ಬಚ್ಚನ್ ಕುಟುಂಬದವರಿಗೆ Covid-19 ಪಾಸಿಟಿವ್ ಸುದ್ದಿ ಬೆನ್ನಲ್ಲೇ ಫ್ಯಾಮಿಲಿ ಪೋಟೋಸ್ ವೈರಲ್
ನಟ ಅಮಿತಾಬ್ ಬಚ್ಚನ್ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ಅವರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.
ಮೊದಲಿಗೆ ಶನಿವಾರ ರಾತ್ರಿ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಹಾಗೂ ಖ್ಯಾತ ನಟ ಅಭಿಷೇಕ್ ಬಚ್ಚನ್ ಅವರ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರಲ್ಲಿ ಆತಂಕ ಹೆಚ್ಚಾಗಿತ್ತು. ಹೀಗಾಗಿ ಎಲ್ಲರಿಗೂ ಕರೋನಾ ಟೆಸ್ಟ್ ಮಾದಲಿಸಲಾಗಿತ್ತು. ಇದರಲ್ಲಿ ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯಾ ಬಚ್ಚನ್ ಅವರ ಕೊರೊನಾ ಟೆಸ್ಟ್ ವರದಿ ಕೂಡ ಪಾಸಿಟಿವ್ ಬಂದಿದೆ.
ಭಾನುವಾರ ಬೆಳಗ್ಗೆ ನಡೆಸಿದ್ದ ಸ್ವಾಬ್ ಟೆಸ್ಟ್ ವರದಿಯಲ್ಲಿ ಐಶ್ವರ್ಯಾ, ಆರಾಧ್ಯ ಇಬ್ಬರ ವರದಿಯೂ ನೆಗೆಟಿವ್ ಎಂದು ಬಂದಿತ್ತು. ಆದರೆ ನಿನ್ನೆ ಮಧ್ಯಾಹ್ನ ಬಂದ ಎರಡನೇ ರಿಪೋರ್ಟ್ ನಲ್ಲಿ ಇಬ್ಬರಿಗೂ ಕರೋನಾವೈರಸ್ ಇರುವುದು ದೃಢಪಟ್ಟಿದೆ.
ಜಯಾ ಬಚ್ಚನ್, ಶ್ವೇತಾ ನಂದಾ, ಅಗಸ್ತಯಾ ನಂದಾ ಹಾಗೂ ನವ್ಯಾ ನಂದಾ ಅವರ ಸ್ವ್ಯಾಬ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ.
ಸದ್ಯ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಅವರ ಆರೋಗ್ಯ ಉತ್ತಮವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. (ಫೋಟೋ ಕೃಪೆ: ಎಲ್ಲಾ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನ ಅಭಿಮಾನಿ ಪುಟದಿಂದ ತೆಗೆದುಕೊಳ್ಳಲಾಗಿದೆ)