ಒಂದೇ ದಿನ ರಿವೀಲ್ ಆಯ್ತು ʼಬಿಗ್ʼ ನ್ಯೂಸ್... ಔಟ್ ಆಗ್ತಾರೆ ಎಂದು ಕೊಂಡವರೇ ಫೈನಲ್‌ಗೆ ಗ್ರಾಂಡ್ ಎಂಟ್ರಿ! ಫೈನಲಿಸ್ಟ್ ಅಂದ್ಕೊಂಡಿದ್ದ ಸ್ಪರ್ಧಿಯೇ ಔಟ್!
ಬಿಗ್ ಬಾಸ್ ತೆಲುಗು ಸೀಸನ್ 8 ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಬಿಗ್ ಬಾಸ್ ಮನೆಯಿಂದ ಅವಿನಾಶ್ ಹೊರತಾಗಿ ಯಾರು ಹೊರ ಹೋಗಲಿದ್ದಾರೆ ಎಂಬುದು ಇನ್ನೇನು ಗೊತ್ತಾಗಲಿದೆ. ಮತದಾನ ಪ್ರಕ್ರಿಯೆಯಲ್ಲಿ ಯಾರು ಅಗ್ರಸ್ಥಾನದಲ್ಲಿದ್ದಾರೆ? ಡೇಂಜರ್ ಝೋನ್‌ನಲ್ಲಿ ಯಾರಿದ್ದಾರೆ? ಯಾರು ವಿನ್ನರ್? ಈ ಎಲ್ಲಾ ವಿಚಾರಗಳ ಬಗ್ಗೆ ಇಲ್ಲಿ ತಿಳಿಯೋಣ.
ಬಿಗ್ ಬಾಸ್ ತೆಲುಗು ಸೀಸನ್ 8 ಅಂತಿಮ ಹಂತ ತಲುಪಿದೆ. ಮುಂದಿನ ವಾರ ಡಿಸೆಂಬರ್ 15 ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಪ್ರಸ್ತುತ ಬಿಗ್ ಬಾಸ್ ತೆಲುಗು ಸೀಸನ್ 8 ಈ ವಾರ ಅವಿನಾಶ್ ಹೊರತುಪಡಿಸಿ ಎಲ್ಲರೂ ಅಂದರೆ ನಬೀಲ್, ಪ್ರೇರಣಾ, ವಿಷ್ಣುಪ್ರಿಯಾ, ನಿಖಿಲ್, ಗೌತಮ್, ರೋಹಿಣಿ ನಾಮಿನೇಟ್ ಆಗಿದ್ದಾರೆ.
ಗ್ರ್ಯಾಂಡ್ ಫಿನಾಲೆ ಟಿಕೆಟ್ ರೇಸ್ ನಲ್ಲಿ ಗೆದ್ದು ಫೈನಲ್ ತಲುಪುವ ಮೂಲಕ ಅವಿನಾಶ್ ಪಾರಾಗಿದ್ದಾರೆ. ಹಾಗಾಗಿ ಈ ವಾರ ಅಂದರೆ 14ನೇ ವಾರದಲ್ಲಿ ನಬೀರ್, ಪ್ರೇರಣಾ, ವಿಷ್ಣುಪ್ರಿಯಾ, ಗೌತಮ್, ನಿಖಿಲ್ ಮತ್ತು ರೋಹಿಣಿ ಅವರಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ ಗೌತಮ್ 23.52 ಪರ್ಸೆಂಟ್ ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನಿಖಿಲ್ 21 ಪರ್ಸೆಂಟ್ ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಬೀಲ್ ಶೇ.16ರಷ್ಟು ಅಂಕ ಪಡೆದು ಮೂರನೇ ಸ್ಥಾನದಲ್ಲಿದ್ದು, ಪ್ರೇರಣಾ ಶೇ.13ರಷ್ಟು ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿಷ್ಣುಪ್ರಿಯಾ ಶೇ.12.67 ಮತ್ತು ರೋಹಿಣಿ ಶೇ.12.14ರಷ್ಟು ಡೇಂಜರ್ ಝೋನ್‌ನಲ್ಲಿದ್ದಾರೆ. ಅಂದರೆ ರೋಹಿಣಿ ಅಥವಾ ವಿಷ್ಣುಪ್ರಿಯಾರಲ್ಲಿ ಒಬ್ಬರು ಈ ವಾರ ಎಲಿಮಿನೇಟ್ ಆಗಲಿದ್ದಾರೆ.
ಈ ವಾರದ ಎಲಿಮಿನೇಷನ್ ಪಕ್ಕಕ್ಕಿಟ್ಟರೆ ಗೌತಮ್ ಫೈನಲ್ ಫೈಟ್ ನಲ್ಲಿ ವಿನ್ನರ್ ಆಗುವ ಸಾಧ್ಯತೆ ಹೆಚ್ಚಿದೆಯಂತೆ. ಏಕೆಂದರೆ ಪ್ರಸ್ತುತ ವೋಟಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿರುವ ನಿಖಿಲ್ ಗಿಂತ ಅವರು ತುಂಬಾ ಲೀಡ್‌ನಲ್ಲಿದ್ದಾರೆ.