BBK 10: ಫಿನಾಲೆ ಸಮೀಪದಲ್ಲೇ ರಿವೀಲ್ ಆಯ್ತು Bigg Boss ವಿನ್ನರ್ ಹೆಸರು: ಮತ್ತೆ ಪುರುಷ ಸ್ಪರ್ಧಿಯೇ ಟ್ರೋಫಿ ವಿಜೇತ..!!

Tue, 16 Jan 2024-6:08 am,

ಕನ್ನಡ ಕಿರುತೆರೆಯಲ್ಲಿ ಹೊಸ ಟ್ರೆಂಡ್ ಶುರು ಮಾಡಿರುವ ಬಿಗ್ ಬಾಸ್ ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಕಳೆದ ವಾರ ನೋ ಎಲಿಮಿನೇಷನ್ ರೌಂಡ್ ಆಗಿದ್ದು, ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ ಎಂಬ ಮಾತುಗಳ ಸ್ಪರ್ಧಿಗಳ ಬಾಯಲ್ಲೇ ಕೇಳಿಬರುತ್ತಿದೆ.

ಇನ್ನೊಂದೆಡೆ ಕಳೆದ ಕೆಲ ವಾರಗಳಲ್ಲಿ ಸಂಗೀತಾ ಶೃಂಗೇರಿ ಮೇಲೆ ಫ್ಯಾನ್ಸ್ ಬೆಂಬಲಗಳ ಸುರಿಮಳೆ ಹರಿಸಿದ್ದರು. ಅಂತೆಯೇ ಅದ್ಭುತವಾಗಿ ವೀಕ್ ಪೂರ್ತಿ ಆಡಿ, ಫಿನಾಲೆ ಟಿಕೆಟ್ ಕೂಡ ಪಡೆದಿದ್ದರು.

ಆದರೆ ಫಿನಾಲೆಯಲ್ಲಿ ಈ ಸ್ಪರ್ಧಿಯೇ ವಿನ್ನರ್ ಆಗೋದು ಎಂದನಿಸುತ್ತಿದೆ. ಇದಕ್ಕೆ ಕಾರಣ, ಆ ಸ್ಪರ್ಧಿ ಟ್ವಿಟ್ಟರ್’ನಲ್ಲಿ ಟಾಪ್ ಅಲ್ಲಿ ಟ್ರೆಂಡಿಂಗ್’ನಲ್ಲಿ ಇರೋದು. ಮೊದಲ ಬಾರಿಗೆ ಇಷ್ಟೊಂದು ಕ್ರಿಯೇಟ್ ಮಾಡಿದ್ದು ಈ ಸ್ಪರ್ಧಿಯೇ ಎಂದನಿಸುತ್ತದೆ.

ಇನ್ನು ಈ ಸ್ಪರ್ಧಿ ಬೇರಾರೂ ಅಲ್ಲ, ಕಾರ್ತಿಕ್ ಮಹೇಶ್. ಟ್ವಿಟ್ಟರ್’ನಲ್ಲಿ ಟ್ರೆಂಡಿಂಗ್’ನಲ್ಲಿ ಇದ್ದ ಕಾರ್ತಿಕ್ ಬಿಗ್ ಬಾಸ್ ಮನೆಯಲ್ಲಿ ಅದ್ಭುತವಾಗಿ ಆಟವಾಡುತ್ತಿದ್ದಾರೆ.

ತನ್ನ ತಾಳ್ಮೆ, ಸಹನೆ, ಸ್ನೇಹದಿಂದಲೇ ಹೆಸರು ಮಾಡಿದ ಕಾರ್ತಿಕ್ ಈ ಬಾರಿ ಟೈಟಲ್ ವಿನ್ನರ್ ಆಗೋದು ಪಕ್ಕಾ ಎಂದನಿಸುತ್ತಿದೆ.

ಆರಂಭದಿಂದ ಇದುವರೆಗೆ ಕನ್ಸಿಸ್ಟೆನ್ಸಿ ಕಾಯ್ದುಕೊಂಡು ಬರುತ್ತಿರುವ ಕಾರ್ತಿಕ್’ಗೆ ಅಪಾರ ಫ್ಯಾನ್ಸ್ ಬಳಗವಿದೆ. ಆದರೆ ಕಳೆದ ವಾರ ಪೂರ್ತಿ, ಸಂಗೀತಾ ಶೃಂಗೇರಿ ಗೆಲ್ಲಬೇಕು ಎಂದು ಹೇಳುತ್ತಿದ್ದ ನೆಟ್ಟಿಗರು, ಇದೀಗ ಕಾರ್ತಿಕ್ ಗೆಲುವಿಗೆ ಕಾಯುತ್ತಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್ ಮತ್ತು ಟಿಕೆಟ್ ಟು ಫಿನಾಲೆ ಗೆದ್ದ ಬಳಿಕ ಸಂಗೀತಾ ಜಂಬ ತೋರಿಸುತ್ತಿದ್ದಾರೆ. ಈ ವರ್ತನೆ ಇಷ್ಟವಾಗುತ್ತಿಲ್ಲ ಎಂದು ನೆಟಿಜನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link