ಮುಂದಿನ 12 ವರ್ಷ ಈ ರಾಶಿಗೆ ಸಿರಿವಂತ ಯೋಗ: ದುಡ್ಡಿನ ಮಳೆ ಖಚಿತ, ಹೆಜ್ಜೆಹೆಜ್ಜೆಗೂ ಯಶಸ್ಸು, ಭಾಗ್ಯ ಬೆಳಗಲಿದೆ ಬೆನಕನ ಅಮಾವಾಸ್ಯೆ
ಬೆನಕನ ಅಮಾವಾಸ್ಯೆ ಅಥವಾ ಶ್ರಾವಣ ಅಮಾವಾಸ್ಯೆ ದಿನದಂದು ಅದ್ಭುತ ಯೋಗ ರೂಪಗೊಳ್ಳುತ್ತಿದೆ. ಇಂದು ಈ ಶುಭಯೋಗದ ದಿನವಾಗಿದ್ದು, ಸಾಧ್ಯ ಯೋಗ, ಬುಧಾದಿತ್ಯ ಯೋಗ ಮತ್ತು ಪೂರ್ವಫಲ್ಗುಣಿ ನಕ್ಷತ್ರದ ಶುಭ ಸಂಯೋಗಗಳು ಸೃಷ್ಟಿಯಾಗಲಿದೆ. ಈ ಬೆನಕನ ಅಮಾವಾಸ್ಯೆ ಕೆಲ ರಾಶಿಗಳಿಗೆ ಶುಭವನ್ನುಂಟು ಮಾಡಲಿದ
ಇನ್ನು ಬೆನಕನ ಅಮವಾಸ್ಯೆಯು ಸೆಪ್ಟೆಂಬರ್ 14 ರಂದು ಮುಂಜಾನೆ 4.48 ಕ್ಕೆ ಪ್ರಾರಂಭವಾಗಿ, ಸೆಪ್ಟೆಂಬರ್ 15 ರಂದು ಬೆಳಗ್ಗೆ 7.09 ಕ್ಕೆ ಕೊನೆಗೊಳ್ಳುತ್ತದೆ
ಈ ಅಮವಾಸ್ಯೆಯನ್ನು ಕುಶ ಗ್ರಹಣಿ ಅಮಾವಾಸ್ಯೆ, ಕುಷೋತ್ಪತಿನಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ಪೂಜೆಗೆ ಬಳಸಲಾಗುವ ಕುಶ (ಹಸಿರು ಹುಲ್ಲು)ವನ್ನು 12 ವರ್ಷಗಳವರೆಗೆ ಬಳಕೆ ಮಾಡಬಹುದು. ಹೀಗೆ ಮಾಡಿದೆ ಸಿರಿತನದ ಯೋಗ ಸಿಗಲಿದೆ ಎಂದು ಹೇಳಲಾಗುತ್ತದೆ.
ಬೆನಕನ ಅಮಾವಾಸ್ಯೆ ದಿನದಂದು ರೂಪುಗೊಂಡ ಸಿದ್ಧ ಯೋಗ ಸೆಪ್ಟೆಂಬರ್ 15ರಂದು ನಸುಕಿನ ಜಾವ 2.59 ರವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಪೂಜೆಗಳನ್ನು ಮಾಡಿದರೆ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ಬೆನಕನ ಅಮವಾಸ್ಯೆ ಶುಭವನ್ನುಂಟು ಮಾಡುವ ರಾಶಿಗಳು ಯಾವುವು ಎಂದು ತಿಳಿಯೋಣ,
ವೃಷಭ ರಾಶಿ: ಬೆನಕನ ಅಮಾವಾಸ್ಯೆಯ ವೃಷಭ ರಾಶಿಯ ಜನರಿಗೆ ಸಂಪತ್ತನ್ನು ನೀಡಲಿದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ, ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ವ್ಯವಹಾರದಲ್ಲಿ ಉನ್ನತಿ ಭಾಗ್ಯ ಇರಲಿದೆ.
ತುಲಾ ರಾಶಿ: ಬೆನಕನ ಅಮಾವಾಸ್ಯೆ ಅಥವಾ ಶ್ರಾವಣ ಅಮವಾಸ್ಯೆ ತುಲಾ ರಾಶಿಯವರಿಗೆ ಶುಭವನ್ನುಂಟು ಮಾಡಲಿದೆ. ವೃತ್ತಿಯಲ್ಲಿ ಬ್ರಹ್ಮಾಂಡ ಗೆಲುವು ನಿಮ್ಮದಾಗಲಿದೆ. ಬಡ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಿಸಿ ಸಂತೋಷ ನೆಲೆಸಲಿದೆ.
ವೃಶ್ಚಿಕ ರಾಶಿ: ಈ ರಾಶಿಯ ಜನರಿಗೆ ಬೆನಕನ ಅಮಾವಾಸ್ಯೆ ಪ್ರಯೋಜನ ನೀಡಲಿದೆ.ವೃತ್ತಿಜೀವನದಲ್ಲಿ ಪ್ರಗತಿಗೆ ಅವಕಾಶವಿದೆ. ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸಂತಸದ ಸುದ್ದಿ ಸಿಗಲಿದೆ. ವ್ಯವಹಾರದಲ್ಲಿ ಲಾಭವಾಗಲಿದೆ.
ಕನ್ಯಾ ರಾಶಿ: ಬೆನಕನ ಅಮಾವಾಸ್ಯೆ ಅಥವಾ ಶ್ರಾವಣ ಅಮವಾಸ್ಯೆ ಕನ್ಯಾ ರಾಶಿಯ ಜನರ ಜೀವನದಲ್ಲಿ ಸಂತೋಷವನ್ನು ನೀಡಲಿದೆ. ವ್ಯಾಪಾರ ಮಾಡುವ ಜನರಿಗೆ ಲಾಭವಾಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)