18 ವರ್ಷಕ್ಕೆ ನಿರ್ಮಾಪಕನನ್ನು ಪ್ರೀತಿಸಿ ಇಸ್ಲಾಂಗೆ ಮತಾಂತರಗೊಂಡಿದ್ದ ಈ ಸ್ಟಾರ್ ನಟಿಯ ಸಾವು ಇಂದಿಗೂ ನಿಗೂಢ..!
ಸಲ್ಮಾನ್ ಖಾನ್ ಅವರ ಸ್ನೇಹಿತ ಸಾಜಿದ್ ನಾಡಿಯಾಡ್ವಾಲಾ ಅವರನ್ನು ದಿವ್ಯಾ ಪ್ರಿತಿಸಿ ಮದುವೆಯಾದರು. ಈ ಮೂಲಕ ಹಿಂದೂ ನಟಿ ಮುಸ್ಲಿಂ ನಿರ್ಮಾಪಕರನ್ನು ಮದುವೆಯಾಗುವ ಮೂಲಕ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ನಂತರ ಇದ್ದಕ್ಕಿದ್ದಂತೆ ಏನಾಯಿತು ಅಂತ ಯಾರಿಗೂ ತಿಳಿಯದು, ದಿವ್ಯಾ ತಾವು ವಾಸಿಸುತ್ತಿದ್ದ ಕಟ್ಟಡದ ಛಾವಣಿಯಿಂದ ಬಿದ್ದು ಸಾವನ್ನಪ್ಪಿದರು. ಈ ಪ್ರಕರಣ ಇಂದಿಗೂ ನಿಗೂಢವಾಗಿ ಉಳಿದಿದೆ.
ಅತ್ಯಂತ ಕಡಿಮೆ ಸಮಯದಲ್ಲಿ, ದಿವ್ಯಾ ಭಾರತಿ ತಮ್ಮ ಅಮೋಘ ನಟನೆಯಿಂದ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದರು. ಅವರ ನಟನೆಯ ಜೊತೆಗೆ ಅವರ ಅಪರೂಪದ ಸೌಂದರ್ಯ, ಅವಳ ಮುಖ ಕಾಂತಿ ಜನರನ್ನು ಆಕರ್ಷಿಸಿತು. ಇಂದಿಗೂ ಜನರು ಅವರನ್ನು ಯಾವುದೋ ಕಾರಣಕ್ಕೆ ನೆನಪಿಸಿಕೊಳ್ಳುತ್ತಾರೆ.
ನಟಿ ದಿವ್ಯಾ ಪ್ರೇಮಕಥೆಯ ಬಗ್ಗೆ ಅನೇಕ ಕಥೆಗಳು ಕೇಳಿಬರುತ್ತವೆ. ದಿವ್ಯಾ ಸಾಜಿದ್ ನಾಡಿಯಾಡ್ವಾಲಾ ಜೊತೆಗಿನ ಪ್ರೀತಿಗಾಗಿ ಎನನ್ನಾದರೂ ಮಾಡಲು ಸಿದ್ದವಿದ್ದರಂತೆ ನಟಿ. ಸಾಜಿದ್ ದಿವ್ಯಾರನ್ನು ನೋಡಿದ ಮೇಲೆ ಪ್ರೀತಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ. ದಿವ್ಯಾ ಮತ್ತು ಸಾಜಿದ್ ಮೊದಲು ಭೇಟಿಯಾದದ್ದು 'ಶೋಲಾ ಔರ್ ಶಬನಮ್' ಚಿತ್ರದ ಸೆಟ್‌ನಲ್ಲಿ.
ಇದಾದ ಬಳಿಕ ಇಬ್ಬರ ಸಾಕಷ್ಟು ಬಾರಿ ಭೇಟಿಯಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿತ್ತು. ಸಮಯ ವ್ಯರ್ಥ ಮಾಡದೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ದಿವ್ಯಾ ಭಾರತಿ ಅವರು ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ 10 ಮೇ 1992 ರಂದು ಸಾಜಿದ್ ಅವರನ್ನು ವಿವಾಹವಾದರು.
ಸಾಜಿದ್ ನನ್ನು ಮದುವೆಯಾಗಲು ಇಸ್ಲಾಂ ಧರ್ಮ ಸ್ವೀಕರಿಸಲು ದಿವ್ಯಾ ಹಿಂದೆ ಸರಿಯಲಿಲ್ಲ ಎನ್ನಲಾಗಿದೆ. ವರದಿಗಳನ್ನು ನಂಬುವುದಾದರೆ, ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ದಿವ್ಯಾ ತನ್ನ ಹೆಸರನ್ನು ಸನಾ ಎಂದು ಬದಲಾಯಿಸಿಕೊಂಡಿದ್ದು ಎಂದು ಹೇಳಲಾಗುತ್ತದೆ.
ದಿವ್ಯಾ ಮತ್ತು ಸಾಜಿದ್ ಒಬ್ಬರಿಗೊಬ್ಬರು ತುಂಬಾ ಸಂತೋಷವಾಗಿದ್ದರು. ಆದರೆ, ಏಪ್ರಿಲ್ 5, 1993 ದಿವ್ಯಾ ಭಾರತಿ ನಿಧನರಾಗಿದ್ದಾರೆ ಎಂಬ ಸುದ್ದಿ ಭಾರತೀಯ ಸಿನಿರಂಗವನ್ನು ದಿಗ್ಬಾಂತಿಗೊಳಿಸಿತ್ತು. ನಟಿ ತಮ್ಮ ಕಟ್ಟಡದ 5 ನೇ ಮಹಡಿಯಿಂದ ಬಿದ್ದು, ಪ್ರಾಣ ಕಳೆದುಕೊಂಡಿದ್ದರು. ದಿವ್ಯಾ ಸಾವು ಅಪಘಾತವೋ ಅಥವಾ ಪಿತೂರಿಯೋ ಎಂಬ ರಹಸ್ಯ ಇಂದಿಗೂ ಬಹಿರಂಗವಾಗಿಲ್ಲ.