ನಾನೇ ಸ್ಟ್ರಾಂಗ್ದ್ ಅಂತಿದ್ದ ಸ್ಪರ್ಧಿಗಳೆಲ್ಲಾ ಟುಸ್ ಪಟಾಕಿ... ʼಶಕ್ತಿಗಿಂತ ಯುಕ್ತಿ ಮೇಲುʼ ಅಂದ ಇವರೇ ಅಂತೆ ಈ ಬಾರಿಯ ಬಿಗ್ ಬಾಸ್ ಸೀಸನ್ 11ರ ವಿನ್ನರ್
ಫೈನಲ್‌ಗೆ 40 ದಿನಗಳಷ್ಟೇ ಬಾಕಿ ಇದೆ. ಮೊನ್ನೆಯಷ್ಟೇ ಆರಂಭವಾದಂತೆ ಭಾಸವಾಗುವ ಬಿಗ್ ಬಾಸ್ ಅದಾಗಲೇ 60 ದಿನಗಳನ್ನು ದಾಟುತ್ತಿದೆ. ಈ ಎಲ್ಲದರ ಮಧ್ಯೆ ನಾನೇ ಸ್ಟ್ರಾಂಗ್ ಅಂತಿದ್ದ ಘಟಾನುಘಟಿಗಳೆಲ್ಲಾ ಆಗ್ಲೇ ಗಂಟು ಮೂಟೆ ಕಟ್ಟಿ ಮನೆಗೆ ನಡೆದಾಗಿದೆ.
ಇನ್ನೊಂದೆಡೆ ಉಳಿದಿರುವ 40 ದಿನಗಳಲ್ಲಿ ಯಾರು ವಿನ್ನರ್ ಆಗ್ತಾರೆ ಅಂದ್ರೆ ಒಂದಷ್ಟು ಮಂದಿ ತ್ರಿವಿಕ್ರಮ್ ಹೆಸರನ್ನು ಸೂಚಿಸ್ತಿದ್ದಾರೆ. ಆದ್ರೆ ಇವರ ಶಕ್ತಿಯ ಮುಂದೆ ಮತ್ತೋರ್ವ ಸ್ಪರ್ಧಿಯ ಯುಕ್ತಿ ಪ್ರಭಾವ ಬೀರುತ್ತಿರುವುದು ಹೇಳಲೇಬೇಕಾದ ಸಂಗತಿ.
ಮೊದಲ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಕಾಲಿಟ್ಟ ಹನುಮಂತ, ಮೊದಮೊದಲು ಈ ಕಾರ್ಯಕ್ರಮಕ್ಕೆ ಸೂಟ್ ಆಗಲ್ಲ ಅಂತಾ ಹೇಳಲಾಗ್ತಿತ್ತು. ಆದರೆ ಬರಬರುತ್ತಾ ತನ್ನ ಚಾಣಾಕ್ಷತನವನ್ನು ತೋರಿಸುತ್ತಾ, ಪ್ರತಿಭೆ ಅನಾವರಣಗೊಳಿಸುತ್ತಾ ಉತ್ತಮವಾಗೇ ಆಟವಾಡುತ್ತಾ ಬಂದರು.
ಅಷ್ಟೇ ಅಲ್ಲದೆ, ಕ್ಯಾಪ್ಟನ್ ಕೂಡ ಆಗಿದ್ರು. ಇನ್ನು ಹನುಮಂತ ಮನೆಯೊಳಗೆ ಬಂದಾಗ ಕೊಂಚ ಗೊಂದಲಕ್ಕೀಡಾಗಿದ್ದು ಎಲ್ಲರೂ ಗಮನಿಸಿದ್ದ ಸಂಗತಿ. ಆದರೆ ಆ ಸಂದರ್ಭದಲ್ಲಿ ಸಹಸ್ಪರ್ಧಿ ಧನರಾಜ್ ಆಚಾರ್ಯ ಹನುಮಂತು ಅವರಿಗೆ ಬಹಳಷ್ಟು ಸಹಾಯ ಮಾಡಿರುವುದನ್ನು ಒಪ್ಪಲೇಬೇಕು.
ಇನ್ನು ಸದ್ಯ ತನ್ನ ತುಂಟಾಟ, ಮುಗ್ಧತೆ, ಚಾಣಾಕ್ಷತನದಿಂದಲೇ ಜನಮನ ಗೆದ್ದಿರುವ ಹನುಮಂತು ಅವರನ್ನು ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಎನ್ನಲಾಗುತ್ತಿದೆ. ಅಂತೆಯೇ ಬಿಗ್ ಬಾಸ್ ವೀಕ್ಷಕರು ಹನುಮಂತು ನೈಜತೆಯನ್ನಿಟ್ಟುಕೊಂಡು ಆಡುತ್ತಿದ್ದಾನೆ, ಯಾವುದೇ ಮುಖವಾಡ ಆತ ಧರಿಸಿಲ್ಲ, ಈ ಬಾರಿ ಈತ ವಿನ್ನರ್ ಆಗೋದು ಫಿಕ್ಸ್ ಎಂದೆಲ್ಲಾ ಮಾತನಾಡುತ್ತಿದ್ದಾರೆ.
ಒಟ್ಟಾರೆಯಾಗಿ ದೊಡ್ಮನೆ ಆಟ ಅದಾಗಲೇ 60 ದಿನ ದಾಟಿದೆ. ಇನ್ನುಳಿದಿರುವುದು 40 ದಿನಗಳಷ್ಟೇ.. ಈ ದಿನಗಳಲ್ಲಿ ಯಾರು ದೊಡ್ಮನೆಯಲ್ಲಿ ಉಳಿಯುತ್ತಾರೆ? ಯಾರು ವಾರಾಂತ್ಯದಲ್ಲಿ ಗೇಟ್‌ಪಾಸ್ ಪಡೆಯುತ್ತಾರೆ? ಎಂಬುದನ್ನು ಕಾದುನೋಡಬೇಕಿದೆ.