ಒಗ್ಗರಣೆ ಡಬ್ಬಿಯಲ್ಲಿರುವ ಈ ವಸ್ತು ಚಿಟಿಕೆಯಷ್ಟು ತಿಂದರೆ 30 ದಿನಗಳವರೆಗೆ ಕಂಟ್ರೋಲ್‌ ತಪ್ಪಲ್ಲ ಬ್ಲಡ್‌ ಶುಗರ್!‌ ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿ

Wed, 16 Oct 2024-3:39 pm,

ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡುವುದು ಅವಶ್ಯಕ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಕೊರತೆ ಉಂಟಾದಾಗ ಮಧುಮೇಹ ಬರುತ್ತದೆ. ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಅಥವಾ ಇನ್ಸುಲಿನ್ ಉತ್ಪಾದನೆಯನ್ನು ನಿಲ್ಲಿಸುತ್ತದೆ

ರಕ್ತದಲ್ಲಿನ ಸಕ್ಕರೆಯ ಮಟ್ಟವು ಅಧಿಕವಾಗಿದ್ದರೆ, ಅನೇಕ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಅಥವಾ ಹೆಚ್ಚಿರಬಾರದು. ಕಡಿಮೆ ಮಟ್ಟದ ಮಧುಮೇಹವನ್ನು ಹೈಪೊಗ್ಲಿಸಿಮಿಯಾ ಎಂದೂ, ಹೆಚ್ಚಿನ ಮಟ್ಟವನ್ನು ಹೈಪರ್ಗ್ಲೈಸೀಮಿಯಾ ಎಂದು ಕರೆಯಲಾಗುತ್ತದೆ.

 

ಇನ್ಸುಲಿನ್ ಒಂದು ರೀತಿಯ ಹಾರ್ಮೋನ್. ಇದು ಜೀರ್ಣಕಾರಿ ಗ್ರಂಥಿಯಿಂದ ಉತ್ಪತ್ತಿಯಾಗಿ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಔಷಧಿಗಳನ್ನು ತೆಗೆದುಕೊಳ್ಳುವುದು, ಒತ್ತಡದಿಂದ ದೂರವಿರುವುದು ಮತ್ತು ಆಹಾರವನ್ನು ನಿಯಂತ್ರಿಸುವುದು ಮುಖ್ಯವಾಗಿದೆ.

 

ಮಧುಮೇಹವನ್ನು ನಿಯಂತ್ರಿಸುವಲ್ಲಿ ಕೆಲವು ಆಯುರ್ವೇದ ಪರಿಹಾರಗಳು ಸಹ ಪರಿಣಾಮಕಾರಿ. ಅದರಲ್ಲಿ ಒಂದು ಹಸಿರು ಏಲಕ್ಕಿ. ಇದರಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದ್ದು, ಇದನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

 

ಜೀವಸತ್ವಗಳು, ಖನಿಜಗಳು, ಕಬ್ಬಿಣ, ಮ್ಯಾಂಗನೀಸ್, ಕ್ಯಾಲ್ಸಿಯಂ, ರೈಬೋಫ್ಲಾವಿನ್, ನಿಯಾಸಿನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಅನೇಕ ರೀತಿಯ ಪೋಷಕಾಂಶಗಳು ಏಲಕ್ಕಿಯಲ್ಲಿದ್ದು ದೇಹವನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿ ಅನೇಕ ರೀತಿಯ ಆಂಟಿಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಹೀಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.

 

ಹಸಿರು ಏಲಕ್ಕಿಯಿಂದ ನೀರು ತಯಾರಿಸಿಕೊಂಡು ಸೇವಿಸಿದರೆ ಸಕ್ಕರೆ ನಿಯಂತ್ರಣವಾಗುವುದಲ್ಲದೆ ದೇಹಕ್ಕೂ ಹಲವು ಲಾಭಗಳು ಸಿಗುತ್ತವೆ. ಹಸಿರು ಏಲಕ್ಕಿ ಸಕ್ಕರೆಯನ್ನು ಹೇಗೆ ನಿಯಂತ್ರಿಸುತ್ತದೆ ಮತ್ತು ದೇಹಕ್ಕೆ ಅದರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.

 

ಹೆಲ್ತ್‌ ಲೈನ್‌ ಸುದ್ದಿ ಪ್ರಕಾರ, ಏಲಕ್ಕಿಯನ್ನು ಪುಡಿಯ ರೂಪದಲ್ಲಿ ಸೇವಿಸಿದರೂ ಅಥವಾ ಅದರ ನೀರನ್ನು ಕುಡಿಯುವುದರಿಂದಲೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಡಬಹುದು.

 

ಹಸಿರು ಏಲಕ್ಕಿ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಮೌತ್ ಫ್ರೆಶ್ನರ್ ಆಗಿಯೂ ಬಳಕೆಯಾಗುತ್ತದೆ. ಇದನ್ನು ಸೇವಿಸುವುದರಿಂದ ಅತಿಸಾರ, ನಾಲಿಗೆ ಊತ, ಚರ್ಮದ ಕಿರಿಕಿರಿಯಂತಹ ಸಮಸ್ಯೆಗಳಿಂದ ಸಹ ಪರಿಹಾರ ದೊರೆಯುತ್ತದೆ.

 

ಏಲಕ್ಕಿ ನೀರನ್ನು ತಯಾರಿಸಲು, ಒಂದು ಲೀಟರ್ ನೀರನ್ನು ತೆಗೆದುಕೊಂಡು ಅದರಲ್ಲಿ 5-6 ಏಲಕ್ಕಿಗಳನ್ನು ಸೇರಿಸಿ. ಈ ನೀರನ್ನು ಇಡೀ ರಾತ್ರಿ ನೆನೆಸಿಡಿ. ಮರುದಿನ ಬೆಳಿಗ್ಗೆ, ಈ ನೀರನ್ನು ಕುದಿಸಿ ದಿನಕ್ಕೆ ಎರಡರಿಂದ ಮೂರು ಬಾರಿಯಂತೆ ಕುಡಿಯಿರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಂಪೂರ್ಣ ನಿಯಂತ್ರಣದಲ್ಲಿಡುತ್ತದೆ.

 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ZEE NEWS ಅದನ್ನು ಖಚಿತಪಡಿಸುವುದಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link