Ricardo Kaka-Caroline Celico Devorce: `ಆತ ಅವಶ್ಯಕತೆಗಿಂತ ಹೆಚ್ಚು....` ವಿಚ್ಛೇದನೆಯ 9 ವರ್ಷಗಳ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ದಿಗ್ಗಜ ಫುಟ್ಬಾಲ್ ಆಟಗಾರನ ಮಾಜಿ ಪತ್ನಿ!
ವಿವಾಹ: ಕಾಕಾ 2005 ರಲ್ಲಿ ಕ್ಯಾರೊಲಿನ್ ಸೆಲಿಕೊ ಅವರನ್ನು ವಿವಾಹವಾಗಿದ್ದರು. ಇಬ್ಬರೂ ಬಾಲ್ಯದಿಂದಲೂ ಪರಸ್ಪರ ಅರಿತುಕೊಂಡು ಸ್ನೇಹಿತರಾಗಿದ್ದರು. ಕಾಕಾ ಮತ್ತು ಸೆಲಿಕೊ ಅವರನ್ನು ಪರಿಪೂರ್ಣ ದಂಪತಿಗಳು ಎಂದು ಕರೆಯಲಾಗುತ್ತಿತ್ತು. ಇವರಿಬ್ಬರು 2015ರಲ್ಲಿ ಪರಸ್ಪರ ಬೇರ್ಪಟ್ಟಿದ್ದಾರೆ. ಇದನ್ನು ಕೇಳಿ ಎಲ್ಲರೂ ನಿಬ್ಬೆರಗಾಗಿದ್ದರು. ಕಾಕಾ ಮತ್ತು ಸೆಲಿಕೊ ಅವರ ವಿವಾಹವು 10 ವರ್ಷಗಳ ಕಾಲ ಮುಂದುವರೆದಿತ್ತು.
ವಿಚ್ಛೇದನೆಯ ಕಾರಣ ಹೇಳಿಕೊಂಡ ಸೆಲಿಕೋ: ಕಾಕಾ ಅವರ ಮಾಜಿ ಪತ್ನಿ ಸೆಲಿಕೊ 9 ವರ್ಷಗಳ ನಂತರ ವಿಚ್ಛೇದನದ ಕಾರಣವನ್ನು ಬಹಿರಂಗಪಡಿಸಿದ್ದಾಳೆ. ಸೂಪರ್‌ಸ್ಟಾರ್ ಫುಟ್‌ಬಾಲ್ ಆಟಗಾರನಿಂದ ವಿಚ್ಛೇದನೆ ಪಡೆಯಲು ಕಾಕಾ ಪರಿಪೂರ್ಣ ಪ್ರಾಮಾಣಿಕತೆಯೇ ಕಾರಣ ಎಂದಿದ್ದಾಳೆ. ಉಭಯರಿಗೆ ಇಬ್ಬರು ಮಕ್ಕಳಿದ್ದರೂ ಅವಳಿಗೆ ನೆಮ್ಮದಿ ಇರಲಿಲ್ಲ. ಯಾವುದೋ ಒಂದು ವಿಷಯದ ಕೊರತೆ ಇದೆ ಅನಿಸುತ್ತಿತ್ತು ಎಂದು ಸೇಲಿಕೋ ಹೇಳಿದ್ದಾರೆ.
'ಕಾಕಾ ನನ್ನ ಪಾಲಿಗೆ ತುಂಬಾ ಪರಿಪೂರ್ಣರಾಗಿದ್ದರು': ಈ ಕುರಿತು ಮುಂದುವರೆದು ಹೇಳಿಕೊಂಡ ಸೇಲಿಕೊ, “ಕಾಕಾ ನನಗೆ ಎಂದಿಗೂ ಮೋಸ ಮಾಡಲಿಲ್ಲ. ಅವರು ನನ್ನನ್ನು ಚೆನ್ನಾಗಿ ನಡೆಸಿಕೊಂಡರು. ಅವರು ನನಗೆ ಅದ್ಭುತ ಕುಟುಂಬವನ್ನು ನೀಡಿದರು, ಆದರೆ ನಾನು ಸಂತೋಷವಾಗಿರಲಿಲ್ಲ, ಏನೋ ಕೊರತೆ ಇದೆ ಅನಿಸುತ್ತಿತ್ತು. ಸಮಸ್ಯೆಯೆಂದರೆ ಆತ ನನ್ನ ಪಾಲಿಗೆ ತುಂಬಾ ಪರಿಪೂರ್ಣನಾಗಿದ್ದ.
ಎರಡನೇ ಬಾರಿ ವಿವಾಹವಾದ ಸೇಲಿಕೊ: ಸೆಲಿಕೊ, 36, ಎಡ್ವರ್ಡೊ ಸ್ಕಾರ್ಪಾ ಜೂಲಿಯೊ ಅವರನ್ನು 2021 ರಲ್ಲಿ ವಿವಾಹವಾಗಿದ್ದಾಳೆ. ಸೆಲಿಕೊ ಮೋಟಾರ್‌ಸೈಕ್ಲಿಸ್ಟ್ ಎಡ್ವರ್ಡೊ ಸ್ಕಾರ್ಪಾ ಅವರೊಂದಿಗೆ ಮೂರನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ.
ಕಾಕಾ ಕೂಡ ತನ್ನ ಜೀವನದಲ್ಲಿ ಮುಂದಕ್ಕೆ ಸಾಗಿದ್ದಾರೆ: ಅಷ್ಟೇ ಯಾಕೆ ಇಂದು ಕಾಕಾ ಕೂಡ ತನ್ನ ಜೀವನದಲ್ಲಿ ಮುಂದಕ್ಕೆ ಸಾಗಿ, ಕೆರೊಲಿನಾ ಡಯಾಸ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ 2019 ರಲ್ಲಿ ವಿವಾಹವಾದರು. ಕಾಕಾ ಮತ್ತು ಡಯಾಸ್‌ಗೆ ಇಬ್ಬರು ಮಕ್ಕಳಿದ್ದಾರೆ. ಬ್ರೆಜಿಲ್‌ನಿಂದ ಬಂದಿರುವ ಕಾಕಾ, ಕ್ಲಬ್ ಮಟ್ಟದಲ್ಲಿ ಸಾವೊ ಪಾಲೊ (ಬ್ರೆಜಿಲ್), ಎಸಿ ಮಿಲನ್ (ಇಟಲಿ), ರಿಯಲ್ ಮ್ಯಾಡ್ರಿಡ್ (ಸ್ಪೇನ್) ಮತ್ತು ಒರ್ಲ್ಯಾಂಡೊ ಸಿಟಿ (ಅಮೆರಿಕಾ) ತಂಡಗಳನ್ನು ಪ್ರತಿನಿಧಿಸಿದ್ದರು.