Rekha Life Story: ನಟಿ ರೇಖಾ ಮೊದಲ ಪತಿ ಈ ಸ್ಟಾರ್ ನಟ.. ಎರಡನೇ ಗಂಡ ಯಾರು ಗೊತ್ತಾ!ಎರಡೆರಡು ಮದುವೆ ಆದ್ರೂ ಒಬ್ಬಂಟಿಯಾಗಿದ್ದೇಕೆ ಬಾಲಿವುಡ್ ತಾರೆ?
ನಟಿ ರೇಖಾ ಅವರ ಹೆಸರು ಒಂದೆರಡಲ್ಲ 6 ನಟರೊಂದಿಗೆ ತಳಕು ಹಾಕಿ ಕೊಂಡಿತ್ತು. ಎರಡು ಬಾರಿ ವಿವಾಹವಾದರು ಎನ್ನಲಾಗುತ್ತದೆ. ಇಷ್ಟೆಲ್ಲಾ ಇದ್ದರೂ ಇಳಿವಯಸ್ಸಿನಲ್ಲಿ ರೇಖಾ ಒಬ್ಬಂಟಿಯಾಗಿದ್ದಾರೆ.
ರೇಖಾ ಮತ್ತು ಖ್ಯಾತ ನಟ ವಿನೋದ್ ಮೆಹ್ರಾ ಸಂಬಂಧ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ರೇಖಾ ಮತ್ತು ವಿನೋದ್ ಮೆಹ್ರಾ ಮದುವೆಯಾಗಿದ್ದರು ಎಂದು ಬಿಟೌನ್ ಜನ ಇಂದಿಗೂ ಹೇಳುತ್ತಾರೆ.
ಆದರೆ ವಿನೋದ್ ಮೆಹ್ರಾ ಅವರ ತಾಯಿ ರೇಖಾಳ ಕಪಾಳಕ್ಕೆ ಹೊಡೆದು ಮನೆಯಿಂದ ಹೊರಗೆ ಹಾಕಿದರಂತೆ. ಆಗ ವಿನೋದ್ ಇದನ್ನು ವಿರೋಧಿಸಲಿಲ್ಲವಂತೆ. ಇದರಿಂದ ಮನನೊಂದ ರೇಖಾ ಈ ಸಂಬಂಧದಿಂದ ಹೊರಬಂದರಂತೆ.
ರೇಖಾ ಮತ್ತು ಮುಕೇಶ್ ಅಗರ್ವಾಲ್ ಅವರ ಮದುವೆಯ ಸುದ್ದಿ ಎಲ್ಲರನ್ನು ಬೆಚ್ಚಿಬೀಳಿಸಿತು.
ರೇಖಾ ಮತ್ತು ಮುಕೇಶ್ ಅಗರ್ವಾಲ್ ಮದುವೆಯಾಗಿ ಒಂದು ವರ್ಷವೂ ಆಗಿರಲಿಲ್ಲ ರೇಖಾಳ ದುಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಮುಕೇಶ್ ಅಗರ್ವಾಲ್ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತದೆ.