ಮಜ್ಜಿಗೆಯಲ್ಲಿ ಇದನ್ನು ಹಾಕಿ ಕುಡಿದರೆ ಸಾಕು, ಯುರಿಕ್ ಆಸಿಡ್ ಹರಳುಗಳು ಕರಗಿ ನೀರಾಗಿ.. ಕಿಡ್ನಿ ಸ್ಟೋನ್ ಸಹ ಪುಡಿಯಾಗಿ ಹೊರ ಬರುತ್ತದೆ!
ಯುರಿಕ್ ಆಸಿಡ್ ದೇಹದಲ್ಲಿ ಅಧಿಕವಾದರೆ ಕೈ ಮತ್ತು ಕಾಲುಗಳ ಗಂಟುಗಳಲ್ಲಿ ಅಸಹನೀಯ ನೋವು ಶುರುವಾಗುತ್ತದೆ. ಎದ್ದೇಳಲು ಮತ್ತು ಕುಳಿತುಕೊಳ್ಳಲು ಸಹ ಕಷ್ಟವಾಗುತ್ತದೆ.
ದೇಹದಲ್ಲಿ ಹೆಚ್ಚಾದ ಯುರಿಕ್ ಆಸಿಡ್ ಮೂಳೆಗಳ ಸಂದುಗಳಲ್ಲಿ ಹರಳುಗಳ ರೂಪದಲ್ಲಿ ಶೇಖರಣೆಯಾಗುತ್ತದೆ. ಅಧಿಕ ಯುರಿಕ್ ಆಸಿಡ್ ರಕ್ತದೊತ್ತಡ, ಥೈರಾಯ್ಡ್ ಮತ್ತು ಮಧುಮೇಹದಂತಹ ಕಾಯಿಲೆಗಳಿಗೂ ಕಾರಣವಾಗಬಹುದು.
ಯುರಿಕ್ ಆಸಿಡ್ ಅತಿಯಾದಾಗ ಮೊಸರಿನ ಬದಲು ಮಜ್ಜಿಗೆ ಸೇವಿಸುವುದು ಪ್ರಯೋಜನಕಾರಿಯಾಗಿದೆ. ಮಜ್ಜಿಗೆ ಸೇವನೆಯಿಂದ ದೇಹವು ಹೈಡ್ರೇಟ್ ಆಗಿರುತ್ತದೆ. ಆದರೆ ಮಜ್ಜಿಗೆ ಜೊತೆ ಈ ಎಲೆಯ ರಸ ಸೇರಿಸಿ ಕುಡಿಯಬೇಕು.
10 ರಿಂದ 15 ಕರಿಬೇವಿನ ಎಲೆಗಳನ್ನು ನುಣ್ಣಗೆ ಕತ್ತರಿಸಿ ಒಂದು ಲೋಟ ಮಜ್ಜಿಗೆಯಲ್ಲಿ ಸೇರಿಸಿ ಮುಚ್ಚಿಡಿ. ಸುಮಾರು 1 ಗಂಟೆಗಳ ಕಾಲ ಬಿಟ್ಟು ನಂತರ ಈ ಮಜ್ಜಿಗೆ ಕುಡಿಯಿರಿ. ಇದು ಯುರಿಕ್ ಆಸಿಡ್ ಸಮಸ್ಯೆಗೆ ಪರಿಹಾರ ನೀಡಬಹುದು.
ಕರಿಬೇವಿನ ಎಲೆಗಳು ರಕ್ತದಲ್ಲಿನ ಯುರಿಕ್ ಆಸಿಡ್ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಕರಿಬೇವು ಕಿಡ್ನಿ ಸ್ಟೋನ್ ನಿವಾರಣೆಗೂ ಉತ್ತಮವಾಗಿದೆ. ಇದನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಕೂಡ ಬಾಧಿಸುವುದಿಲ್ಲ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.