Top Bowlers: ಒಂದೇ ಸ್ಥಳದಲ್ಲಿ 100ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು ಇವರು

Sat, 20 Aug 2022-1:28 pm,

ಜೇಮ್ಸ್ ಆಂಡರ್ಸನ್‍ನಂತೆ ಕೆಲವೇ ಕೆಲವು ಬೌಲರ್‌ಗಳು ಲಾರ್ಡ್ಸ್‌ನಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಈ ಮೈದಾನದಲ್ಲಿ 23 ಟೆಸ್ಟ್ ಪಂದ್ಯಗಳಲ್ಲಿ ಅವರು 5,439 ಎಸೆತಗಳನ್ನು ಬೌಲ್ ಮಾಡಿದ್ದಾರೆ. 23.89ರ ಸರಾಸರಿಯಲ್ಲಿ 103 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದು ಇವರನ್ನು ಕ್ರಿಕೆಟ್ ಹೋಮ್‌ನಲ್ಲಿ ಪ್ರಮುಖ ಟೆಸ್ಟ್ ವಿಕೆಟ್ ಟೇಕರ್ ಎಂಬ ಅಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿದೆ. ಈ ಪೈಕಿ 28 ವಿಕೆಟ್‌ಗಳು ಭಾರತದ ವಿರುದ್ಧವೇ ಆಂಡರ್ಸನ್‍ ತೆಗೆದುಕೊಂಡಿದ್ದಾರೆ.

ಮುತ್ತಯ್ಯ ಮುರಳೀಧರನ್ ಅವರು ಅತಿಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ದಾಖಲೆ ಹೊಂದಿದ್ದಾರೆ. 3 ಒಂದೇ ಸ್ಥಳದಲ್ಲಿ 100+ ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ. ಅವರು ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಗ್ರೌಂಡ್‌ನಲ್ಲಿ 166 ವಿಕೆಟ್, ಅಸ್ಗಿರಿಯ ಸ್ಟೇಡಿಯಂನಲ್ಲಿ 117 ವಿಕೆಟ್ ಮತ್ತು ಗಾಲೆಯ ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 111 ವಿಕೆಟ್ ಪಡೆದು ಈ ಸಾಧನೆ ಮಾಡಿದ್ದಾರೆ.

ರಂಗನಾ ಹೆರಾತ್ ಗಾಲೆಯಲ್ಲಿ ಮಾತ್ರ 102 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. 100 ಮತ್ತು 101ನೇ ವಿಕೆಟ್ ಆಗಿ ಜೋ ರೂಟ್‍ರನ್ನು ಬಲಿ ಪಡೆದಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಶ್ರೀಲಂಕಾದ 211 ರನ್‌ಗಳ ಸೋಲಿನ ವೇಳೆ ಜೋಸ್ ಬಟ್ಲರ್ ವಿಕೆಟ್ ತೆಗೆದುಕೊಂಡಿದ್ದು ಅವರ ಕೊನೆಯ ವಿಕೆಟ್ ಆಗಿತ್ತು. 40ರ ಹರೆಯದ ಹೆರಾತ್ ಶ್ರೀಲಂಕಾ ಪರ ಆಡಿದ 93 ಟೆಸ್ಟ್‌ಗಳಲ್ಲಿ 433 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.

ಸ್ಟುವರ್ಟ್ ಬ್ರಾಡ್ ಈ ಸಾಧಕರ ಸಾಲಿಗೆ ಸೇರಿದ ಇತ್ತೀಚಿನ ಬೌಲರ್. ಆದರೆ, ಸಾರ್ವಕಾಲಿಕ ಟೆಸ್ಟ್ ವಿಕೆಟ್ ಟೇಕಿಂಗ್ ಪಟ್ಟಿಯಲ್ಲಿ ಗ್ಲೆನ್ ಮೆಕ್‌ಗ್ರಾತ್‌ರ 5ನೇ ಸ್ಥಾನಕ್ಕೆ ಸಮೀಪಿಸುತ್ತಿರುವ ಬ್ರಾಡ್‌ಗೆ ಈ ಸಾಧನೆಯು ಕ್ರೀಡೆಯಲ್ಲಿ ಮತ್ತೊಂದು ಹೆಗ್ಗಳಿಕೆ ತಂದುಕೊಟ್ಟಿದೆ. 553 ವಿಕೆಟ್‍ ಗಳೊಂದಿಗೆ ಬ್ರಾಡ್ ತನ್ನ ಆಸ್ಟ್ರೇಲಿಯನ್ ಪ್ರತಿಸ್ಪರ್ಧಿ ಸರಿಗಟ್ಟಲು 10 ವಿಕೆಟ್‍ಗಳ ಅಂತರದಲ್ಲಿದ್ದಾರೆ. ಶೀಘ್ರವೇ ಅವರು ಮೆಕ್‌ಗ್ರಾತ್‌ರ ದಾಖಲೆಯನ್ನು ಮುರಿಯಬಹುದು.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link