ಮಜ್ಜಿಗೆ ಜೊತೆ ಈ ಎಲೆಯ ರಸ ಕುಡಿದರೆ ಸಾಕು, ಯುರಿಕ್ ಆಸಿಡ್ ಹರಳುಗಳ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು!
ಯುರಿಕ್ ಆಸಿಡ್ ಪ್ರಮಾಣ ದೇಹದಲ್ಲಿ ಅತಿಯಾದಾಗ ತೀವ್ರವಾದ ಕೀಲು ನೋವನ್ನು ಉಂಟುಮಾಡುತ್ತದೆ. ದೇಹದಿಂದ ಹೆಚ್ಚಿನ ಯುರಿಕ್ ಆಸಿಡ್ ತೆಗೆದುಹಾಕಲು ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ಬೇವು ಯುರಿಕ್ ಆಸಿಡ್ ಹರಳುಗಳನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಬೇವಿನ ಗುಣಲಕ್ಷಣಗಳು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
ದಿನನಿತ್ಯ ಒಂದೆರಡು ಬೇವಿನ ಎಲೆಗಳನ್ನು ತಂದು, ಚೆನ್ನಾಗಿ ತೊಳೆದು ಅದರ ರಸ ಹಿಂಡಿ ಕುಡಿದರೆ ಯುರಿಕ್ ಆಸಿಡ್ ಮಟ್ಟ ಕಡಿಮೆಯಾಗುವುದು.
ಕೊತ್ತಂಬರಿ ಸೊಪ್ಪು ದೇಹದಿಂದ ಯುರಿಕ್ ಆಸಿಡ್ ಹರಳುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿ ಯುರಿಕ್ ಆಸಿಡ್ ಅನ್ನು ಮೂತ್ರದೊಂದಿಗೆ ಹೊರಹಾಕುವ ಗುಣವಿದೆ. ದೇಹದಲ್ಲಿ ಯುರಿಕ್ ಆಸಿಡ್ ಮಟ್ಟ ಹೆಚ್ಚಾದಾಗ ಕೊತ್ತಂಬರಿ ರಸವನ್ನು ಮಜ್ಜಿಗೆಗೆ ಬೆರೆಸಿ ಕುಡಿಯಬೇಕು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.