Diwali 2023ರ ಮೊದಲೇ ಬುಧನಿಂದ ಮಹಾವಿಪರೀತ ರಾಜಯೋಗ ನಿರ್ಮಾಣ, ಈ ಜನರ ಮೇಲೆ ಲಕ್ಷ್ಮಿ ಕೃಪೆಯಿಂದ ಭಾರಿ ಕನಕವೃಷ್ಟಿ!
ಮೇಷ ರಾಶಿ: ನಿಮ್ಮ ಪಾಲಿಗೆ ಮಹಾವಿಪರೀತ ರಾಜಯೋಗ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಅಷ್ಟಮ ಭಾವದಲ್ಲಿ ಮಂಗಳನ ಸಂಚಾರವಿದ್ದು, ಆತನ ಮೇಲೆ ಶನಿ ಹಾಗೋ ರಾಹು ಬೀರಿದ್ದಾರೆ. ಇವರಿಬ್ಬರು ಬುಧನ ಜೊತೆಗೆ ಸ್ನೇಹಭಾವದ ಸಂಬಂಧ ಹೊಂದಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ ಮತ್ತು ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾದ್ಯತೆ ಇದೆ. ವ್ಯಾಪಾರದಲ್ಲಿ ಉತ್ತಮ ಆರ್ಡರ್ ಗಳು ನಿಮಗೆ ಲಭಿಸಲಿವೆ. ಇದರಿಂದ ನಿಮ್ಮ ಆದಾಯದಲ್ಲಿ ಹೆಚ್ಚಾಗಲಿದೆ.
ಮಿಥುನ ರಾಶಿ: ಮಹಾವಿಪರೀತ ರಾಜಯೋಗ ನಿಮ್ಮ ಪಾಲಿಗೂ ಕೂಡ ಅದ್ಭುತ ಸಾಬೀತಾಗಲಿದೆ. ಏಕೆಂದರೆ ಬುಧ ನಿಮಗೆ ನಿಮ್ಮ ರಾಷ್ಯಾಧಿಪನಾಗಿದ್ದಾನೆ. ನಿಮ್ಮ ಜಾತಕದ ಮೂರನೇ ಹಾಗೂ ಆರನೇ ಮನೆಗೆ ಅಧಿಪತಿಯಾಗಿದ್ದಾನೆ. ಜೊತೆಗೆ ಶನಿ ಹಾಗೂ ರಾಹುವಿನ ದೃಷ್ಟಿ ಕೂಡ ಬೀರಿದ್ದಾರೆ. ಇದರಿಂದ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಈ ಅವಧಿಯಲ್ಲಿ ನಿಮಗೆ ವಾಹನ, ಆಸ್ತಿಪಾಸ್ತಿ ಖರೀದಿ ಯೋಗದ ಎಲ್ಲಾ ಸಂಕೇತಗಳಿವೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿವೆ.
ಕರ್ಕ ರಾಶಿ: ಬುಧ ನಿಮ್ಮ ಗೋಚರ ಜಾತಕದ ತೃತೀಯ ಹಾಗೂ ದ್ವಾದಶ ಭಾವಕ್ಕೆ ಅಧಿಪತಿ. ಶನಿ ಹಾಗೂ ರಾಹುಗಳ ದೃಷ್ಟಿ ಕೂಡ ಆತನ ಮೇಲಿರುವ ಕಾರಣ ಈ ಅವಧಿಯಲ್ಲಿ ನಿಮಗೆ ಭಾರಿ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಎಲ್ಲಾದರು ನಿಮ್ಮ ಹಣ ಸಿಲುಕಿಕೊಂಡಿದ್ದರೆ, ವಿಪರೀತ ರಾಜಯೋಗದ ಕಾರಣ ನಿಮಗೆ ಆ ಹಣ ಸಿಗಲಿದೆ. ಈ ಅವಧಿಯಲ್ಲಿ ಬಾಳಸಂಗಾತಿಯ ಜೊತೆಗೆ ನಿಮ್ಮ ಸಂಬಂಧ ಉತ್ತಮವಾಯಿರಲಿದೆ ಹಾಗೂ ನೀವು ಬೆಲೆ ಬಾಳುವ ವಸ್ತು ಖರೀದಿಸುವ ಸಾಧ್ಯತೆ ಇದೆ. ಬಿಸ್ನೆಸ್ ಮಾಡುವವರಿಗೆ ಅದರಲ್ಲೂ ವಿಶೇಷ ಲಾಭದ ಸಂಕೇತಗಳು ನಿರ್ಮಾಣಗೊಳ್ಳುತ್ತಿವೆ.
ಮಕರ ರಾಶಿ: ನಿಮ್ಮ ಜಾತಕದ ಲಾಭ ಸ್ಥಾನದಲ್ಲಿ ಈ ವಿಪರೀತ ರಾಜಯೋಗ ರೂಪುಗೊಳ್ಳುತ್ತಿದೆ. ಹೀಗಾಗಿ ನಿಮ್ಮ ಆದಾಯದಲ್ಲಿ ಜಬರ್ದಸ್ತ ಹೆಚ್ಚಳ ಸಂಭವಿಸುವ ಸಾಧ್ಯತೆ ಇದೆ. ಅದರ ಜೊತೆಗೆ ನಿಮ್ಮ ಆಸೆ ಆಕಾಂಕ್ಷೆಗಳೂ ಕೂಡ ಈಡೇರಲಿವೆ. ನಿಮಗಾಗಿ ಹೊಸ ವಾಹನ ಖರೀದಿ ಯೋಗ ರೂಪುಗೊಳ್ಳುತ್ತಿದೆ. ಹೂಡಿಕೆಯಿಂದ ನಿಮಗೆ ಲಾಭ ಸಿಗಲಿದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಲಾಭ ಸಿಗಲಿದ್ದು, ಘನತೆ-ಗೌರವ-ಪದೋನ್ನತಿ ಪ್ರಾಪ್ತಿಯಾಗಲಿದೆ. ಕಾರ್ಯಸ್ಥಳದಲ್ಲಿ ನೌಕರ ವರ್ಗದ ಜನರ ಪ್ರಭಾವ ಹೆಚ್ಚಾಗಲಿದೆ. ಹೊಸ ಜವಾಬ್ದಾರಿ ನಿಮಗೆ ಸಿಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)