ಕೆಂಪು ಬಣ್ಣದ ವಸ್ತ್ರದಲ್ಲಿ ಸುತ್ತಿಯೇ ಬಜೆಟ್ ಯಾಕೆ ತರುತ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ !
ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬಂದಿದ್ದ ಸೂಟ್‌ಕೇಸ್‌ಗಳು ಮತ್ತು ಬ್ರೀಫ್‌ಕೇಸ್‌ಗಳ ಸಂಪ್ರದಾಯವನ್ನು 2019 ರಲ್ಲಿ ಮೋದಿ ಸರ್ಕಾರ ಕೊನೆಗೊಳಿಸಿತ್ತು. ಕೆಂಪು ಬಟ್ಟೆಯಲ್ಲಿ ಡಿಜಿಟಲ್ ಬಜೆಟ್ ಅನ್ನು ಏಕೆ ತರಲಾಗುತ್ತಿದೆ ಎನುವ ಪ್ರಶ್ನೆಗೆ ಸ್ವತಃ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದರು. ಸೂಟ್ಕೇಸ್, ಬ್ರೀಫ್ಕೇಸ್ ನನಗೆ ಇಷ್ಟವಿಲ್ಲ ಎಂದು ಅವರು ಹೇಳಿದ್ದರು. ಅಲ್ಲದೆ, ನನ್ನ ಅತ್ತೆ ಕೆಂಪು ಬಟ್ಟೆಯ ಚೀಲವನ್ನು ತಯಾರಿಸಿ ಅದಕ್ಕೆ ಪೂಜೆ ನೆರವೇರಿಸಿ ನನ್ನ ಕೈಯಲ್ಲಿ ಇಟ್ಟಿದ್ದಾರೆ. ಮಾತ್ರವಲ್ಲ ಇದು ಮನೆಯ ಚೀಲ ಎನ್ನುವ ಭಾವ ಬರದಂತೆ ಆ ಚೀಲದ ಮೇಲೆ ಅಶೋಕ ಸ್ತಂಭದ ಚಿಹ್ನೆಯನ್ನು ಹಾಕಿದ್ದಾರೆ ಎಂದಿದ್ದರು. ಇಷ್ಟು ಮಾತ್ರವಲ್ಲ ಇನ್ನೂ ಇದೆ ಕೆಂಪು ಬಟ್ಟೆಯ ಹಿಂದಿನ ಕತೆ.
ದೀಪಾವಳಿಯಂದು, ಲಕ್ಷ್ಮೀ ಪೂಜೆಯಲ್ಲಿ ಹೊಸ ಖಾತೆಗಳನ್ನು ಪ್ರಾರಂಭಿಸಲಾಗುತ್ತದೆ. ಅದಕ್ಕೂ ಕೆಂಪು ಕವರ್ ಇರುತ್ತದೆ. ಇದು ಭಾರತೀಯ ಸಂಪ್ರದಾಯ. ಇದನ್ನು ಆಲೋಚಿಸಿಯೇ ಕೆಂಪು ಬಣ್ಣದ ಬ್ಯಾಗ್ ತಂದಿದ್ದೇನೆ ಎಂದಿದ್ದರು ನಿರ್ಮಲಾ ಸೀತಾರಾಮನ್.
ಸೂಟ್ಕೇಸ್ ಸಂಪ್ರದಾಯವನ್ನು 2019 ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಮುರಿಯಲಾಗಿತ್ತು. ಹಿಂದೆ ಬಜೆಟ್ ಸೂಟ್‌ಕೇಸ್ ಮತ್ತು ಬ್ರೀಫ್‌ಕೇಸ್‌ಗಳಲ್ಲಿ ಬರುತ್ತಿತ್ತು. ಇದಲ್ಲದೇ ಸೂಟ್‌ಕೇಸ್ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ಕೂಡಾ ಈ ಸರ್ಕಾರದಲ್ಲಿ ಇಲ್ಲ.
ಹಣಕಾಸು ಸಚಿವರು ನಿನ್ನೆ ಡಿಜಿಟಲ್ ರೂಪದಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದರು.
ಈ ಹಿಂದೆ, ಹೊಸ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 28 ಅಥವಾ 29 ರಂದು ಮಂಡಿಸಲಾಗುತ್ತಿತ್ತು. ಆದರೆ ಈಗ ಪ್ರತಿ ವರ್ಷ ಫೆಬ್ರವರಿ 1 ರಂದು ಮಾತ್ರ ಬಜೆಟ್ ಮಂಡಿಸಲಾಗುತ್ತದೆ.