Budh Uday 2024: ವ್ಯಾಪಾರದ ಕಾರಕ ಗ್ರಹ ಬುಧನ ಉದಯ, ಈ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭ!

Sun, 04 Feb 2024-10:22 pm,

Budh Uday 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಮೀನ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)  

ಕನ್ಯಾ ರಾಶಿ: ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ಬುಧ ಉದಯಿಸುತ್ತಿದ್ದಾನೆ. ನಿಮ್ಮ ರಾಶಿಗೆ ಆತ ಅಧಿಪತಿ ಕೂಡ ಹೌದು, ಹೀಗಾಗಿ ವಿವಾಹಿತರ ವೈವಾಹಿಕ ಜೀವನ ಉತ್ತಮವಾಗಿರಲಿದೆ. ವ್ಯಾಪಾರ ಉತ್ತಮವಾಗಿ ನಡೆಯಲಿದೆ ಮತ್ತು ಆರ್ಥಿಕ ರೂಪದಲ್ಲಿ ನೀವು ಸದೃಢರಾಗುವಿರಿ. ವೃತ್ತಿ ಜೀವನದಲ್ಲಿ ಉನ್ನತಿಯ ಸುವರ್ಣಾವಕಾಶಗಳು ಒದಗಿ ಬರಲಿವೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವನೆ ಸಿಗುವ ಸಾಧ್ಯತೆ ಇದೆ.   

ಕುಂಭ ರಾಶಿ: ಬುಧ ನಿಮ್ಮ ಗೋಚರ ಜಾತಕದ ಧನ ಹಾಗೂ ವಾಣಿಯ ಸ್ಥಾನದಲ್ಲಿ ಉದಯಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಆರೋಗ್ಯ ಹಾಗೂ ಕೆಲಸಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಿದ್ದು, ಧನ ವೃದ್ಧಿಗೆ ನಿಮಗೆ ಹಲವು ಅವಕಾಶಗಳು ಒದಗಿ ಬರಲಿವೆ. ಒಟ್ಟಾರೆಯಾಗಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಮಾತಿನ ಶೈಲಿಯಲ್ಲಿ ನಿಮಗೆ ಹೊಳಪು ಕಾಣಲು ಸಿಗಲಿದೆ. ಅದರಿಂದ ಜನರು ನಿಮ್ಮಿಂದ ಪ್ರಭಾವಿತರಾಗಲಿದ್ದಾರೆ. ಹೊಸ ವಾಹನ, ಜಾಮೀನು ಖರೀದಿಸುವ ಯೋಗವಿದೆ.   

ಮಕರ ರಾಶಿ: ಬುಧ ನಿಮ್ಮ ಗೋಚರ ಜಾತಕದ ತೃತೀಯ ಸ್ಥಾನದಲ್ಲಿ ಉದಯಿಸುತ್ತಿದ್ದಾನೆ. ಇದರಿಂದ ನಿಮ್ಮ ಸಾಹಸ-ಪರಾಕ್ರಮ ಹೆಚ್ಚಾಗಲಿದೆ. ವಿದೇಶದ ಜೊತೆಗೆ ವ್ಯಾಪಾರ ಸಂಬಂಧ ಹೊಂದಿದವರಿಗೆ ವಿದೇಶಕ್ಕೆ ಹೋಗುವ ಅವಕಾಶ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಣೆಗೆ ನೀವು ಸಾಕಷ್ಟು ಕಷ್ಟ ಪಡುವಿರಿ. ಬುಧ ನಿಮ್ಮ ಜಾತಕದ ಆರನೇ ಹಾಗೂ ಒಂಭತ್ತನೆ ಮನೆಗೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ ನೀವು ಅಂದುಕೊಂಡ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link