Business Idea: ಜಾನುವಾರಗಳ ಬಗ್ಗೆ ಪ್ರೀತಿ ಇದ್ದರೆ, ಇಂದೇ ಈ ಉದ್ಯಮ ಆರಂಭಿಸಿ ಕೈತುಂಬಾ ಸಂಪಾದಿಸಿ
ನೀವೂ ಕೂಡ ಸಾಕು ಪ್ರಾಣಿ ಪ್ರಿಯರಾಗಿದ್ದರೆ, ನೀವು ಮೊಲ ಸಾಕಾಣಿಕೆಯಉದ್ಯಮವನ್ನು ಆರಂಭಿಸಬಹುದು. ಕೇವಲ ನಾಲ್ಕು ಲಕ್ಷ ರೂ.ಗಳ ಆರಂಭಿಕ ಹೂಡಿಕೆಯ ಮೂಲಕ ನೀವು ಈ ಉದ್ಯಮವನ್ನು ಆರಂಭಿಸಬಹುದು. ಮೊಲಗಳ ಮೈಮೇಲಿರುವ ಕೂದಲುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಮೊಲ ಸಾಕಾಣಿಕೆ ಉದ್ಯಮದಲ್ಲಿ ಯುನಿಟ್ ಅಥವಾ ಘಟಕಗಳ ಆಧಾರದ ಮೇಲೆ ಮೊಲಗಳನ್ನು ಸಾಕಲಾಗುತ್ತದೆ. ಪ್ರತಿಯೊಂದು ಯುನಿಟ್ ನಲ್ಲಿ 3 ಗಂಡು ಮತ್ತು 7 ಹೆಚ್ಚು ಮೊಲಗಳಿರುತ್ತವೆ. ಈ ಉದ್ಯಮದಲ್ಲಿ ನೀವು ಹೆಚ್ಚಿಗೆ ಕಷ್ಟಪಡಬೇಕಾಗಿಲ್ಲ. ಪಂಜರಗಳ ಸ್ವಚ್ಚತೆ ಹಾಗೂ ಮೊಲಗಳಿಗೆ ಆಹಾರ ನೀಡಲು ಸಹಾಯಕರನ್ನು ನೇಮಿಸಿಕೊಳ್ಳಬಹುದು.
ಮೊಲಗಳ 10 ಯುನಿಟ್ ಸ್ಥಾಪನೆಗೆ ನಿಮಗೆ 2 ಲಕ್ಷ ರೂ. ಹೂಡಿಕೆ ಬೇಕಾಗಲಿದೆ. ಶೆಡ್ ಸ್ಥಾಪಿಸಲು 1.5 ಲಕ್ಷ ರೂ. ವೆಚ್ಚ ತಗುಲಲಿದೆ. ಇದೆ ರೀತಿ ಪಂಜರಗಳಿಗಾಗಿ ನೀವು 1 ರಿಂದ 1.25 ಲಖ ರೂ ಹೂಡಿಕೆ ಮಾಡಬೇಕು. ಒಂದು ಹೆಣ್ಣು ಮೊದಲ 30 ದಿನಗಳ ಗರ್ಭಾವಸ್ಥೆಯ ನಂತರೆ 6-7 ಮರಿಗಳಿಗೆ ಜನ್ಮ ನೀಡುತ್ತದೆ. ಹುಟ್ಟಿದ 45 ದಿನಗಳ ಬಳಿಕ ಒಂದು ಮರಿ 2 ಕೆ.ಜಿ ತೂಕ ಪಡೆದುಕೊಳ್ಳುತ್ತದೆ. ಅದನ್ನು ನೀವು ಮಾರಾಟ ಮಾಡಬಹುದು. ಈ ಬಿಸ್ನೆಸ್ ನಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದರೆ ನಂತರ, ನೀವು ಹೆಚ್ಚಿನ ಹೂಡಿಕೆ ಮಾಡಬೇಕಾಗಿಲ್ಲ.
