ಹರಳೆಣ್ಣೆಗೆ ಈ ಎಣ್ಣೆ ಬೆರೆಸಿ ತಲೆಗೆ ಮಸಾಜ್ ಮಾಡಿ: ಬಿಳಿ ಕೂದಲು ಒಂದೇ ವಾರದಲ್ಲಿ ಕಪ್ಪಾಗಿ, ದಪ್ಪವಾಗಿ ಮೊಣಕಾಲುದ್ದ ಬೆಳೆಯುವುದು!
ಹರಳೆಣ್ಣೆ ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮುಖ್ಯವಾಗಿ ಇದು ಕೂದಲು ಉದುರುವಿಕೆಯ ಸಮಸ್ಯೆ ಜೊತೆಗೆ ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕ್ಯಾಸ್ಟರ್ ಆಯಿಲ್‌ನಲ್ಲಿರುವ ಗುಣಲಕ್ಷಣಗಳು ನಿಮ್ಮ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೂದಲಲ್ಲಿರುವ ಫಂಗಲ್, ಇನ್ಫೆಕ್ಷನ್ ಮತ್ತು ಬ್ಯಾಕ್ಟೀರಿಯ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಹರಳೆಣ್ಣೆ ಬಳಸುವುದು ಪ್ರಯೋಜನಕಾರಿಯಾಗಿದೆ. ಇದರ ಜೊತೆ ತೆಂಗಿನೆಣ್ಣೆಯನ್ನು ಸೇರಿಸಿ ಬಳಸಿದರೆ ಲಾಭ ದುಪ್ಪಟ್ಟಾಗುವುದು.
ಹರಳೆಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ನಿಮ್ಮ ತಲೆಗೆ ಚೆನ್ನಾಗಿ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ವಾರಕ್ಕೆ ಎರಡು ಬಾರಿ ಇದನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ಬೆಳಿಗ್ಗೆ ಸೌಮ್ಯವಾದ ಶಾಂಪೂ ಸಹಾಯದಿಂದ ತೊಳೆಯಿರಿ.
ಇದು ಕೂದಲಿಗೆ ಆಳವಾದ ತೇವಾಂಶವನ್ನು ನೀಡುತ್ತದೆ. ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಅಲ್ಲದೇ ಬಿಳಿ ಕೂದಲು ಕ್ರಮೇಣ ಕಪ್ಪಾಗಲು ಆರಂಭಿಸುತ್ತವೆ. ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.