ಅಯ್ಯಪ್ಪನ ಭಕ್ತರಿಗೆ ಕೇಂದ್ರ ಸರ್ಕಾರದ ಬಹು ದೊಡ್ಡ ಯೋಜನೆ !ಶಬರಿ ಮಲೆಗೆ ತೆರಳುವವರಿಗೆ ಬಂಪರ್ ಗಿಫ್ಟ್
ನಾಳೆಯಿಂದ ಮಂಡಲ ಸೀಸನ್ ಶುರುವಾಗಿದೆ. ಇನ್ನು ಮಕರ ಸಂಕ್ರಾಂತಿವರೆಗೆ ಶಬರಿಮಲೆಗೆ ಹರಿದು ಬರುವ ಭಕ್ತರ ದಂಡು ಕೂಡಾ ಹೆಚ್ಚಾಗುತ್ತದೆ.
ಇದೀಗ ಶಬರಿಮಲೆ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿಯೊಂದು ಬಂದಿದೆ.
ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಕೇಂದ್ರ ಸರ್ಕಾರ ವಿಶೇಷ ರೈಲುಗಳನ್ನು ಮಂಜೂರು ಮಾಡಿದೆ.
ಬೇರೆ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ವಿಶೇಷ ರೈಲುಗಳಿಗೆ ಅನುಮತಿ ನೀಡಿದೆ.
ಕೊಟ್ಟಾಯಂ, ಚಂಗನಾಶ್ಶೇರಿ ಮತ್ತು ಚೆಂಗನ್ನೂರ್ ನಿಲ್ದಾಣಗಳಲ್ಲಿ ದಟ್ಟಣೆಯನ್ನು ಪರಿಗಣಿಸಿ ಹೆಚ್ಚುವರಿ ಸೇವೆಗಳನ್ನು ಅನುಮತಿಸಲಾಗಿದೆ. ಸದ್ಯ ಏಳು ರೈಲುಗಳು ಸಂಚಾರ ಆರಂಭಿಸಿವೆ. ಶೀಘ್ರದಲ್ಲೇ ಹೆಚ್ಚಿನ ಸೇವೆಗಳಿಗೆ ಅನುಮತಿ ನೀಡಲಾಗುವುದು ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಆಗಮಿಸುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗುವುದು.
ರೈಲುಗಳಲ್ಲದೆ, ಕೊಟ್ಟಾಯಂ, ತಿರುವಲ್ಲಾ ಮತ್ತು ಚೆಂಗನ್ನೂರು ನಿಲ್ದಾಣಗಳಲ್ಲಿ ಶಬರಿಮಲೆ ಯಾತ್ರಾರ್ಥಿಗಳಿಗೆ ರೈಲ್ವೇಯು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ.