ಸಾಸಿವೆ, ಮೆಂತ್ಯೆ ಅಲ್ಲ ಈ ಪುಟ್ಟ ಬೀಜವನ್ನು ಬಳಸಿ ನೋಡಿ, ಬಿಳಿ ಕೂದಲು ಬುಡದಿಂದಲೇ, ಶಾಶ್ವತವಾಗಿ ಕಪ್ಪಾಗುವುದು!
ಬಿಳಿ ಕೂದಲು ಕಂಡ ತಕ್ಷಣ ಅದನ್ನು ಡೈ ಮಾಡುವ ಅಥವಾ ಕಲರ್ ಮಾಡುವ ಅವಶ್ಯಕತೆ ಇಲ್ಲ. ಅದರ ಬದಲಾಗಿ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲನ್ನು ಶಾಶ್ವತ ಕಪ್ಪು ಬಣ್ಣಕ್ಕೆ ತಿರುಗಿಸಬಹುದು.ಅದಕ್ಕಾಗಿ ಈ ಪುಟ್ಟ ಬೀಜಗಳನ್ನು ಬಳಸಿದರೆ ಸಾಕು.
ಬಿಳಿ ಕೂದಲನ್ನು ಕಪ್ಪಾಗಿಸಲು ತೆಂಗಿನೆಣ್ಣೆಯಲ್ಲಿ ಕರಿ ಜೀರಿಗೆ ಅಥವಾ ಕಪ್ಪು ಜೀರಿಗೆಯನ್ನು ಬಳಸಬಹುದು. ತೆಂಗಿನೆಣ್ಣೆ ಮತ್ತು ಕರಿಜೀರಿಗೆ ಕೂದಲಿಣ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.
ಕರಿ ಜೀರಿಗೆ ಕೊಬ್ಬಿನಾಮ್ಲಗಳು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇದು ತಲೆಹೊಟ್ಟು ಮತ್ತು ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತದೆ. ಇದರೊಂದಿಗೆ ಕೂದಲಿನ ಬೆಳವಣಿಗೆಗೂ ಸಹಕಾರಿ.ತೆಂಗಿನ ಎಣ್ಣೆಯು ನೆತ್ತಿಯನ್ನು ಪೋಷಿಸುತ್ತದೆ.
ಬೇಕಾಗುವ ಸಾಮಗ್ರಿಗಳು : 1 ಕಪ್ ತೆಂಗಿನ ಎಣ್ಣೆ 2 ರಿಂದ 3 ಟೀಚಮಚ ಕರಿ ಜೀರಿಗೆ
ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಮೊದಲು ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ನಂತರ ಕರಿಜೀರಿಗೆ ಬೀಜಗಳನ್ನು ಅದಕ್ಕೆ ಹಾಕಿ 5 ರಿಂದ 10 ನಿಮಿಷಗಳ ಕಾಲ ಕುದಿಸಿ.ಈ ಎಣ್ಣೆ ಚೆನ್ನಾಗಿ ಕಾದ ಬಳಿಕ ಅದನ್ನು ತಣ್ಣಗಾಗಿಸಿ ಮತ್ತು ಸೋಸಿಕೊಳ್ಳಿ.
ನೆತ್ತಿ ಮತ್ತು ಕೂದಲಿಗೆ ಈ ಎಣ್ಣೆಯನ್ನು ಹಚ್ಚಿ, ರಾತ್ರಿಯಿಡೀ ಕೂದಲಿನಲ್ಲಿ ಹಾಗೆಯೇ ಬಿಡಿ. ಬೆಳಿಗ್ಗೆ, ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.ಈ ಎಣ್ಣೆಯನ್ನು ವಾರಕ್ಕೆ 2-3 ಬಾರಿ ಬಳಸಿ.ಕ್ರಮೇಣ ಕೂದಲು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.
ತೆಂಗಿನೆಣ್ಣೆ ಮತ್ತು ಕಲೋಂಜಿಯ ಮಿಶ್ರಣವು ಬೂದು ಕೂದಲನ್ನು ಕಪ್ಪಾಗಿಸಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.ಆದರೆ, ಈ ಪದಾರ್ಥಗಳಿಂದ ಅಲರ್ಜಿ ಇದ್ದರೆ ಬಳಸುವ ಮುನ್ನ ಎಚ್ಚರ ವಹಿಸಿ.