Flipkart Saleನಲ್ಲಿ 50 ಇಂಚು Ultra HD Smart tv ಮೇಲೆ ಸಿಗಲಿದೆ 24 ಸಾವಿರ ರೂ ಗಳ ರಿಯಾಯಿತಿ

Tue, 13 Jul 2021-5:03 pm,

ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್ ಟಿವಿ ಎಲ್ಇಡಿ ಪ್ಯಾನೆಲ್‌ನೊಂದಿಗೆ ಬರುತ್ತದೆ. ಇದು ಎಲ್ಲಾ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಸಪೋರ್ಟ್ ಮಾಡುತ್ತದೆ. 2,491 ರೂ ರಿಯಾಯಿತಿಯ ನಂತರ ನೀವು ಈ ಟಿವಿಯನ್ನು 17,499 ರೂಗಳಿಗೆ ಖರೀದಿಸಬಹುದು.  

ರಿಯಾಲಿಟಿ ಸ್ಮಾರ್ಟ್ ಟಿವಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಟಿವಿಯ ಬೆಲೆ 17,999 ಆಗಿದ್ದರೂ, ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ನೀವು ಈ ಟಿವಿಯನ್ನು 15,999 ಕ್ಕೆ ಅಂದರೆ ಎರಡು ಸಾವಿರ ರೂಪಾಯಿಗಳ ರಿಯಾಯಿತಿಯೊಂದಿಗೆ ಪಡೆಯಬಹುದು. ಈ ಟಿವಿಯನ್ನು ಇಎಂಐನಲ್ಲಿ ಸಹ ಖರೀದಿಸಬಹುದು.  

ಮೋಟೋರೋಲೋ ಸ್ಮಾರ್ಟ್ ಟಿವಿಯ ವಿಶೇಷತೆಯೆಂದರೆ ಅದರ ಸೌಂಡ್. ಇದು ಡಾಲ್ಬಿ ಆಯ್ಟಮ್ ಮತ್ತು ಡಾಲ್ಬಿ ವಿಷನ್ ನೊಂದಿಗೆ ಬರುತ್ತದೆ. ಇದರ ಬೆಲೆ 49,999 ಆಗಿದ್ದರೂ, ಈ ಟಿವಿಯ ಮೇಲೆ 5 ಸಾವಿರ ರೂಪಾಯಿಗಳ ರಿಯಾಯಿತಿ ಸಿಗಲಿದೆ.  ಅಂದರೆ ಈ ಟಿವಿಯನ್ನು 44,999 ರೂಗಳಿಗೆ ಖರೀದಿಸಬಹುದು.  

ಎಲ್ಜಿಯ ಎಲ್ಇಡಿ ಸ್ಮಾರ್ಟ್ ಟಿವಿ ವೆಬ್ಓಎಸ್ ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನೀವು ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ-ಹಾಟ್‌ಸ್ಟಾರ್ ಮತ್ತು ಯೂಟ್ಯೂಬ್ ಅನ್ನು ವೀಕ್ಷಿಸಬಹುದು. ಈ ಟಿವಿಯ ಬೆಲೆ 40,990 ಆಗಿದ್ದರೂ, ನೀವು ಅದೇ ಟಿವಿಯನ್ನು ಸೆಲ್‌ನಲ್ಲಿ 31,999 ರು ಗಳಿಗೆ ಖರೀದಿಸಬಹುದು. ಅಂದರೆ ಸುಮಾರು 9 ಸಾವಿರ ರೂಪಾಯಿಗಳ ರಿಯಾಯಿತಿ ಸಿಗಲಿದೆ.

iFFALCON by TCL ಮೇಲೆ ಸೇಲ್ ನಲ್ಲಿ ದೊಡ್ಡ ರಿಯಾಯಿತಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ 1,06,990 ರೂ, ಆದರೆ ಈ ಸೇಲ್ ನಲ್ಲಿ ಅದನ್ನು ಕೇವಲ 36,999 ಕ್ಕೆ ಖರೀದಿಸಬಹುದು. ಅಂದರೆ ಈ ಟಿವಿ ಮೇಲೆ 24 ಸಾವಿರ ರೂಪಾಯಿಗಳ  ರಿಯಾಯಿತಿ ಸಿಗಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link