ಮೈ ಮೇಲೆ ಸದಾ 2 ಕೋಟಿ ಮೌಲ್ಯದ ಚಿನ್ನ ಧರಿಸಿಕೊಂಡು ಓಡಾಡುವ ಗೋಲ್ಡ್ ಸುರೇಶ್ ಬಿಗ್ ಬಾಸ್ ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ?

Mon, 07 Oct 2024-1:01 pm,

ಗೋಲ್ಡ್ ಸುರೇಶ್ ಕುತ್ತಿಗೆಯಲ್ಲಿ ಎರಡು ದೊಡ್ಡ ಚಿನ್ನದ ಸರಗಳು,ಕೈಯಲ್ಲಿ  ಬ್ರೇಸ್ ಲೈಟ್ ಮತ್ತು ಉಂಗುರವನ್ನು ಧರಿಸಿಕೊಂಡೇ ಇರುತ್ತಾರೆ. ಇವರು ಸದಾ ಮೈ ಮೇಲೆ 2 ಕೋಟಿ ಮೌಲ್ಯದ ಚಿನ್ನವನ್ನು ಧರಿಸುತ್ತಾರೆ.

ಗೋಲ್ಡ್ ಸುರೇಶ್ ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನ್ ಉದ್ಯಮದ ಸ್ಥಾಪಕರು. ಬೆಂಗಳೂರಿನ ಮೂಲೆ ಮೂಲೆಯಿಂದ ಜನರು ತಮ್ಮ ಇಂಟೀರಿಯರ್ ಕೆಲಸ ಮಾಡಿಕೊಳ್ಳಲು ಗೋಲ್ಡ್ ಸುರೇಶ್ ಬಳಿ ಬರುತ್ತಾರೆ.

ಸ್ವಂತ ಬಲದ ಮೇಲೆ ಬೆಂಗಳೂರಿನಂತಹ ನಗರದಲ್ಲಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿದ್ದಾರೆ.  ಇಂದು ಗೋಲ್ಡ್ ಸುರೇಶ್ ಒಟ್ಟು ಆಸ್ತಿ ಮೌಲ್ಯವು ಕೋಟಿಗಳಲ್ಲಿದೆ.ಹುಟ್ಟು ಸಿರಿವಂತನಾಗದಿದ್ದರೂ ಈ ಹಂತ ತಲುಪಿರುವ ರೀತಿ ನಿಜಕ್ಕೂ ಶ್ಲಾಘನೀಯ.  

ಗೋಲ್ಡ್ ಸುರೇಶ್ ಆದಾಯಕ್ಕೆ ಹಲವು ಮೂಲಗಳಿವೆ. ಗೋಲ್ಡ್ ಸುರೇಶ್ ನಿವ್ವಳ ಆದಾಯದ ದೊಡ್ಡ ಮೂಲ ಅವರ ಇಂಟಿರಿಯರ್ ಬಿಸಿನೆಸ್. ಇದರಿಂದ ಅವರು ಪ್ರತಿ ತಿಂಗಳು ಅಂದಾಜು 10 ಲಕ್ಷ ರೂ.ಗಳಿಸುತ್ತಾರೆ ಎನ್ನಲಾಗಿದೆ. 

ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ.ಅವರು ಸುಮಾರು 47.6K  ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಯೂಟ್ಯೂಬ್‌ನಿಂದ ಉತ್ತಮ ಮೊತ್ತವನ್ನು ಗಳಿಸುತ್ತಾರೆ .

ಗೋಲ್ಡ್ ಸುರೇಶ್ ಗೆ  ದುಬಾರಿ ಕಾರುಗಳೆಂದರೆ ಕೂಡಾ ಭಾರೀ ಒಲವು. 40 ಲಕ್ಷ ರೂ ಮೌಲ್ಯದ ಫಾರ್ಚೂನರ್,26 ಲಕ್ಷ ರೂ ಮೌಲ್ಯದ ಇನ್ನೋವಾ ಕ್ರಿಸ್ಟಾ, 9.60 ಲಕ್ಷ ರೂ ಮೌಲ್ಯದ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಹೊಂದಿದ್ದಾರೆ.       

ಇಂಥಹ ಗೋಲ್ಡ್ ಸುರೇಶ್ ಬಿಗ್ ಬಾಸ್ ಕಾರ್ಯಕ್ರಮದಿಂದ ದಿನಕ್ಕೆ 30ರಿಂದ 35 ಸಾವಿರ ರೂ.ವರೆಗೆ ಸಂಭಾವನೆ ಪಡೆಯುತ್ತಾರೆಯಂತೆ. ಅಂದರೆ ವಾರಕ್ಕೆ ಸರಿಸುಮಾರು 2 ಲಕ್ಷ ರೂಪಾಯಿ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link