ಈ ಆ್ಯಂಕರ್ ಸ್ಟೇಡಿಯಂಗೆ ಬಂದ್ರೆ ಕ್ರಿಕೆಟಿಗರು ಬ್ಯಾಟ್‌ ಹಿಡ್ಕೊಂಡು ಈಕೆ ಹಿಂದೆ ಬರ್ತಾರೆ..!! ಯಾರು ಗೊತ್ತೆ ಈ ಬೋಲ್ಡ್‌ ಬ್ಯೂಟಿ..

Thu, 12 Sep 2024-6:16 pm,

ಹೌದು.. ಈಕೆ ಹೆಸರು ಯೆಶಾ ಸಾಗರ್... ತನ್ನ ಅದ್ಭುತ ನೋಟ ಮತ್ತು ಕ್ರೀಡಾ ನಿರೂಪಕಿಯಾಗಿ ಕ್ರಿಕೆಟ್ ಪ್ರಪಂಚದ ಮೇಲೆ ಮಹತ್ವದ ಪ್ರಭಾವ ಬೀರಿದ್ದಾರೆ. ಮಾಡೆಲಿಂಗ್ ಮತ್ತು ನಟನೆಯಿಂದ ಕ್ರೀಡಾ ನಿರೂಪಕಿಯಾಗಿ ಗುರುತಿಸಿಕೊಂಡಿ ಈ ರೂಪಸಿಗೆ ಸಾಕಷ್ಟು ಜನ ಫ್ಯಾನ್ಸ್‌ ಇದ್ದಾರೆ...  

ಡಿಸೆಂಬರ್ 14 ರಂದು ಜನಿಸಿದ ಯೆಶಾ ಸಾಗರ್ ಅವರು ಕೆನಡಾದ ಬಹುಮುಖ ಪ್ರತಿಭೆ.. ವಿವಿಧ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದಾರೆ. ರೂಪದರ್ಶಿ, ನಟಿ, ಫಿಟ್ನೆಸ್ ಕೋಚ್‌ ಮತ್ತು ಪ್ರಸ್ತುತ ಕ್ರಿಕೆಟ್ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

ಯೆಶಾ ಮೂಲತಃ ಭಾರತದ ಪಂಜಾಬ್‌ನವರು, ಹೆಚ್ಚಿನ ಶಿಕ್ಷಣವನ್ನು ಮುಂದುವರಿಸಲು ಡಿಸೆಂಬರ್ 2015 ರಲ್ಲಿ ಕೆನಡಾದ ಟೊರೊಂಟೊಗೆ ತೆರಳುವ ಮೊದಲು ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.  

ಗ್ಲೋಬಲ್ T20 ಕೆನಡಾ ಟೂರ್ನಮೆಂಟ್‌ನಾದ್ಯಂತ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸುವ ಮೂಲಕ ಯೆಶಾ ಮುನ್ನೆಲೆಗೆ ಬಂದರು.. ಈಕೆಯ ಸೌಂದರ್ಯ ಮತ್ತು ಮಾತುಗಾರಿಕೆ, ಆಟಗಾರರ ಸಂದರ್ಶನಗಳನ್ನು ನಡೆಸುವ ವಿಧಾನ ಈಕೆ ವೃತ್ತಿ ಜೀವನಕ್ಕೆ ಪ್ಲಸ್‌ ಪಾಯಿಂಟ್‌ ಆಯ್ತು..   

ಯೆಶಾ ಸಾಗರ್ ಮಾಡೆಲಿಂಗ್‌ನಿಂದ ಬಂದು ಇಂದು  ಕ್ರೀಡಾ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ.. ಅಷ್ಟೇ ಅಲ್ಲ, ಫಿಟ್‌ನೆಸ್ ಉದ್ಯಮದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ, ಅನೇಕರಿಗೆ ಪ್ರೇರಣೆಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಮ್ಯಾಗ್ನಮ್ ನ್ಯೂಟ್ರಾಸ್ಯುಟಿಕಲ್ಸ್ ಮತ್ತು ಪ್ರಿಸಿಶನ್ ನ್ಯೂಟ್ರಿಷನ್‌ನಂತಹ ಹೆಸರಾಂತ ಬ್ರಾಂಡ್‌ಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದಾಳೆ. ಯೆಶಾ ವಿಭಿನ್ನ ಕಂಟೆಂಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಪಾಲೋಯಿಂಗ್‌ ಹೊಂದಿದ್ದಾಳೆ..   

ಮ್ಯಾಕ್ಸಿ ಡ್ರೆಸ್‌ಗಳಿಂದ ಬಿಕಿನಿ ವರೆಗೂ ನಿರ್ಭಯವಾಗಿ ಧರಿಸಿ ಪೋಸ್‌ ನೀಡುವ ಸುಂದರಿ, ತನ್ನ ಫ್ಯಾಶನ್ ಸೆನ್ಸ್‌ನಿಂದ ನೆಟ್ಟಿಗರಿಗೆ ನೆಚ್ಚಿನ ತಾರೆಯಾಗಿದ್ದಾಳೆ. ಆಗಾಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಸ್‌ ಹಂಚಿಕೊಳ್ಳುತ್ತಿರುತ್ತಾಳೆ..  

ಯೆಶಾ ಸಾಗರ್ ಅವರು ಪರ್ಮಿಶ್ ವರ್ಮಾ, ಗುಡ್ ಸಿಧು, ಆರ್ಶ್ ಬೆನಿಪಾಲ್, ಗಿಪ್ಪಿ ಗ್ರೆವಾಲ್, ಕುಲ್ಬೀರ್ ಜಿಂಜೇರ್ ಮತ್ತು ಪ್ರೇಮ್ ಧಿಲ್ಲಾನ್ ಅವರಂತಹ ಪ್ರಸಿದ್ಧ ಕಲಾವಿದರ ಆಲ್ಬಮ್‌ ಸಾಂಗ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.    

ಯೆಶಾ ಸಾಗರ್ ಅವರನ್ನು ಪರ್ಮಿಶ್ ವರ್ಮಾ ಅವರ "ಚಿರ್ರಿ ಉದ್ದ್ ಕಾ ಉದ್ದ್" ಮ್ಯೂಸಿಕ್‌ ಆಲ್ಬಂ ವೀಡಿಯೊದಲ್ಲಿ ನೋಡಬಹುದು. ಈ ವಿಡಿಯೋ ಯೂಟ್ಯೂಬ್‌ನಲ್ಲಿ 50 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link