ಹೊಸ ವರ್ಷದಲ್ಲಿ ಲಕ್ಷ್ಮಿ ನಾರಾಯಣ ಯೋಗದಿಂದ 5 ರಾಶಿಯವರಿಗೆ ಜಾಕ್ ಪಾಟ್, ಹೆಜ್ಜೆ ಹೆಜ್ಜೆಗೂ ಯಶಸ್ಸು, ಹಣದ ಸುರಿಮಳೆ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರ ಫೆಬ್ರವರಿ 27ರಂದು ಬುಧ ಮೀನ ರಾಶಿಗೆ ಪದಾರ್ಪಣೆ ಮಾಡಿದಾಗ ಶುಕ್ರನೊಂದಿಗೆ ಸಂಯೋಗ ಏರ್ಪಡುತ್ತದೆ. ನಂತರ ಮೇ 07, 2025ರಂದು ಬುಧ ಮೇಷ ರಾಶಿಯನ್ನು ಪ್ರವೇಶಿಸಿದಾಗಲೂ ಸಹ ಬುಧ ಶುಕ್ರರ ಯುತಿ ಉಂಟಾಗುತ್ತದೆ.
ತ್ರೈ ಮಾಸಿಕದಲ್ಲಿ ಎರಡು ಬಾರಿ ಬುಧ-ಶುಕ್ರರ ಸಂಯೋಗದಿಂದ ಅತ್ಯಂತ ಮಂಗಳಕರ ಲಕ್ಷ್ಮಿ ನಾರಾಯಣ ಯೋಗ ಆರಂಭವಾಗಲಿದೆ. ಇದರಿಂದಾಗಿ ಐದು ರಾಶಿಯವರ ಬದುಕಿನಲ್ಲಿ ಬಂಗಾರದಂತ ಸಮಯವನ್ನು ಕಾಣಲಿದ್ದಾರೆ.
ಮಿಥುನ ರಾಶಿ: ಲಕ್ಷ್ಮಿ ನಾರಾಯಣ ಯೋಗದ ಪರಿಣಾಮದಿಂದಾಗಿ ಸ್ಥಗಿತಗೊಂಡಿರುವ ಕೆಲಸಗಳಲ್ಲಿ ವೇಗವನ್ನು ಕಾಣುವಿರಿ. ಹೊಸ ಮನೆ, ಭೂಮಿ ಖರೀದಿಸುವ ನಿಮ್ಮ ಕನಸು ನನಸಾಗಲಿದೆ.
ಕರ್ಕಾಟಕ ರಾಶಿ: ಬುಧ ಶುಕ್ರರ ಯುತಿಯು ಈ ರಾಶಿಯವರಿಗೆ ಅನುಕೂಲಕರ ಫಲಿತಾಂಶವನ್ನು ನೀಡಲಿದೆ. ವೃತ್ತಿ ಬದುಕಿನಲ್ಲಿ ಮಹತ್ತರ ಸಾಧನೆಯಿಂದ ಹಣಕಾಸಿನ ಸಮಸ್ಯೆಯಿಂದ ಹೊರಬರುವಿರಿ.
ಕನ್ಯಾ ರಾಶಿ: ಲಕ್ಷ್ಮಿ ನಾರಾಯಣ ಯೋಗವು ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯ ಹಾದಿಯನ್ನು ತೆರೆಯಲಿದೆ. ವ್ಯಾಪಾರದಲ್ಲಿ ಜಾಕ್ ಪಾಟ್ ಎಂತಲೇ ಹೇಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವಿರಿ.
ವೃಶ್ಚಿಕ ರಾಶಿ: ಲಕ್ಷ್ಮಿ ನಾರಾಯಣ ಯೋಗವು ಈ ರಾಶಿಯವರಿಗೆ ಹಣದ ಸುರಿಮಳೆಯನ್ನೇ ಸುರಿಸಲಿದೆ. ಹಣಕಾಸಿನ ಸ್ಥಿತಿ ಸುಧಾರಿಸಿ ಭವಿಷ್ಯಕ್ಕಾಗಿ ಕೂಡಿಡುವಿರಿ. ವೃತ್ತಿಪರರಿಗೆ ಮೇಲಾಧಿಕಾರಿಗಳಿಂದ ಬೆಂಬಲ ಉನ್ನತ ಹುದ್ದೆ ಏರುವ ಅವಕಾಶಗಳಿವೆ.
ಮೀನ ರಾಶಿ: ಲಕ್ಷ್ಮಿ ನಾರಾಯಣ ಯೋಗವು ಈ ರಾಶಿಯವರಿಗೆ ವಿಶೇಷ ಪ್ರಯೋಜನವನ್ನು ನೀಡಲಿದೆ. ಸರ್ಕಾರಿ ಕೆಲಸಗಳಲ್ಲಿ ಜಯ ಸಾಧಿಸುವಿರಿ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿಯನು ಕಾಣುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.