ಬುಧಾದಿತ್ಯ ರಾಜಯೋಗ: ಈ ರಾಶಿಯವರಿಗೆ ತೆರೆಯಲಿದೆ ಪ್ರಗತಿಯ ಹೊಸ ಹಾದಿ, ಹಿಡಿದ ಕೆಲಸಗಳಲ್ಲಿ ಸೋಲೆಂಬುದೇ ಇಲ್ಲ...!
ಬುಧ ಜನವರಿ 04, 2025ರಂದು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
ಬುಧನ ಸಂಕ್ರಮಣದಿಂದ ಧನು ರಾಶಿಯಲ್ಲಿ ಬುಧ ಸೂರ್ಯರ ಸಂಯೋಗ ರಚನೆಯಾಗಿ ಬುಧಾದಿತ್ಯ ರಾಜಯೋಗವೂ ನಿರ್ಮಾಣವಾಗಲಿದೆ. ಇದರಿಂದಾಗಿ ಕೆಲವರಿಗೆ ಭಾಗ್ಯೋದಯವಾಗಲಿದ
ಮೇಷ ರಾಶಿ: ಈ ಸಮಯದಲ್ಲಿ ನಿಮ್ಮ ಮಾತೇ ಬಂಡವಾಳ. ಆಕರ್ಷಕ ನುಡಿಗಳಿಂದ ಬೇರೆಯವರನ್ನು ನಿಮ್ಮತ್ತ ಸುಲಭವಾಗಿ ಸೆಳೆಯುವಿರಿ. ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ವೇಗ ಪಡೆಯಲಿವೆ. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ.
ಮಿಥುನ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಬೆಂಬಲದಿಂದ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಹಣಕಾಸಿನ ಮೂಲಗಳು ಅಧಿಕವಾಗಲಿದೆ. ನಿಮ್ಮ ಮಕ್ಕಳಿಂದ ಹೆಮ್ಮೆಯ ಕ್ಷಣಗಳನ್ನು ಆನಂದಿಸುವಿರಿ.
ಸಿಂಹ ರಾಶಿ: ಬುಧ ಸಂಚಾರವು ಹೊಸ ವ್ಯವಹಾರ ಆರಂಭಿಸಲು ಬಯಸುವವರಿಗೆ ಜಾಕ್ ಪಾಟ್ ಎಂತಲೇ ಹೇಳಬಹುದು. ಹೊಸ ಮನೆ, ವಾಹನ ಖರೀದಿ ಯೋಗವಿದೆ. ಮನೆಯಲ್ಲಿನ ವಾತಾವರಣವು ಸಕಾರಾತ್ಮಕವಾಗಿರುತ್ತದೆ.
ಕನ್ಯಾ ರಾಶಿ: ಬುಧಾದಿತ್ಯ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ಕಷ್ಟಗಳನ್ನು ಸರಿಸಿ, ಸುಖವನ್ನು ನೀಡಲಿದೆ. ಖರ್ಚುಗಳಿಗೆ ಕಡಿವಾಣ ಹಾಕಿದರೆ ಉಳಿತಾಯದಲ್ಲಿ ಯಶಸ್ವಿಯಾಗುವಿರಿ. ವ್ಯವಹಾರದಲ್ಲಿ ಭಾರೀ ಪ್ರಗತಿಯನ್ನು ಕಾಣುವಿರಿ.
ತುಲಾ ರಾಶಿ: ಬುಧ ಸಂಚಾರವು ಈ ರಾಶಿಯವರಿಗೆ ವೈಯಕ್ತಿಕ ಹಾಗೂ ವೃತ್ತಿಪರ ಜೀವನ ಎರಡರಲ್ಲೂ ಸಕಾರಾತ್ಮಕ ಪರಿಣಾಮವನ್ನು ತರಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಶುಭ ಸುದ್ದಿ ದೊರೆಯಲಿದೆ.
ಕುಂಭ ರಾಶಿ: ಬಹುಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳಲ್ಲಿ ಪ್ರಗತಿ, ಯಶಸ್ಸು ಕಂಡು ಬರಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭವಾಗಲಿದೆ. ಸಂಗಾತಿಯೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.