ಏಕಾಏಕಿ ಗುಟ್ಟಾಗಿ ಮದುವೆಯಾದ ನಟಿ ಅನುಷ್ಕಾ ಶರ್ಮಾ ಸಹೋದರಿ..! ಫೊಟೋಸ್‌ ವೈರಲ್‌

Mon, 25 Nov 2024-2:12 pm,

ಚಿತ್ರರಂಗದಲ್ಲಿ ಒಂದರ ಹಿಂದೆ ಒಂದು ಎನ್ನುವಂತೆ ನಟ ನಟಿಯರ ಮದುವೆ ಜರುಗುತ್ತಿವೆ. ಕೆಲ ಹೀರೋ, ಹೀರೋಯಿನ್‌ಗಳು ಈಗಾಗಲೇ ಮದುವೆಯಾಗಿದ್ದರೆ, ಇನ್ನು ಕೆಲವರು ತಮ್ಮ ಪ್ರೀತಿಯನ್ನು ಬಹಿರಂಗಪಡಿಸುತ್ತಿದ್ದಾರೆ. ಕೆಲವರು ಸದ್ಯದಲ್ಲೇ ಮದುವೆಯಾಗುವ ಸುಳಿವು ಕೂಡ ನೀಡುತ್ತಿದ್ದಾರೆ.   

ಇದೀಗ ನಾಯಕಿಯೊಬ್ಬರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲ ಕನಸು ನನಸಾಗಲಿ ಎಂಬ ಆಕೆಯ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆಕೆ ಯಾರು ಗೊತ್ತಾ?  

ಯಸ್‌ ಆಕೆ ಬೇರೆ ಯಾರೂ ಅಲ್ಲ, ನಟಿ ರುಹಾನಿ ಶರ್ಮಾ.. ರುಹಾನಿ ಅನುಷ್ಕಾ ಶರ್ಮಾ ದೂರದ ಸಂಬಂಧಿ, ಸಂಬಂಧದಲ್ಲಿ ಸಹೋದರಿಯಾಗಬೇಕು.. ಈ ನಟಿ ರಾಹುಲ್ ರವೀಂದ್ರನ್ ನಿರ್ದೇಶನದ ಸುಶಾಂತ್ ಅವರ ಚಿಲಸೌ ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.  

ಚಿಲಸೌ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಮೊದಲ ಸಿನಿಮಾದಲ್ಲೇ ಹಿಟ್ ಗಳಿಸುವುದರ ಜೊತೆಗೆ ಅಭಿನಯ ಮತ್ತು ಸೌಂದರ್ಯದ ಮೂಲಕ ಪ್ರೇಕ್ಷಕರ ಗಮನಸೆಳೆದಳು. ಸಧ್ಯ ಹಿಮಾಚಲ ಸುಂದರಿ ರುಹಾನಿ  ಟಾಲಿವುಡ್‌ನಲ್ಲಿ ಬ್ಯುಸಿ ನಟಿಯಾಗುತ್ತಿದ್ದಾರೆ.   

ʼಡರ್ಟಿ ಹರಿʼ ಯಂತಹ ಬೋಲ್ಡ್ ಸಿನಿಮಾದ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ ರುಹಾನಿ ಕೊನೆಯದಾಗಿ ವಿಕ್ಟರಿ ವೆಂಕಟೇಶ್ ಅಭಿನಯದ ಸೈಂದವ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಈ ರಾಗಿಣಿ ಇತ್ತೀಚೆಗಷ್ಟೇ ಗ್ಲಾಮರ್ ಡೋಸ್ ಹೆಚ್ಚಿಸಿಕೊಂಡಿದ್ದಾರೆ.   

ರುಹಾನಿ ಫೋಟೋಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಕ್ರೇಜ್ ಇದೆ. ಈ ಅನುಕ್ರಮದಲ್ಲಿ, ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಸ್ಟ್‌ ಹುಡುಗರ ಹೃದಯವನ್ನು ಒಡೆಯಿತು.  

ರುಹಾನಿ ಶರ್ಮಾ ವಧುವಿನ ಗೆಟಪ್‌ನಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಕನಸು ನನಸಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ಅದರೊಂದಿಗೆ ಈ ಚೆಲುವೆ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಫಿಲಂ ನಗರದಲ್ಲಿ ಕೇಳಿ ಬರುತ್ತಿದೆ. ಮತ್ತು ಇದು ನಿಜವೋ ಅಥವಾ ಚಿತ್ರೀಕರಣದ ಭಾಗವೋ ಎಂಬುದು ತಿಳಿಯಬೇಕಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link