ಈ ಬಣ್ಣದ ಅಕ್ಕಿಯ ನೀರಿನ್ನು ಕೂದಲಿಗೆ ಹಚ್ಚಿದರೆ ನಿಮಿಷಗಳಲ್ಲಿ ಬುಡಸಮೇತ ಕಪ್ಪಾಗುತ್ತೆ ಬಿಳಿಕೂದಲು!
ಕೆಮಿಕಲ್ ಶಾಂಪೂಗಳು ಮತ್ತು ಹೆಚ್ಚುತ್ತಿರುವ ಮಾಲಿನ್ಯ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ, ಇದರಿಂದ ಜನರಲ್ಲಿ ಬೋಳು ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ. ಇನ್ನು ಜಪಾನೀಸ್ ಮತ್ತು ಕೊರಿಯನ್ ಜನರು ತಮ್ಮ ಕೂದಲಿಗೆ ಏನು ಬಳಸುತ್ತಾರೆ ಎಂದು ಪ್ರತಿಯೊಬ್ಬರೂ ಆಶ್ಚರ್ಯ ಪಡುತ್ತಾರೆ, ಏಕೆಂದರೆ ಅವರ ಕೂದಲು ಅಷ್ಟೊಂದು ಮೃದು, ಕಪ್ಪಾಗಿ, ದಟ್ಟವಾಗಿ ಸುಂದರವಾಗಿರುತ್ತದೆ.
ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು, ಜಪಾನೀಸ್ ಮತ್ತು ಕೊರಿಯನ್ ಜನರು ತಮ್ಮ ಕೂದಲಿಗೆ ಅಕ್ಕಿ ನೀರನ್ನು ಬಳಸುತ್ತಾರೆ ಎಂದರೆ ನಂಬುತ್ತೀರಾ? ಹೌದು, ಕೂದಲಿಗೆ ಅಕ್ಕಿ ನೀರನ್ನು ಬಳಸಿದರೆ, ಅದು ಅನೇಕ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುತ್ತದೆ.
ಮಾಹಿತಿಯ ಪ್ರಕಾರ, ಇನೋಸಿಟಾಲ್ ಅಂಶ ಅಕ್ಕಿ ನೀರಿನಲ್ಲಿ ಕಂಡುಬರುತ್ತದೆ, ಇದು ಕಾರ್ಬೋಹೈಡ್ರೇಟ್ ಆಗಿದ್ದು, ಹಾನಿಗೊಳಗಾದ ಕೂದಲನ್ನು ಸರಿಪಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲು ಅತಿಯಾಗಿ ಉದುರುತ್ತಿದ್ದರೆ ಅಕ್ಕಿ ನೀರಿನಿಂದ ಕೂದಲನ್ನು ತೊಳೆಯಬೇಕು. ಇದು ಕೂದಲಿನ ಪಿ ಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕೂದಲು ತುಂಬಾ ಒಣಗಿದ್ದರೆ ಮತ್ತು ನಿರ್ಜೀವವಾಗಿದ್ದರೆ ಅಕ್ಕಿ ನೀರನ್ನು ಬಳಸಿ. ಇದು ಕೂದಲಿಗೆ ವಿಟಮಿನ್ ಬಿ ಮತ್ತು ವಿಟಮಿನ್ ಎ ಅನ್ನು ಒದಗಿಸುತ್ತದೆ ಮತ್ತು ಕೂದಲಿಗೆ ಪೋಷಣೆ ನೀಡುತ್ತದೆ.
ಅಕ್ಕಿ ನೀರು ತಲೆಹೊಟ್ಟು ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ. ಜೊತೆಗೆ ಇದರ ಬಳಕೆಯಿಂದ ಕೂದಲು ತುಂಬಾ ವೇಗವಾಗಿ ಬೆಳೆಯುತ್ತದೆ. ಇನ್ನು ಪ್ರತೀ ದಿನ ಬಿಳಿಬಣ್ಣದ ಅಥವಾ ಕಂದುಬಣ್ಣದ ಅಕ್ಕಿ ನೀರನ್ನು ತಲೆಗೆ ಹಚ್ಚಿ, ಸ್ವಲ್ಪ ಸಮಯದ ಬಳಿಕ ಕೂದಲನ್ನು ತೊಳೆದರೆ, ಬುಡದಿಂದಲೇ ಬಿಳಿಕೂದಲು ಕಪ್ಪಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)