ಖಾಲಿ ಹೊಟ್ಟೆಗೆ ಈ ಹಣ್ಣಿನ ಒಂದೇ ಒಂದು ತುಂಡು ತಿಂದರೆ 30 ದಿನ ಸಂಪೂರ್ಣ ನಾರ್ಮಲ್ ಇರುತ್ತದೆ ಬ್ಲಡ್ ಪ್ರೆಶರ್
ಬುದ್ಧನ ಕೈ ಅಥವಾ ಸಿಟ್ರಸ್ ಮೆಡಿಕಾ ವರ್, ಸಾರ್ಕೊಡಾಕ್ಟಿಲಿಸ್, ಫಿಂಗರ್ಡ್ ಸಿಟ್ರಾನ್ ಎಂದೆಲ್ಲಾ ಕರೆಯಲ್ಪಡುವ ಈ ಹಣ್ಣಿನ ಹೆಸರನ್ನು ನಮ್ಮಲ್ಲಿ ಅನೇಕರು ಕೇಳಿಯೇ ಇರುವುದು ಅಪರೂಪ. ಏಕೆಂದರೆ ಇದು ಭಾರತ ಈಶಾನ್ಯ ಭಾಗದಲ್ಲಿ ಮತ್ತು ಚೀನಾದಲ್ಲಿ ಹೆಚ್ಚಾಗಿ ಬೆಳೆಯುವ ಹಣ್ಣಾಗಿಒದೆ.
ಈ ಹಣ್ಣು ಭಗವಾನ್ ಬುದ್ಧನ ಧ್ಯಾನ ಭಂಗಿಯಂತಿರುವ ಕಾರಣ, ಇದನ್ನು ಬುದ್ಧನ ಹಸ್ತ ಎಂದು ಕರೆಯಲಾಗುತ್ತದೆ. ಇದನ್ನು ಬುಶುಕನ್ ಎಂದೂ ಸಹ ಕರೆಯುತ್ತಾರೆ. TOI ಸುದ್ದಿಯ ಪ್ರಕಾರ, ಬುದ್ಧನ ಕೈ ಒಂದು ಸಿಟ್ರಸ್ ಹಣ್ಣು ಅಂದರೆ ವಿಟಮಿನ್ ಸಿ ತುಂಬಿರುವ ಹಣ್ಣು. ಇದರ ಬಣ್ಣ ನಿಂಬೆಯಂತಿರುತ್ತದೆ. ಈ ಪರಿಮಳಯುಕ್ತ ಹಣ್ಣಿನಿಂದ ಬಗೆಬಗೆಯ ತಿನಿಸುಳನ್ನು ತಯಾರಿಸಲಾಗುತ್ತದೆ.
ಇನ್ನು ಈ ಅಪರೂಪದ ಹಣ್ಣಿನ ಆರೋಗ್ಯ ಪ್ರಯೋಜನಗಳು ಏನೇನು ಎಂಬುದನ್ನು ಮುಂದೆ ತಿಳಿಯೋಣ,
ಬುದ್ಧನ ಕೈ ಹಣ್ಣನ್ನು ಅನೇಕ ರೀತಿಯ ನೋವು ನಿವಾರಕವಾಗಿ ಬಳಸಲಾಗುತ್ತದೆ. ನೋವು ನಿವಾರಕ ಏಜೆಂಟ್ಗಳಾದ ಕೂಮರಿನ್, ಬರ್ಗಾಪ್ಟೆನ್, ಡಯೋಸ್ಮಿನ್ ಮತ್ತು ಲಿಮೋನೆನ್ ಬುದ್ಧನ ಕೈ ಹಣ್ಣಿನಲ್ಲಿ ಕಂಡುಬರುತ್ತವೆ. ಇದು ಉರಿಯೂತ ನಿವಾರಕ ಗುಣಗಳಿಂದ ಕೂಡಿದ್ದು ಎಲ್ಲಾ ರೀತಿಯ ಊತವನ್ನು ಕಡಿಮೆ ಮಾಡುತ್ತದೆ. ಚರ್ಮದ ಮೇಲೆ ಕಡಿತ, ಗಾಯ ಅಥವಾ ಶಸ್ತ್ರಚಿಕಿತ್ಸೆಯಾಗಿರಬಹುದು, ಇದನ್ನು ಎಲ್ಲಾ ರೀತಿಯ ನೋವುಗಳಲ್ಲಿ ಬಳಸಲಾಗುತ್ತದೆ.
ಬುದ್ಧನ ಕೈಯು ದೇಹದಲ್ಲಿ ಸಂಭವಿಸುವ ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ. ಬುದ್ಧನ ಕೈ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ, ಅದರಲ್ಲಿರುವ ಪಾಲಿಸ್ಯಾಕರೈಡ್‌ಗಳು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಬುದ್ಧನ ಕೈ ಉರಿಯೂತ ನಿವಾರಕ. ಇದು ಕರುಳಿನಲ್ಲಿನ ಉರಿಯೂತವನ್ನು ನಿವಾರಿಸುತ್ತದೆ. ಅಷ್ಟೇ ಅಲ್ದೆ ಇದು ಮಲಬದ್ಧತೆ, ಹೊಟ್ಟೆ ಉಬ್ಬುವುದು, ಅತಿಸಾರ, ಸೆಳೆತ ಮತ್ತು ಹೊಟ್ಟೆ ನೋವಿನಿಂದ ಪರಿಹಾರವನ್ನು ನೀಡುತ್ತದೆ.
ಬುದ್ಧನ ಹಸ್ತವು ವಾಸೋಡಿಲೇಟರ್‌ನಂತೆ ಕೆಲಸ ಮಾಡುತ್ತದೆ ಮತ್ತು ಪರಿಧಮನಿಯ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ಇದರೊಂದಿಗೆ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಳೆಯನ್ನೂ ತೆಗೆದುಹಾಕುತ್ತದೆ. ವರದಿಯ ಪ್ರಕಾರ, ಬುದ್ಧನ ಹಸ್ತವು ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ಪಾರ್ಶ್ವವಾಯು ಮತ್ತು ಹೃದಯಾಘಾತವನ್ನು ತಡೆಯುತ್ತದೆ.
ಸಿಟ್ರಸ್ ಹಣ್ಣಾಗಿರುವುದರಿಂದ, ಇದು ಉಸಿರಾಟದ ಕಾಯಿಲೆಗಳ ಚಿಕಿತ್ಸೆಯಲ್ಲಿ ರಾಮಬಾಣವೆಂದು ಸಾಬೀತುಪಡಿಸುತ್ತದೆ. ವಾಯುಮಾರ್ಗಗಳನ್ನು ತೆರವುಗೊಳಿಸುವ ಮೂಲಕ ಅತಿಯಾದ ಕೆಮ್ಮು, ಕಫ ಅಥವಾ ಶೀತವನ್ನು ನಿವಾರಿಸುತ್ತದೆ. ಉಸಿರಾಟಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.