Budhaditya Rajyoga: ಮೀನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ, 4 ರಾಶಿಯವರಿಗೆ ಬಂಪರ್ ಧನಲಾಭ
ಶೀಘ್ರದಲ್ಲೇ (ಮಾರ್ಚ್ 15) ಗ್ರಹಗಳ ರಾಜ ಸೂರ್ಯ ದೇವ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗ್ರಹಗಳ ರಾಜಕುಮಾರ ಬುಧ ಈಗಾಗಲೇ ಮೀನ ರಾಶಿಯಲ್ಲಿ ಉಪಸ್ಥಿತನಿದ್ದಾನೆ.
ಇದೀಗ ಮಾರ್ಚ್ 15ರಂದು ಮೀನ ರಾಶಿಗೆ ಸೂರ್ಯನ ಪ್ರವೇಶದೊಂದಿಗೆ ಈ ರಾಶಿಯಲ್ಲಿ ಬುಧ ಮತ್ತು ಸೂರ್ಯರು ಒಟ್ಟಿಗೆ ಕೂಡುವುದರಿಂದ ಶುಭಕರ ಯೋಗಗಳಲ್ಲಿ ಒಂದಾದ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಲಿದೆ.
ಬುಧಾದಿತ್ಯ ರಾಜಯೋಗದ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಯೋಗವು ನಾಲ್ಕು ರಾಶಿಯವರ ಜೀವನದಲ್ಲಿ ಸುಖ-ಸಂಪತ್ತನ್ನು ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮೀನ ರಾಶಿಯಲ್ಲಿ ರಚನೆಯಾಗುತ್ತಿರುವ ಬುಧಾದಿತ್ಯ ರಾಜಯೋಗವು ಕರ್ಕಾಟಕ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಭಾರೀ ಪ್ರಯೋಜನವನ್ನು ನೀಡಲಿದೆ. ಹಣಕಾಸಿನ ಹರಿವು ಹೆಚ್ಚಾಗಳಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಬುಧ ಮತ್ತು ಸೂರ್ಯನ ಸಂಯೋಗದಿಂದಾಗಿ ಕನ್ಯಾ ರಾಶಿಯ ವ್ಯಾಪಾರಸ್ಥರಿಗೆ ಬಂಪರ್ ಲಾಭವಾಗಲಿದೆ. ಹೊಸ ಒಪ್ಪಂದಗಳು ಕೈಗೂಡಲಿದ್ದು ಭಾರೀ ಹಣಕಾಸಿನ ಲಾಭವನ್ನು ನಿರೀಕ್ಷಿಸಬಹುದು. ನೀವು ಪ್ರೀತಿ-ಪ್ರೇಮದಲ್ಲಿದ್ದರೆ ನಿಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ.
ಬುಧಾದಿತ್ಯ ರಾಜಯೋಗವು ಮಕರ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಎದುರಾಗಿದ್ದ ಅಡೆತಡೆಗಳನ್ನು ನಿವಾರಿಸಲಿದೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ.
ಸ್ವ ರಾಶಿಯಲ್ಲಿ ನಿರ್ಮಾಣವಾಗಲಿರುವ ಬುಧಾದಿತ್ಯ ರಾಜಯೋಗವು ಮೀನ ರಾಶಿಯ ಉದ್ಯೋಗಸ್ಥರಿಗೆ ವಿಶೇಷವಾಗಿ ಪ್ರಯೋಜನವನ್ನು ನೀಡಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.