾಜಿ, ಸಂಯುಕ್ತ ವಿಶ್ವನಾಥನ್, ಪ್ರೀತಿ ಮುಕುಂದನ್, ಟಿಡಿಎಫ್ ವಾಸನ್, ಜಾಕ್ವೆಲಿನ್, ರವೀಂದರ್ ಚಂದ್ರಶೇಖರ್, ಪವಿತ್ರಾ ಜನನಿ, ಅಂಶಿತಾ, ವಿನೋದ್ ಬಾಬು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ  

ಈ ಸೀಸನ್‌ನಲ್ಲಿ ಏನಾಗುತ್ತದೆ ಮತ್ತು ವಿಜಯ್ ಸೇತುಪತಿ ಸ್ಪರ್ಧಿಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ 8 ಅಕ್ಟೋಬರ್ 6 ರಂದು ಅದ್ಧೂರಿಯಾಗಿ ಆರಂಭವಾಗಲಿದೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link