ಇಬ್ಬರು ಮಕ್ಕಳ ತಂದೆ..ಈ ಸ್ಟಾರ್ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದ ನಟಿ..ತಂಗಿ ಮಾತು ಕೇಳಿ ಶಾಕ್ ಆದ ಸಹೋದರಿ! ಅಷ್ಟಕ್ಕೂ ಈ ಇಬ್ಬರು ಕೂಡ ಸ್ಟಾರ್ ನಟಿಯರೇ
ಮೊದಲೇ ವಿವಾಹವಾಗಿ ಇಬ್ಬರು ಮಕ್ಕಳ ತಂದೆಯಾಗಿದ್ದ ಅನ್ಯ ಧರ್ಮದ ನಟನೊಂದಿಗೆ ಈ ನಟಿಗೆ ಪ್ರೇಮಾಂಕುರವಾಗಿತ್ತು.
ನಟಿ ತಾನು 2 ಮಕ್ಕಳ ತಂದೆಯೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ತಿಳಿಸಿದಾಗ ತಂಗಿಯ ಲವ್ ಸ್ಟೋರಿ ತಿಳಿದು ಅಕ್ಕ ಶಾಕ್ ಆಗಿದ್ದರಂತೆ... ಈ ಕಥೆ ಬೇರಾರದ್ದೋ ಅಲ್ಲ ನಟಿ ಕರೀನಾ ಕಪೂರ್ ಅವರದ್ದು.
ದೀರ್ಘ ಸಮಯದವರೆಗೆ ಸೈಫ್ ಅಲಿ ಖಾನ್ ಜೊತೆ ಡೇಟಿಂಗ್ ನಲ್ಲಿದ್ದ ಕರೀನಾ ಕಪೂರ್ ಒಮ್ಮೆ ತಮ್ಮ ಲವ್ ವಿಚಾರವನ್ನು ಅಕ್ಕ ಕರೀಷ್ಮಾ ಕಪೂರ್ ಗೆ ಹೇಳಲು ನಿರ್ಧರಿಸಿದ್ದರು. ಶಾಪಿಂಗ್‌ಗೆ ಹೋಗಿದ್ದ ಕರೀಷ್ಮಾಗೆ ಇಬ್ಬರು ಮಕ್ಕಳ ತಂದೆಯೊಂದಿಗೆ ತಂಗಿಯ ಡೇಟಿಂಗ್ ವಿಷಯ ಕೇಳಿ ಶಾಕ್ ಆಗಿತ್ತಂತೆ...
ವಾಸ್ತವವಾಗಿ ನಟ ಸೈಫ್ ಅಲಿ ಖಾನ್ ವಯಸ್ಸಿನಲ್ಲಿ ತನಗಿಂತ ದೊಡ್ಡವರಾದ ನಟಿ ಅಮೃತಾ ಸಿಂಗ್ ಅವರೊಂದಿಗೆ ಮದುವೆಯಾಗಿದ್ದರು. ಇವರಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದರು.
ಹಾಗಾಗಿ ಸ್ಟಾರ್ ನಟಿ ಬಾಲಿವುಡ್ ಬೆಬೊ ಖ್ಯಾತಿ ಕರೀನಾ ಕಪೂರ್ ಇಬ್ಬರು ಮಕ್ಕಳ ತಂದೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿರುವ ವಿಷಯ ತಿಳಿದು ಕರೀಷ್ಮಾ ಕಪೂರ್ ಗೆ ಶಾಕ್ ಆಗಿತ್ತು
ಧರ್ಮದ ಗಡಿಯನ್ನೂ ದಾಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ 2012 ರಲ್ಲಿ ವಿವಾಹವಾಗಿದ್ದರು. ಬಾಲಿವುಡ್ ಸ್ಟಾರ್ ಕಪಲ್ ಪಟ್ಟಿಯಲ್ಲಿ ಬರುವ ಈ ಜೋಡಿಗೆ ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.