ಬಾಲ್ಯದಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಭಾರತೀಯ ಸಿನಿ ನಟ-ನಟಿಯರು..!

Fri, 08 Mar 2024-11:11 pm,

ಅನುರಾಗ್ ಸಿಂಗ್ ಕಶ್ಯಪ್ ಪ್ರಸಿದ್ಧ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. ಇವರು 11 ವರ್ಷದವರಿದ್ದಾಗ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.    

ಹಿರಿಯ ವ್ಯಕ್ತಿಯಿಂದ ತಮಗಾದ ಕೆಟ್ಟ ಅನುಭವವನ್ನು ಕಂಗನಾ ರಣಾವತ್ ಬಹಿರಂಗ ಪಡಿಸಿದ್ದಾರೆ. ತನಗಿಂತ ಹಿರಿಯ ವ್ಯಕ್ತಿಯೊಬ್ಬ ತನ್ನ ದೇಹವನ್ನು ಕೆಟ್ಟದಾಗಿ ಸ್ಪರ್ಶಿಸಿದ್ದಾಗಿ ಕೇಳಿಕೊಂಡಿದ್ದರು.   

ತಾಪ್ಸೀ ಪನ್ನು ಬಾಲಿವುಡ್‌ನ ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರು. ಕಾಲೇಜು ದಿನಗಳಲ್ಲಿ ಬಸ್ಸಿನಲ್ಲಿ ನಿರಂತರ ದೈಹಿಕ ಕಿರುಕುಳ ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.     

ಬಿಟೌನ್‌ ಸುಂದರಿ ದೀಪಿಕಾ ಪಡುಕೋಣೆ ಬಾಲಿವುಡ್‌ನ ಸೂಪರ್‌ಸ್ಟಾರ್ ನಟಿ. ಬೀದಿಯಲ್ಲಿ ಈಕೆಗೆ ಕಿರುಕುಳ ನೀಡಲಾಯಿತು ಎಂದು ನಟಿ ಈ ಹಿಂದೆ ಬಹಿರಂಗಪಡಿಸಿದ್ದರು.     

ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಕ್ಷಯ್ ಕುಮಾರ್ ಒಬ್ಬರು. 6 ವರ್ಷದವನಾಗಿದ್ದಾಗ ಲಿಫ್ಟ್ ಮ್ಯಾನ್ ನಿಂದ ಕೆಟ್ಟ ಅನುಭವವಾಗಿದೆ ಎಂದು ಅಕ್ಷಯ್ ಹೇಳಿಕೊಂಡಿದ್ದರು.  

ಸೋನಂ ಕಪೂರ್ ಬಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. 13 ವರ್ಷದವಳಿದ್ದಾಗ ತಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ಈ ಹಿಂದೆ ಬಹಿರಂಗಪಡಿಸಿದ್ದರು.     

ಫಾತಿಮಾ ಸನಾ ಶೇಖ್ ತನ್ನ ಚಿಕ್ಕ ವಯಸ್ಸಿನಲ್ಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ನಟಿ ಕೇವಲ 3 ವರ್ಷದವಳಿದ್ದಾಗ ಈ ಕ್ರೌರ್ಯಕ್ಕೆ ಒಳಗಾಗಬೇಕಾಯಿತು ಎಂದು ಹೇಳಿಕೊಂಡಿದ್ದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link