Pulao Recipe: ಹೂಕೋಸು ಬಟಾಣಿ ಪಲಾವ್.. ಬಾಕ್ಸ್‌ಗೆ ಹೇಳಿ ಮಾಡಿದ ಡಿಶ್.!
ಹೂಕೋಸು ಬಟಾಣಿ ಪಲಾವ್ ಗೆ ಬೇಕಾಗುವ ಸಾಮಾಗ್ರಿಗಳು: ಎರಡು ಹೂಕೋಸು, ಎರಡು ಕಪ್ ಬಾಸ್ಮತಿ ಅಕ್ಕಿ, ಒಂದೂವರೆ ಕಪ್ ಸಿಹಿ ದಪ್ಪ ಮೊಸರು, ಎಣ್ಣೆ, ಪಲಾವ್ ಎಲೆ, ದಾಲ್ಚಿನ್ನಿ, ಲವಂಗ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಬಟಾಣಿ, ಕತ್ತರಿಸಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ.
ದಾಲ್ಚಿನ್ನಿ, ಏಲಕ್ಕಿ, ಲವಂಗವನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ರುಬ್ಬಿಕೊಂಡು ಪಲಾವ್ ಮಸಾಲೆ ತಯಾರಿಸಿ.
ಅಕ್ಕಿಯನ್ನು ಸ್ವಚ್ಛವಾಗಿ ತೊಳೆದು 10 ನಿಮಿಷ ನೀರಿನಲ್ಲಿ ನೆನೆಸಿಡಿ. ಬಳಿಕ ನೀರು ಬಸೆದು, ಅಕ್ಕಿಯನ್ನು ಬಾಣಲೆಗೆ ಹಾಕಿ ತುಪ್ಪ ಹಾಕಿ ಹುರಿಯಿರಿ.
ಹೂಕೋಸು ಸಣ್ಣ ತುಂಡುಗಳಾಗಿ ಕತ್ತರಿಸಿ. ಟೊಮೆಟೊವನ್ನು ತುಂಡುಗಳಾಗಿ ಕತ್ತರಿಸಿ. ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ನೀರು ಕುದಿಬಂದ ನಂತರ ಹೂಕೋಸು ಮತ್ತು ಬಟಾಣಿ ಸೇರಿಸಿ. ಅದನ್ನು ಮುಚ್ಚಿ ಹತ್ತು ನಿಮಿಷಗಳ ಕಾಲ ಒಲೆಯ ಮೇಲೆ ಇರಿಸಿ. ಬಳಿಕ ಗ್ಯಾಸ್ ಆಫ್ ಮಾಡಿ.
ಪ್ರೆಶರ್ ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ತಯಾರಿಸಿಟ್ಟ ಮಸಾಲೆ ಹಾಕಿ, ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಸ್ವಲ್ಪ ಹೊತ್ತು ಕಾದ ನಂತರ ಟೊಮೆಟೊ ಚೂರುಗಳನ್ನು ಹಾಕಿ ಪೇಸ್ಟ್ ಆಗುವವರೆಗೆ ಬೆರೆಸಿ.
ಮೊಸರು ಮತ್ತು ಎರಡು ಕಪ್ ನೀರು ಸುರಿಯಿರಿ. ನೀರು ಕುದಿಯಲು ಪ್ರಾರಂಭಿಸಿದ ನಂತರ ಉಪ್ಪು, ಹೂಕೋಸು, ಬಟಾಣಿ ಮತ್ತು ಅಕ್ಕಿ ಸೇರಿಸಿ. ಉರಿ ಕಡಿಮೆ ಮಾಡಿ ಮುಚ್ಚಿ ಹತ್ತು ನಿಮಿಷ ಬೇಯಿಸಿ. ಬಳಿಕ ಉಸಿರು ಇಳಿದ ಮೇಲೆ ಕೊತ್ತಂಬರಿ ಸೊಪ್ಪು, ತುರಿದ ಕಾಯಿ ಹಾಕಿ ಎರಡು ಚಮಚ ತುಪ್ಪ ಹಾಕಿ ನಿಧಾನವಾಗಿ ಕಲಸಿ. ಈಗ ಹೂಕೋಸು ಬಟಾಣಿ ಪವಾಲ್ ಸವಿಯಲು ಸಿದ್ಧ.