Business Idea: 50 ಸಾವಿರ ಹೂಡಿಕೆಯಿಂದ ಈ ಉದ್ಯಮ ಆರಂಭಿಸಿ, ಕೈತುಂಬಾ ಸಂಪಾದಿಸಿ
Business Idea - ಅತ್ಯಲ್ಪ ಹೂಡಿಕೆಯ ಮೂಲಕ ಆರಂಭಿಸಲಾಗುವ ಬಿಸ್ನೆಸ್ ನಿಂದ ಬಂಪರ್ ಆದಾಯ ಕೂಡ ಬರುತ್ತದೆ. ಇಂದು ನಾವು ನಿಮಗೆ ಮಾಹಿತಿ ನೀಡಲು ಹೊರಟಿರುವ ಉದ್ಯಮ ಪರಿಕಲ್ಪನೆ ಎಂದರೆ ಅದು ಎಲ್ಇಡಿ ಬಲ್ಬ್ ತಯಾರಿಸುವ ಉದ್ಯಮ. ಈ ಉದ್ಯಮವನ್ನು ಆರಂಭಿಸಲು ನಿಮಗೆ ಅತಿ ಹೆಚ್ಚು ಹೂಡಿಕೆ ಮಾಡುವ ಅವಶ್ಯಕತೆಯೂ ಕೂಡ ಇಲ್ಲ ಮತ್ತು ಇದನ್ನು ನೀವು ನಿಮ್ಮ ಮನೆಯಿಂದಲೇ ಆರಂಭಿಸಬಹುದು. ಇದಕ್ಕಾಗಿ ನೀವು ಕೇವಲ 50 ಸಾವಿರ ಹೂಡಿಕೆ ಮಾಡಿದರೆ ಸಾಕು.
ಈ ಉದ್ಯಮವನ್ನು ಆರಂಭಿಸಲು ಮತ್ತು ಉತ್ತೇಜಿಸಲು ಸರ್ಕಾರ ನಿಮಗೆ ಸಬ್ಸಿಡಿ ಕೂಡ ನೀಡುತ್ತದೆ. ಕೇವಲ ಈ ಉದ್ಯಮ ಮಾತ್ರವಲ್ಲಿ ಇಂತಹ ಹಲವು ಉದ್ಯಮ ಆರಂಭಿಸಲು ಸರ್ಕಾರ ನಿಮಗೆ ಸಬ್ಸಿಡಿ ನೀಡುತ್ತದೆ. ಒಂದೊಮ್ಮೆ ಸರ್ಕಾರದಿಂದ ಸಬ್ಸಿಡಿ ದೊರೆತ ಬಳಿಕ ನಿಮ್ಮ ಹೂಡಿಕೆಯ ಮೊತ್ತವು ಕೂಡ ಕಡಿಮೆಯಾಗಲಿದೆ. ನೀವು ಕೇವಲ 50 ಸಾವಿರ ರೂ. ಹೂಡಿಕೆ ಮಾಡಿದರೆ ಸಾಕು.
ನಿಮ್ಮ ಪ್ಲಾಂಟ್ ನಲ್ಲಿ ಒಂದು ಎಲ್ಇಡಿ ಬಲ್ಬ್ ತಯಾರಿಸಲು ನೀವು ಕೇವಲ 40 ರೂ.ಗಳಿಂದ 50 ರೂ. ಹೂಡಿಕೆ ಮಾಡಿದರೆ ಸಾಕು. ಮಾರುಕಟ್ಟೆಯಲ್ಲಿ ಈ ಬಲ್ಬ್ 80 ರಿಂದ 100 ರೂ.ಗಳಿಗೆ ಮಾರಾಟವಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಈ ಉದ್ಯಮ ಆರಂಭಿಸಿ ನೀವು ದಿನಕ್ಕೆ 100 ಬಲ್ಬ್ ಗಳನ್ನು ಮಾರಾಟ ಮಾಡಿದರೂ ಕೂಡ ದಿನಕ್ಕೆ 4 ರಿಂದ 5 ಸಾವಿರ ಆದಾಯವನ್ನು ಸಂಪಾದಿಸಬಹುದು. ನಂತರ ಸ್ವಲ್ಪ ಕಾಲದ ಬಳಿಕ ನೀವು ನಿಮ್ಮ ಉದ್ಯಮವನ್ನು ನಿಧಾನಕ್ಕೆ ಬೆಳೆಸಬಹುದು.
ಎಲ್ಇಡಿ ಬಲ್ಬ್ ಅನ್ನು ಹೇಗೆ ತಯಾರಿಸಬೇಕು, ಅದನ್ನು ತಯಾರಿಸುವಾಗ ಯಾವ ಯಾವ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಹೇಳಿಕೊಡಲು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳು ತರಬೇತಿಯನ್ನು ನೀಡುತ್ತವೆ. ಎಲ್ಇಡಿ ಬಲ್ಬ್ ತಯಾರಿಸುವ ಕಂಪನಿಗಳು ಕೂಡ ಇದಕ್ಕಾಗಿ ನಿಮಗೆ ತರಬೇಡಿ ನೀಡುತ್ತವೆ. ಇದರ ಟ್ರೇನಿಂಗ್ ನಲ್ಲಿ ನಿಮಗೆ ಪ್ರಾಯೋಗಿಕ ಹಾಗೂ ಥಿಯರಿ ಎರಡನ್ನು ಕೂಡ ಹೇಳಿಕೊಡಲಾಗುತ್ತದೆ. ಇದರಿಂದ ನೀವು ಉದ್ಯಮದ ಸೂಕ್ಷ್ಮ ಸಂಗತಿಗಳನ್ನು ತಿಳಿದುಕೊಳ್ಳಬಹುದು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಇಡಿ ಬಲ್ಬ್ ಗಳಿಗಾಗಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಕಷ್ಟು ಬೆಳಕು ನೀಡುವ ಮತ್ತು ವಿದ್ಯುತ್ ಶಕ್ತಿ ಉಳಿತಾಯ ಮಾಡುವ ಹಾಗೂ ಪ್ಲಾಸ್ಟಿಕ್ ನಿಂದ ತಯಾರಾಗುವ ಈ ಬಲ್ಬ್, ಗಾಜಿನ ಬಲ್ಬ್ ಹೋಲಿಕೆಯಲ್ಲಿ ಇದು ದೀರ್ಘಕಾಲ ಬಾಳಿಕೆ ಬರುತ್ತದೆ.