ʼಇಲಿಯಾನʼದಿಂದ ಹಿಡಿದು ಮದುವೆಯಾಗದೇ ತಾಯಂದಿರಾದ ಸ್ಟಾರ್ ನಟಿಯರು ಇವರು..!
ನೇಹಾ ಧೂಪಿಯಾ ಅಂಗದ್ ಬೇಡಿಯನ್ನು 2018 ರಲ್ಲಿ ರಹಸ್ಯವಾಗಿ ವಿವಾಹವಾದರು ಎಂದು ಸುದ್ದಿ ಇದೆ. ಮದುವೆಗೂ ಮುನ್ನ ನೇಹಾ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ.
ಮದುವೆಗೂ ಮುನ್ನವೇ ದಿಯಾ ಮಿರ್ಜಾ ಗರ್ಭಿಣಿಯಾಗಿದ್ದರಂತೆ. ಉದ್ಯಮಿ ವೈಭವ್ ರೇಖಿ ಅವರನ್ನು ಮದುವೆಯಾದ ನಾಲ್ಕು ತಿಂಗಳ ನಂತರ ಅವರು ಮಗನಿಗೆ ಜನ್ಮ ನೀಡಿದರು.
ಸ್ಟಾರ್ ನಟಿ ಶ್ರೀದೇವಿಯೂ ಸಹ ಮದುವೆಗೂ ಮುನ್ನವೇ ಗರ್ಭಿಣಿಯೂ ಆಗಿದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ, ಬೋನಿ ಕಪೂರ್ ಜೊತೆಗಿನ ವಿವಾಹದ ಸಮಯದಲ್ಲಿ ಶ್ರೀದೇವಿ ಏಳು ತಿಂಗಳ ಗರ್ಭಿಣಿಯಾಗಿದ್ದರಂತೆ.
ಬಾಲಿವುಡ್ ನಟಿ ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರ ಸಂಬಂಧ ಬಹಳ ಕಾಲ ನಡೆಯಿತ್ತಿತ್ತು. ನೀನಾ ಮದುವೆಯಾಗದೆ ಮಸಾಬಾ ಎಂಬ ಮಗಳಿಗೆ ಜನ್ಮ ನೀಡಿದಳು.
ಬರ್ಫಿ, ರುಸ್ತಮ್‌ನಂತಹ ಹಲವು ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿರುವ ಇಲಿಯಾನಾ ಡಿಕ್ರೂಜ್ ಇತ್ತೀಚೆಗಷ್ಟೇ ತಾಯಿಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ ಇಲಿಯಾನಾ ಡಿಕ್ರೂಜ್ ಇನ್ನೂ ಮದುವೆಯಾಗಿಲ್ಲ.
ಸುದ್ದಿಯೊಂದರ ಪ್ರಕಾರ, ಬಾಲಿವುಡ್ ನಟಿ ಆಮಿ ಜಾಕ್ಸನ್ ಕೂಡ ಮದುವೆಯಿಲ್ಲದೆ ತಾಯಿಯಾಗಿದ್ದರು ಎನ್ನಲಾಗಿದೆ. ಆಮಿ ಮತ್ತು ಆಕೆಯ ಗೆಳೆಯ ಜಾರ್ಜ್ ಪನಾಯೊಟೌ ಇದೀಗ ಒಬ್ಬ ಮಗನಿಗೆ ಪೋಷಕರು.