Bone Health: ಮೂಳೆಗಳ ಕ್ಯಾಲ್ಸಿಯಂ ನಾಶಪಡಿಸುವ ಈ 5 ಆಹಾರಗಳಿಂದ ಇರಲಿ ಅಂತರ
ಕಾಫಿ- ಟೀ ಹೆಸರು ಕೇಳಿದರೆ ಕೆಲವರಿಗೆ ಮೂಡ್ ಫ್ರೆಶ್ ಆಗುತ್ತದೆ. ಆದರೆ, ಇವುಗಳನ್ನು ಹೆಚ್ಚಾಗಿ ಕುಡಿಯುವುದರಿಂದ ನಿಮ್ಮ ಮೂಲಗಳಲ್ಲಿ ಸಾಂದ್ರತೆ ಕಡಿಮೆ ಆಗುತ್ತದೆ.
ಸಿಹಿ ಹೆಸರು ಕೇಳಿದರೆ ಸಾಕು ಮಕ್ಕಳಿಂದ ಮುದುಕರವರೆಗೂ ಬಾಯಿಯಲ್ಲಿ ನೀರು ಬರುತ್ತದೆ. ಆದರೆ, ಸಿಹಿ ತಿನಿಸುಗಳು ಮಧುಮೇಹದ ಅಪಾಯವನ್ನು ಹೆಚ್ಚಿಸುವುದು ಮಾತ್ರವಲ್ಲ, ಅವು ಮೂಳೆಗಳ ಆರೋಗ್ಯಕ್ಕೂ ಹಾನಿಕಾರಕವಾಗಿದ್ದು, ಉತ್ತಮ ಆರೋಗ್ಯಕ್ಕಾಗಿ ಸಿಹಿಯ ಸೇವನೆ ಹಿತ-ಮಿತವಾಗಿದ್ದರೆ ಒಳಿತು.
ಮದ್ಯ ಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಕೂಡ ನಮ್ಮಲ್ಲಿ ಹಲವರು ಮದ್ಯ ವ್ಯಸನಿಗಳಾಗಿರುತ್ತಾರೆ. ಆದರೆ, ಇದು ಮೂಳೆಗಳ ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಹೇಳುತ್ತಾರೆ.
ಅಡಿಗೆಗೆ ಉಪ್ಪಿಲ್ಲದೆ ರುಚಿಯೇ ಇರುವುದಿಲ್. ಆದರೆ, ಇದು ಅತಿಯಾದರೆ ರಕ್ತದೊತ್ತಡ ಹೆಚ್ಚಾಗುವುದು ಮಾತ್ರವಲ್ಲ, , ಮೂಳೆಗಳು ತೆಳುವಾಗುತ್ತವೆ ಮತ್ತು ದುರ್ಬಲವಾಗುತ್ತವೆ. ಅತಿಯಾದ ಉಪ್ಪು ಸೇವನೆ ಮೂಳೆಗಳ ಮುರಿತಕ್ಕೂ ಕಾರಣವಾಗಬಹುದು.
ಯಾವುದೇ ಪಾರ್ಟಿಯಿರಲಿ ಅಲ್ಲಿ ತಂಪು ಪಾನೀಯ ಇಲ್ಲ ಎಂದರೆ ಪಾರ್ಟಿ ಪಾರ್ಟಿಯೇ ಅಲ್ಲ ಎನ್ನುವ ಹಲವು ಮಂದಿ ನಮ್ಮ ಮಧ್ಯೆ ಇದ್ದಾರೆ. ಆದರೆ, ಈ ತಂಪು ಪಾನೀಯ, ಕೂಲ್ ಡ್ರಿಂಕ್ಸ್ ಗಳು ನಿಮ್ಮ ಮೂಳೆಗಳನ್ನು ತೀವ್ರವಾಗಿ ಹಾನಿಗೊಳಿಸಬಹುದು ಎಂದು ನಿಮಗೆ ತಿಳಿದಿದೆಯೇ?
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.