Kangana Ranaut: ಸೋಮನಾಥ್ ದೇವಾಲಯಕ್ಕೆ ಭೇಟಿ ನೀಡಿದ ಕಂಗನಾ ರನೌತ್
ನಟಿ ಕಂಗನಾ ಅಭಿನಯನದ ತೇಜಸ್ ಸಿನಿಮಾದ ಕಳೆದವಾರವಷ್ಟೇ ರಿಲೀಸ್ ಆದರೂ, ಅಷ್ಟು ಸಕ್ಸ್ಸ್ ಕಾಣಲಿಲ್ಲ. ಆ ಕಥೆಯ ತಕ್ಕ ಹಾಗೆ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡಲಿಲ್ಲ.
ಸದ್ಯ ಈ ನಟಿ ತಮ್ಮ ಕೆಲಸಗಳ ಮಧ್ಯೆ ಬ್ರೇಕ್ ಪಡೆದು, ಗುಜರಾತ್ನ ಸೋಮನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ನಟಿ ಕಂಗನಾ ಸೋಮನಾಥದಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದು ಬಳಿಕ, ಶ್ರೀಕೃಷ್ಣ ಮೋಕ್ಷ ಭೂಮಿಗೆ ತೆರೆಳಿದ್ದರು.
ಕಂಗನಾ ಸೋಮನಾಥದ ದೇವಾಲಯಕ್ಕೆ ಅಲ್ಲಿಯ ಸ್ಟಾಫ್ಗಳ ಸಹಾಯದಿಂದ ಭೇಟಿ ನೀಡಿ, ದೇವರ ದರ್ಶನವನ್ನು ಪಡೆದುಕೊಂಡಿದ್ದಾರೆ.
ಕಂಗನಾ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಸಂತೋಷವಾಗಿದ್ದಾರೆ. ಹಾಗೆ ಅವರಿಗೆ ಸಹಾಯ ಮಾಡಿದ ಸ್ಟಾಫ್ಗಳಿಗೆ ಕೃತಜ್ಞತೆಯನ್ನು ಸಹ ತಿಳಿಸಿದ್ದಾರೆ.
ನಟಿ ಕಂಗನಾ ಸೋಮನಾಥ ದೇವಾಲಯದಲ್ಲಿ ಗ್ರಾಂಡ್ ಹಸಿರು ಬಣ್ಣದ ಚೂಡಿದಾರ್, ಹಾಗೂ ಗೋಲ್ಡ್ ಕಲರ್ ಆಭರಣವನ್ನು ಧರಿಸಿ ಮಿಂಚುತ್ತಿದ್ದರು. ಹಾಗೆಯೇ ಕಪ್ಪು ಬಣ್ಣದ ಕೂಲಿಂಗ್ ಗ್ಲಾಸ್ ಹಾಕಿದ್ದರು.
ಬಾಲಿವುಡ್ ಬೆಡಗಿ ಕಂಗನಾ ಈ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದಕ್ಕೆ 87 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದೊಕೊಂಡಿದ್ದಾರೆ.