ಬಿಗ್‌ಬಾಸ್‌ ಬಾಸ್‌ ಕಾರ್ಯಕ್ರಮದ ವಿರುದ್ಧ ಪ್ರಕರಣ ದಾಖಲು! ನಿಂತೇ ಹೋಗುತ್ತಾ ಕನ್ನಡಿಗರ ಫೇವರೆಟ್‌ ರಿಯಾಲಿಟಿ ಶೋ?

Sun, 06 Oct 2024-7:20 am,

BBK: ಬಿಗ್‌ಬಾಸ್‌ ಶುರುವಾದಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಸದ್ದು ಮಾಡುತ್ತಲೇ ಇದೆ. ಕಾರ್ಯಕ್ರಮ ಶುರುವಾಗಿ ಇನ್ನೂ ಒಂದು ವಾರ ಕೂಡ ಪೂರ್ತಿಯಾಗಿಲ್ಲ, ಅಷ್ಟರಲ್ಲೆ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಸಂಕಷ್ಟ ಒಂದು ಎದುರಾಗಿದೆ.  

‘ಬಿಗ್ ಬಾಸ್’ ಸೀಸನ್‌ 11 ಬಹಳ ಹುಮ್ಮಸ್ಸಿನ್ನಿಂದ ಶುರವಾಗಿತ್ತು, ಆದರೆ ಇದೀಗ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಕುರಿತು ಕೇಳಿಬಂದಿದೆ.  

ಈ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಮನವ ಹಕ್ಕುಗಳು ಉಲ್ಲಂಘನೆಯಾಗುತ್ತಿರುವುದು ಕಂಡುಬಂದಿದೆ, ಇದೇ ಕಾರಣದಿಂದ ತಕ್ಷಣ ಕಾರ್ಯಕ್ರಮವನ್ನು ರದ್ದು ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ದೂರುದಾಖಲಿಸಿದ್ದಾರೆ.   

ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು, ಅದರಲ್ಲಿ ಒಂದು ಗುಂಪನ್ನು ಸ್ವರ್ಗ ನಿವಾಸಿ ಹಾಗೂ ಮತ್ತೊಂದು ಗುಂಪನ್ನು ನರಕ ನಿವಾಸಿಗಳು ಎಂದು ವಿಂಗಡಿಸಲಾಗಿತ್ತು.  

ಇದೀಗ ಈ ರೀತಿ ಮಾಡಿರುವುದೇ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಸಂಕಷ್ಟವನ್ನುಂಟು ಮಾಡಿದೆ. ನರಕ ನಿವಾಸಿಗಳು ಎಂಬ ಹೆಸರಿನಲ್ಲಿ ಸ್ಪರ್ದಿಗಳನ್ನು ವಿಂಗಡಿಸಿ, ಅವರಿಗೆ ಸರಿಯಾದ ಆಹಾರ ನೀಡದೆ ಹಿಂಸೆ ನೀಡಲಾಗುತ್ತಿದೆ ಎಂದು ಮಾನವ ಹಕ್ಕುಗಳ ಆಯೋಗ ಪ್ರಕರಣ ದೂರು ದಾಖಲಿಸಿಕೊಂಡಿದೆ.   

ರಾಜ್ಯದಲ್ಲಿ ಹಲವರು ಈ ಕಾರ್ಯಕ್ರಮವನ್ನು ನೋಡುತ್ತಾರೆ, ವಿವಿಧ ಕ್ಷೇತ್ರಗಲಲ್ಲಿ ಸಾದನೆ ಮಾಡಿರುವ ವ್ಯಕ್ತಿಗಳನ್ನು ಬಿಗ್‌ಬಾಸ್‌ ಟಾಸ್ಕ್‌ನ ಹೆಸರಿನಲ್ಲಿ ಕೂಡಿ ಹಾಕಿ ಸರಿಯಾದ ಆಹಾರ ನೀಡದೆ ಹಿಂಸೆ ನೀಡುತ್ತಿದ್ದಾರೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಸ್ಪರ್ಧಿಗಳಿಗೆ ಆಟದ ಹೆಸರಿನಲ್ಲಿ ಹಿಂಸೆ ನೀಡುತ್ತಿದ್ದಾರೆ, ಚಿತ್ರಹಿಂಸೆ ಹಾಗೂ ಕ್ರೌರ್ಯ ಆಟದ ಹೆಸರನಿಲ್ಲಿ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿದೆ, ಇದೇ ಕಾರಣದಿಂದಾಗಿ ಕಾರ್ಯಕ್ರಮವನ್ನು ತಕ್ಷನವೇ ನಿಲ್ಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಮಾನವ ಹಕ್ಕುಗಳ ಆಯೋಗದ ಬಲಿ ದೂರು ದಾಖಲಿಸಿದ್ದಾರೆ.   

ಇದೀಗ ಮಾನವ ಹಕ್ಕುಗಳ ಆಯೋಗ ಕೇಸ್ ನಂ. 4044/10/31/2024-V ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದೆ ನಡೆಯುವ ಬೆಲವಣಿಗೆಗಳ ಬಗ್ಗೆ ಕಾದು ನೋಡಬೇಕಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link