ಈ ಎಣ್ಣೆಯೊಂದಿಗೆ ಕರ್ಪೂರದ ಪುಡಿ ಬೆರೆಸಿ ಹಚ್ಚಿ… ಒಂದೇ ಒಂದು ಬಿಳಿಕೂದಲು ಸಹ ಕಾಣಲು ಸಿಗಲ್ಲ!
ನೀವು ಎಂದಾದರೂ ಕರ್ಪೂರದ ಎಣ್ಣೆ ಟ್ರೈ ಮಾಡಿದ್ದೀರಾ? ಇದು ಬಿಳಿಕೂದಲು ಸೇರಿದಂತೆ ಕೂದಲಿಗೆ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡುತ್ತದೆ.
ಕರ್ಪೂರದ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಬಹುದು. ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಕರ್ಪೂರದ ಪುಡಿಯನ್ನು ಬೆರೆಸಿ ಕೊಂಚ ಸಮಯದ ಬಳಿಕ ನೆತ್ತಿಗೆ ಹಚ್ಚಿದರೆ ಸಾಕು. ಹೀಗೆ ಮಾಡುವುದರಿಂದ ನೆತ್ತಿಯಲ್ಲಿ ರಕ್ತದ ಹರಿವು ಸುಧಾರಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೆ, ಕೂದಲಿನ ಬೇರುಗಳು ಬಲಗೊಳ್ಳುವಂತೆ ಮಾಡುತ್ತದೆ.
ಕರ್ಪೂರವು ಆರ್ಧ್ರಕ ಗುಣಗಳನ್ನು ಹೊಂದಿದೆ, ಹೀಗಾಗಿ ಇದನ್ನು ಕೂದಲಿಗೆ ಹಚ್ಚುವುದರಿಂದ, ಸ್ಪ್ಲಿಟ್ಸ್ ಅಂದರೆ, ಕೂದಲಿಗೆ ತುದಿ ಒಡೆಯುವ ಸಮಸ್ಯೆ ಕಡಿಮೆಯಾಗುತ್ತದೆ.
ಕರ್ಪೂರವು ಆಂಟಿ-ಡ್ಯಾಂಡ್ರಫ್ ಅಂಶವಾಗಿದೆ. ಅದರ ಆಂಟಿ ಫಂಗಲ್ ಗುಣವು ಉರಿಯೂತವನ್ನು ಕಡಿಮೆ ಮಾಡುವುದಲ್ಲದೆ, ತೇವಾಂಶವನ್ನು ಒದಗಿಸುವ ಮೂಲಕ ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.
ಮಾಲಿನ್ಯದಿಂದ ನೆತ್ತಿಯ ಮೇಲೆ ತುರಿಕೆ ಮತ್ತು ಸುಡುವ ಅನುಭವ ಆಗುತ್ತಿದ್ದರೆ, ಕರ್ಪೂರದ ಎಣ್ಣೆಯು ಪ್ರಯೋಜನಕಾರಿಯಾಗಿದೆ.ಕರ್ಪೂರವು ನೈಸರ್ಗಿಕ ನೋವು ನಿವಾರಕ ಗುಣಗಳನ್ನು ಹೊಂದಿದ್ದು, ಇದು ನೆತ್ತಿಯ ಮೇಲೆ ಯಾವುದೇ ರೀತಿಯ ಸೋಂಕಿನಿಂದ ಉಂಟಾಗುವ ತುರಿಕೆ ಮತ್ತು ಉರಿಯುವಿಕೆಯನ್ನು ಕಡಿಮೆ ಮಾಡುತ್ತದೆ.
ಕೂದಲು ಹೆಚ್ಚು ಉದುರುತ್ತಿದ್ದರೆ ಕರ್ಪೂರ ಎಣ್ಣೆಯು ಕೂದಲನ್ನು ಬಲಪಡಿಸುತ್ತದೆ. ಕೂದಲಿನ ಕಿರುಚೀಲಗಳು ಬಲಗೊಳ್ಳುತ್ತವೆ ಮತ್ತು ಕೂದಲಿನ ಬೆಳವಣಿಗೆಯೂ ಹೆಚ್ಚುತ್ತದೆ,
ಬಿಳಿ ಕೂದಲಿನ ಸಮಸ್ಯೆಯಲ್ಲಿ ಕರ್ಪೂರ ಎಣ್ಣೆಯು ಸಹ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ಕೂದಲನ್ನು ದೀರ್ಘಕಾಲದವರೆಗೆ ನೈಸರ್ಗಿಕವಾಗಿ ಕಪ್ಪಾಗಿಡಲು ಸಹಾಯ ಮಾಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)