ಈ ಉದ್ಯಮದಲ್ಲಿ ಸಿಗುವ ಆದಾಯದ ಕುರಿತು ಹೇಳುವುದಾದರೆ, ವರ್ಷದಲ್ಲಿ ಒಂದು ಹೆಣ್ಣು ಮೊಲ 7 ಮರಿಗಳಿಗೆ ಜನ್ಮ ನೀಡುತ್ತದೆ. ಸರಾಸರಿ ಒಂದು ವೇಳೆ ಒಂದು ಹೆಣ್ಣು ಮೊಲ 5 ಮರಿಗಳಿಗೆ ಜನ್ಮ ನೀಡಿದರೂ ಕೂಡ 7 ಹೆಣ್ಣು ಮೊಲಗಳು ಒಟ್ಟು 45 ಮೊಲಗಳಿಗೆ ಜನ್ಮ ನೀಡುತ್ತವೆ. ಅಂದರೆ, ಮೊಲದ ಒಂದು ಮರಿ ನಿಮಗೆ 2 ಲಕ್ಷ ರೂ. ಗಳಿಕೆ ಮಾಡಿ ಕೊಡಲಿದೆ. ಫಾರ್ಮ್ ಬ್ರೀಡಿಂಗ್ ಹಾಗೂ ನೂಲಿಗಾಗಿ ಈ ಮೊಲಗಳು ಬಳಕೆಯಾಗುತ್ತವೆ. ಹೀಗಾಗಿ ಮೊಲ ಸಾಕಾಣಿಕೆಯಿಂದ ನೀವು ಉತ್ತಮ ಆದಾಯ ಗಳಿಸಬಹುದು.
ಒಂದು ವರ್ಷದ ಒಟ್ಟು ಲಾಭದ ಕುರಿತು ಹೇಳುವುದಾದರೆ. ಕೇವಲ ಮೊಲಗಳ ಮರಿಗಳನ್ನು ಮಾರಾಟ ಮಾಡಿ ನೀವು 10 ಲಕ್ಷ ರೂ. ಗಳಿಕೆ ಮಾಡಬಹುದು. ಇದರಲ್ಲಿ 2 ರಿಂದ 3 ಲಕ್ಷ ರೂ. ಮೊಲಗಳ ಆಹಾರ ಹಾಗೂ ಅವುಗಳನ್ನು ನೋಡಿಕೊಳ್ಳಲು ಖರ್ಚಾಗುತ್ತದೆ. ಈ ರೀತಿ ಮೊಲಗಳ ಮರಿಗಳ ಮಾರಾಟದಿಂದ ನಿಮಗೆ ಸುಮಾರು 8 ಲಕ್ಷ ಲಾಭ ಸಿಗಲಿದೆ.
ಈ ಉದ್ಯಮವನ್ನು ಆರಂಭಿಸಲು ನೀವು ತರಬೇತಿ ಕೂಡ ಪಡೆಯಬಹುದು. ಈ ಉದ್ಯಮದ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ, ನಿಮ್ಮ ಬಳಿ ಫ್ರೇಂಚೈಸಿ ಅಆಯ್ಕೆ ಕೂಡ ಇದೆ. ಅಲ್ಲಿ ನಿಮಗೆ ರಾಬಿಟ್ ಬ್ರೀಡಿಂಗ್ ನಿಂದ ಹಿಡಿದು ಅವುಗಳ ಮಾರ್ಕೆಟಿಂಗ್ ವರೆಗೆ ಎಲ್ಲಾ ರೀತಿಯ ತರಬೇತಿಗಳನ್ನು ನೀಡಲಾಗುತ್ತದೆ. ಅಂದರೆ, ಅತ್ಯಂತ ಚಾಕಚಕ್ಯತೆಯಿಂದ ನೀವು ಈ ಉದ್ಯಮವನ್ನು ನಡೆಸಬಹುದು ಹಾಗೂ ಲಕ್ಷಾಂತರ ರೂಪಾಯಿ ಗಳಿಕೆ ಮಾಡಬಹುದು.