ಗೂಳಿ ಮಾತ್ರವಲ್ಲ.. ನಾಯಿಗೂ ಈ ಬಣ್ಣ ಕಂಡರೇ ಕೋಪ! ರಸ್ತೆಯಲ್ಲಿ ಓಡಾಡುವಾಗ ಹುಷಾರ್!!
ನಾಯಿ ತುಂಬಾ ಪ್ರೀತಿಯ ಮತ್ತು ಮುದ್ದು ಪ್ರಾಣಿ. ಅದನ್ನು ನೀವು ಹೇಗೆ ನೋಡಿಕೊಳ್ಳುತ್ತಿರೋ ಅದು ನಿಮ್ಮನ್ನು ಹಾಗೇಯೇ ಪ್ರೀತಿ ಮಾಡುತ್ತದೆ..
ಆದರೆ ಕೆಲವೊಮ್ಮೆ ನಾಯಿಗಳು ತುಂಬಾ ಕ್ರೂರವೇಷವನ್ನು ತಾಳುತ್ತವೆ.. ಇದರ ಹಿಂದೆ ನಾನಾ ಕಾರಣಗಳಿವೆ. ಆದರೆ ಇದೀಗ ಸಂಶೋಧನೆಯೊಂದರಿಂದ ಆಘಾತಕಾರಿ ವಿಷಯ ಹೊರಬಿದ್ದಿದೆ.
ಗೂಳಿ ಕೆಂಪು ಬಣ್ಣವನ್ನು ನೋಡಿ ಕೋಪಗೊಂಡು ಆ ಬಣ್ಣದ ಹಿಂದೆ ಓಡುವಂತೆ, ನಾಯಿಯು ಈ ಬಣ್ಣವನ್ನು ನೋಡಿ ಕೋಪಗೊಳ್ಳುತ್ತೆ ಎಂದು ವರದಿಯೊಂದು ಬಹಿರಂಗವಾಗಿದೆ..
ನಾಯಿಗಳು ಕಪ್ಪು ಬಣ್ಣವನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಅವು ಕಪ್ಪು ಬಣ್ಣವನ್ನು ನೋಡಿ ಬೊಗಳುತ್ತವೆ..
ಕಪ್ಪು ಬಣ್ಣ, ವಸ್ತುಗಳು ಅಥವಾ ನೆರಳುಗಳು ನಿಗೂಢವಾದದ್ದನ್ನು ಸೂಚಿಸುತ್ತವೆ. ಇದರಿಂದಾಗಿ ನಾಯಿಗಳು ಕಪ್ಪು ಬಣ್ಣವನ್ನು ಇಷ್ಟಪಡುವುದಿಲ್ಲ ಎಂದು ತಿಳಿದುಬಂದಿದೆ. ಆದರೆ ಇದು ಎಲ್ಲಾ ನಾಯಿಗಳಿಗೂ ಅನ್ವಯಿಸುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.