ಹೆಸರಿಗೆ ತಕ್ಕಂತೆ ಐಶ್ವರ್ಯವಂತೆ ಐಶ್ವರ್ಯಾ ರೈ… ಪತಿಗಿಂತ ಶ್ರೀಮಂತೆ ಮಾಜಿ ವಿಶ್ವಸುಂದರಿ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತಾ?

Sun, 17 Dec 2023-5:25 pm,

ಅಭಿಷೇಕ್ ಮತ್ತು ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಚೇದನಕ್ಕೆ ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಎಲ್ಲೂ ದೃಢೀಕರಣ ನೀಡಿಲ್ಲ. ಅಷ್ಟೇ ಅಲ್ಲದೆ, ಕಳೆದ ದಿನ ಮಗಳು ಆರಾಧ್ಯ ಬಚ್ಚನ್ ಶಾಲಾ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಬ್ಬರೂ ಕೂಡ ಒಂದೇ ವಾಹನದಲ್ಲಿ ಆಗಮಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಂದಹಾಗೆ ನಾವಿಂದು ಈ ವರದಿಯಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಆಸ್ತಿ ಮೌಲ್ಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ ಈಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳೋದು ಕಡಿಮೆ. ಇದರ ಹೊರತಾಗಿಯೂ, ಇಂದಿಗೂ ಈಕೆ ಬಾಲಿವುಡ್‌’ನ ಶ್ರೀಮಂತ ನಟಿ ಎಂದು ಕರೆಯಲಾಗುತ್ತಾರೆ. ಜಿಕ್ಯೂ ವರದಿಯ ಪ್ರಕಾರ ಐಶ್ವರ್ಯಾ ಅತ್ಯಂತ ಶ್ರೀಮಂತ ನಟಿ.

ಚಲನಚಿತ್ರಗಳ ಹೊರತಾಗಿ, ಐಶ್ವರ್ಯಾ ಎಲ್ಲಾ ಬ್ರಾಂಡ್‌’ಗಳಿಗೆ ಜಾಹೀರಾತುಗಳನ್ನು ಸಹ ಮಾಡುತ್ತಾರೆ. ಇದರ ಮೂಲಕ ಕೂಡ ಸಾಕಷ್ಟು ಹಣ ಗಳಿಕೆ ಮಾಡುತ್ತಾರೆ ಐಶ್.

ವರದಿಗಳ ಪ್ರಕಾರ, ಐಶ್ವರ್ಯಾ ರೈ ಅವರ ನಿವ್ವಳ ಮೌಲ್ಯ 100 ಮಿಲಿಯನ್ ಡಾಲರ್ ಅಂದರೆ ಅವರು 826 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅಭಿಷೇಕ್ ಬಚ್ಚನ್ ಅವರ ನಿವ್ವಳ ಮೌಲ್ಯ 203 ಕೋಟಿ ರೂಪಾಯಿ.

ವರದಿಗಳ ಪ್ರಕಾರ ಐಶ್ವರ್ಯಾ ರೈ ಒಂದು ಚಿತ್ರಕ್ಕೆ 10 ರಿಂದ 12 ಕೋಟಿ ರೂ. ಪಡೆಯುತ್ತಾರೆ. ಅಷ್ಟೇ ಅಲ್ಲದೆ, ಕೇವಲ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌’ನಿಂದ ವರ್ಷಕ್ಕೆ 80 ರಿಂದ 90 ಕೋಟಿ ರೂಪಾಯಿ ಗಳಿಸುತ್ತಾರೆ. ವರದಿಗಳ ಪ್ರಕಾರ, ಐಶ್ವರ್ಯಾ ರೈ ಯಾವುದೇ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್ ಶೂಟ್‌’ಗೆ ದಿನಕ್ಕೆ 6 ರಿಂದ 7 ಕೋಟಿ ರೂ. ಚಾರ್ಜ್ ಮಾಡುತ್ತಾರೆ.

ಐಶ್ವರ್ಯಾ ರೈ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌’ನಲ್ಲಿ 5 BHK ಅಪಾರ್ಟ್ಮೆಂಟ್ ಹೊಂದಿದ್ದಾರೆ. 2015 ರಲ್ಲಿ ಈ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದರು. ಈ ಅಪಾರ್ಟ್‌ಮೆಂಟ್‌’ನ ಬೆಲೆ 21 ಕೋಟಿ ರೂ. ಐಶ್ವರ್ಯಾ ರೈ ವರ್ಲಿಯಲ್ಲಿ ಕೂಡ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದು, ಇದರ ಬೆಲೆ 41 ಕೋಟಿ ರೂ. ಇದಲ್ಲದೇ ನಟಿ ದುಬೈನಲ್ಲಿ 15.6 ಕೋಟಿ ಮೌಲ್ಯದ ವಿಲ್ಲಾ ಹೊಂದಿದ್ದಾರೆ.

ನಟಿಗೆ ಐಷಾರಾಮಿ ಕಾರುಗಳೆಂದರೆ ಬಲುಪ್ರೀತಿ. ಇದೇ ಕಾರಣದಿಂದ 7.95 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಸೇರಿದಂತೆ, ಲೆಕ್ಸಸ್ LX 570 ಮತ್ತು Audi A8 L ಕಾರುಗಳನ್ನು ಖರೀದಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link