ರೈಲ್ವೆ ಜಾರಿ ಮಾಡಿದೆ ಹೊಸ ಟಿಕೆಟ್ ಬುಕಿಂಗ್ ಪದ್ಧತಿ !ರೈಲು ಹೊರಡುವ ಕೆಲವೇ ನಿಮಿಷಗಳ ಮುನ್ನ ಟಿಕೆಟ್ ಮಾಡಿದರೂ ಸಿಗುವುದು ಕನ್ಫರ್ಮ್ ಟಿಕೆಟ್!ತತ್ಕಾಲ್ ಗಿಂತ ಅಗ್ಗ ಈ ಟಿಕೆಟ್
ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ವಿಶೇಷ ರೀತಿಯ ಟಿಕೆಟ್ ಬುಕಿಂಗ್ ವ್ಯವಸ್ಥೆ ಹೊರ ತಂದಿದೆ. ಇದರ ಅಡಿಯಲ್ಲಿ ರೈಲು ಚಾರ್ಟ್ ಸಿದ್ಧಪಡಿಸಿದ ನಂತರವೂ ದೃಢೀಕೃತ ಟಿಕೆಟ್ ಅನ್ನು ಪಡೆಯಬಹುದು.
ಈ ವ್ಯವಸ್ಥೆ ಅಡಿಯಲ್ಲಿ ರೈಲು ಹೊರಡುವ ಕೆಲವೇ ನಿಮಿಷಗಳ ಮುನ್ನ ಟಿಕೆಟ್ ಮಾಡಿದರೂ ಕನ್ಫರ್ಮ್ ಟಿಕೆಟ್ ಸಿಗುತ್ತದೆ. ಈ ಟಿಕೆಟ್ ಪದ್ದತಿಯನ್ನು ಕರೆಂಟ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಎಂದು ಕರೆಯುತ್ತೇವೆ.
ರೈಲು ಹೊರಡುವ 3 ಗಂಟೆಗಳ ಮೊದಲು ಕರೆಂಟ್ ಟಿಕೆಟ್ ವಿಂಡೋವನ್ನು ತೆರೆಯಲಾಗುತ್ತದೆ. ಈ ವಿಂಡೋ ಮೂಲಕ ಟಿಕೆ ಬುಕ್ ಮಾಡಿದರೆ ಕನ್ಫರ್ಮ್ ಟಿಕೆಟ್ ಸಿಗುತ್ತದೆ. ಇನ್ನೂ ವಿಶೇಷವೆಂದರೆ ಈ ಟಿಕೆಟ್ ಸಾಮಾನ್ಯ ಟಿಕೆಟ್ ಮತ್ತು ತತ್ಕಾಲ್ ಟಿಕೆಟ್ ಗಿಂತ ಅಗ್ಗವಾಗಿರುತ್ತದೆ.
ರೈಲು ಚಾರ್ಟ್ ಸಿದ್ಧಪಡಿಸಿದ ನಂತರ, ಕರೆಂಟ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಲಭ್ಯವಿರುತ್ತದೆ. ಹಾಗಾಗಿ ಕೊನೆಯ ಘಳಿಗೆಯಲ್ಲಿ ಕೂಡಾ ಕನ್ಫರ್ಮ್ ಟಿಕೆಟ್ ಪಡೆದುಕೊಳ್ಳಲು ಇದು ಒಳ್ಳೆಯ ಅವಕಾಶ.
ಕರೆಂಟ್ ಟಿಕೆಟ್ ಬುಕ್ ಮಾಡಲು IRCTC ವೆಬ್ ಸೈಟ್ ಗೆ ಲಾಗಿನ್ ಆದ ನಂತರ, 'Train' ಬಟನ್ ಕ್ಲಿಕ್ ಮಾಡಿ.ನಂತರ ಬುಕ್ ಟಿಕೆಟ್ ಮೇಲೆ ಕ್ಲಿಕ್ ಮಾಡಿ.ಈಗ ನಿಮ್ಮ ಆಯ್ಕೆಯ ನಿಲ್ದಾಣ ಮತ್ತು ದಿನಾಂಕವನ್ನು ಆರಿಸಿಕೊಳ್ಳಿ. ಸರ್ಚ್ ರೈಲು' ಬಟನ್ ಕ್ಲಿಕ್ ಮಾಡಿ.ರೈಲು ಮತ್ತು ಕೋಚ್ ಅನ್ನು ಕ್ಲಿಕ್ ಮಾಡುವ ಮೂಲಕ ಪರಿಶೀಲಿಸಿ.ರೈಲಿನಲ್ಲಿ ಕರೆಂಟ್ ಟಿಕೆಟ್ ಇದ್ದರೆ CURR_AVBL ಅಲ್ಲಿ ಗೋಚರಿಸುತ್ತದೆ.ಅದನ್ನು ಆಯ್ಕೆ ಮಾಡಿ ಮತ್ತು ಪ್ರಯಾಣಿಕರ ವಿವರಗಳು ಸೇರಿದಂತೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ಪೇಮೆಂಟ್ ಆದ ಕೂಡಲೇ ದೃಢೀಕೃತ ಟಿಕೆಟ್ ಬುಕ್ ಆಗುತ್ತದೆ.
IRCTC ಸೈಟ್ ಮತ್ತು ಟಿಕೆಟ್ ವಿಂಡೋ ಎರಡರಿಂದಲೂ ಕರೆಂಟ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು.ರೈಲಿನಲ್ಲಿ ಖಾಲಿ ಸೀಟು ಇದ್ದಾಗ ಮಾತ್ರ ಕರೆಂಟ್ ಟಿಕೆಟ್ ಸೌಲಭ್ಯ ಕೆಲಸ ಮಾಡುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ.