ಸ್ವರಾಶಿಯಲ್ಲಿ ಸೂರ್ಯನ ಜೊತೆಗೂಡಿ ಬುಧಾದಿತ್ಯ ರಾಜಯೋಗ ನಿರ್ಮಿಸಿದ ಬುಧ, ಈ ರಾಶಿಗಳ ಜನರಿಗೆ ಅಪಾರ ಧನ-ಸಮೃದ್ಧಿ ಪ್ರಾಪ್ತಿಯೋಗ!
Budhaditya Rajyog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಅಧಿಪತ್ಯದ ಕನ್ಯಾ ರಾಶಿಯಲ್ಲಿ ಬುಧ ಹಾಗೂ ಸೂರ್ಯನ ಮೈತ್ರಿಯಿಂದ ಬುಧಾದಿತ್ಯ ರಾಜಯೋಗ ನಿರ್ಮಾಣಗೊಂಡಿದ್ದು, ಇದು ಮೂರು ರಾಶಿಗಳ ಜಾತಕದ ಜನರಿಗೆ ಅಪಾರ ಲಾಭವನ್ನು ತಂದುಕೊಡಲಿದೆ. Spiritual News In Kannada
ಸಿಂಹ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ಸಂಭವಿಸಿರುವ ಕಾರಣ ಈ ಅವಧಿಯಲ್ಲಿ ನಿಮಗೆ ಉತ್ತಮ ಧನಲಾಭ ಉಂಟಾಗುವ ಸಾಧ್ಯತೆ ಇದೆ. ದೀರ್ಘಕಾಲದಿಂದ ಸಿಲುಕಿಬಿದ್ದ ನಿಮ್ಮ ಹಣ ನಿಮ್ಮತ್ತ ಮರಳಲಿದೆ. ಕೈಗೆ ತೆಗೆದುಕೊಂಡ ಕೆಲಸಗಳಲ್ಲಿ ನಿಮಗೆ ಕಾರ್ಯಸಿದ್ಧಿ ಪಾಪ್ತಿಯಾಗಲಿದೆ. ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದ್ದು, ನಿಂತುಹೋದ ನಿಮ್ಮ ಎಲ್ಲಾ ಕೆಲಸಕಾರ್ಯಗಳು ಪೂರ್ಣಗೊಂಡು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಿ ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ನಿಮ್ಮ ಸಂಬಂಧಗಳು ಸುಧಾರಿಸಲಿವೆ.
ಧನು ರಾಶಿ: ಕನ್ಯಾರಾಶಿಯಲ್ಲಿ ನಿರ್ಮಾಣಗೊಂಡಿರುವ ಬುಧಾದಿತ್ಯ ರಾಜಯೋಗ ನಿಮ್ಮ ವೃತ್ತಿ ಹಾಗೋ ವ್ಯಾಪಾರದ ದೃಷ್ಟಿಯಿಂದ ಅತ್ಯುತ್ತಮವಾಗಿರಲಿದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ರೂಪುಗೊಂಡಿದೆ. ಆಸೆ ಆಕಾಂಕ್ಷೆಗಳು ಈಡೇರಲಿವೆ. ಹೊಸ ಕೆಲಸ ಆರಂಭಿಸಲು ಇದು ಸುವರ್ಣಕಾಲ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಸುವರ್ಣಾವಕಾಶಗಳು ಒದಗಿ ಬರಲಿವೆ. ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಸ್ಥಾನಮಾನ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳ ಪಾಲಿಗೆ ಈ ಅವಧಿಯಲ್ಲಿ ಮಹತ್ವದ ಒಪ್ಪಂದ ಕುದುರುವ ಸಾಧ್ಯತೆ ಇದೆ. ಇದರಿಂದ ನಿಮಗೆ ಭವಿಷ್ಯದಲ್ಲಿ ಉತ್ತಮ ಲಾಭ ಉಂಟಾಗಲಿದೆ.
ಮಿಥುನ ರಾಶಿ:ಬುಧಾದಿತ್ಯ ರಾಜಯೋಗ ನಿಮ್ಮ ಪಾಲಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು, ಏಕೆಂದರೆ ಈ ರಾಜಯೋಗ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ನಿರ್ಮಾಣಗೊಂಡಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ವಾಹನ, ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಎಲ್ಲಾ ಭೌತಿಕ ಸುಖ ಸೌಕರ್ಯಗಳು ಪಾಪ್ತಿಯಾಗಲಿವೆ. ಜೀವನದಲ್ಲಿ ಸಕಾರಾತ್ಮಕ ಪ್ರಭಾವ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ಸಂಘರ್ಷ ಪಡುತ್ತಿರುವವರ ದಾರಿ ಸುಗಮವಾಗಲಿದೆ. ರಿಯಲ್ ಎಸ್ಟೇಟ್, ಭೂಮಿ=ಆಸ್ತಿಪಾಸ್ತಿಗೆ ಸಂಬಂಧಿಸಿದ ಜನರಿಗೆ ಸಮಯ ಅತ್ಯದ್ಭುತವಾಗಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)